International

ವಿಶ್ವ ರೋಟರಿ ದಿನಾಚರಣೆ : ಮಂಗಳೂರು ಸೆಂಟ್ರಲ್ ಸಂಸ್ಥೆ ವತಿಯಿಂದ 8 ಸಾಧಕರಿಗೆ ರೋಟರಿ ಜೀವಮಾನ ಪ್ರಶಸ್ತಿ ಪ್ರಧಾನ

Pinterest LinkedIn Tumblr

ಮಂಗಳೂರ ಫೆ. 24 : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ರೋಟರಿ ವಿಶ್ವ ದಿನಾಚರಣೆಯನ್ನು ತಾ.23.02.2024 ರಂದು ನಗರದ ಹೋಟೆಲ್ ಮೋತಿ ಮಹಲ್ ಸಭಾಂಗಣದಲ್ಲಿ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ರೋ| ರಾಜೇಶ್ ಶೆಟ್ಟಿಯವರು ಸ್ವಾಗತಿಸಿ ರೋಟರಿ ವಿಶ್ವ ದಿನಾಚರಣೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿ 8 ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು. ರೋ| ಡಾ| ದೇವದಾಸ್ ರೈ ಯವರು ರೋಟರಿ ಸಂಸ್ಥೆಯ ಸ್ಥಾಪನಾ ದಿನಾಚರಣೆ ಹಾಗೂ ಸಂಸ್ಥೆಯ 119 ವರ್ಷಗಳ ಬೆಳವಣಿಗೆ ಮತ್ತು ವಿಶ್ವಕ್ಕೆ ನೀಡಿದ ಮಹತ್ತರ ಕೊಡುಗೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ೮ ಸದಸ್ಯರನ್ನು ಅವರು ತಮ್ಮ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯನ್ನು ಪರಿಗಣಿಸಿ ಜೀವಮಾನ ಸಾಧನೆ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು. 01. ನಿತಿನ್ ಶೆಟ್ಟಿ (ಲೆಕ್ಕ ಪರಿಶೋಧಕರು), 02. ಕೆ.ಎಂ. ಹೆಗ್ಡೆ (ಜೀವ ವಿಮಾ ಸಲಹೆಗಾರರು), 03. ನಾಗೇಂದ್ರ (ಸಂಗೀತ ಕಲೆ), 04. ರಾಜ್‌ಗೋಪಾಲ್ ರೈ (ರಾಜಕೀಯ), 05. ಮಂಜುನಾಥ್ ರೇವಣ್ಣಕ್ಕರ್ (ಶಿಕ್ಷಣ), 06. ಎಸ್.ಎಸ್. ನಾಯಕ್ (ದೃಶ್ಯ ಮಾಧ್ಯಮ),07. ಡಾ| ಚಂದ್ರಕಾಂತ್ ಭಟ್ (ಆರ್ಥಿಕ ಸಲಹೆಗಾರ) 08. ರೊ| ಡಾ| ದೇವದಾಸ್ ರೈ (ವೈದ್ಯಕೀಯ ಸೇವೆ).

ಕಾರ್ಯದರ್ಶಿ ರವಿ ಜಲನ್ ರವರು ರೋಟರಿ ಸಂಸ್ಥೆಯ 119 ವರ್ಷದ ಇತಿಹಾಸವನ್ನು ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ರೋ| ಡಾ| ದೇವದಾಸ್ ರೈ ಯವರು ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ ಸಮುದಾಯ ಸೇವೆಗೆ ಯು.ಎಸ್. ಡಾಲರ್1350 (ರೂ.1,10,000) ನ್ನು ತಮ್ಮ ವೈಯುಕ್ತಿಕ ದೇಣಿಗೆಯಾಗಿ ನೀಡಿದರು.

ನಗರದ ಮಿಲಾಗ್ರಿಸ್ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಸುದೇಶ್ ಶೇಟ್ ಹಾಗೂ ಅಕ್ಷಯ್ ಶೇಟ್ ರವರಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ನಿಯೋಜಿತ ಅಧ್ಯಕ್ಷ ಬ್ರಿಯಾನ್ ಪಿಂಟೋ ವಂದಿಸಿದರು.

Comments are closed.