ಆರೋಗ್ಯ

ಪ್ರತಿ ದಿನ ಸೆಕ್ಸ್‌ಮಾಡುದರಿಂದ ಮಹಿಳೆಯರ ತೂಕ ಹೆಚ್ಚುತ್ತಾ? ಇಲ್ಲಿದೆ ಉತ್ತರ….

Pinterest LinkedIn Tumblr

ಒಬ್ಬ ಮಹಿಳೆ ನಿಯತವಾಗಿ ಲೈಂಗಿಕ ಸಂಪರ್ಕಕ್ಕೆ ಒಳಗಾದಾಗ ಆಕೆಯ ತೂಕ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ಬಹುತೇಕರಲ್ಲಿದೆ. ಅದರಲ್ಲೂ ಆಕೆಯ ಸ್ತನ ಹಾಗೂ ನಿತಂಬಗಳ ಗಾತ್ರ ಹೆಚ್ಚಾಗುತ್ತದೆ ಎನ್ನಲಾಗುತ್ತಿದೆ. ಆದರೆ ಇದೆಷ್ಟರ ಮಟ್ಟಿಗೆ ನಿಜ? ನಿಮ್ಮನ್ನೂ ಇದೇ ಪ್ರಶ್ನೆ ಕಾಡುತ್ತಿದೆಯಾ? ಹಾಗಾದ್ರೆ ಇದನ್ನು ಓದಿ.

ಸ್ತ್ರೀರೋಗತಜ್ಞರೊಬ್ಬರ ಪ್ರಕಾರ ನಿಯತ ಲೈಂಗಿಕ ಸಂಪರ್ಕದಿಂದ ಮಹಿಳೆಯ ತೂಕ ಹೆಚ್ಚುತ್ತದೆ ಎಂಬುದು ಪ್ರಖ್ಯಾತವಾಗಿರುವ ತಪ್ಪು ಕಲ್ಪನೆಯಂತೆ. ಇದೊಂದು ರೀತಿಯಲ್ಲಿ ತಿರುಳಿಲ್ಲದ ಕಟ್ಟುಕತೆ ಎನ್ನುತ್ತಾರೆ ತಜ್ಞ ವೈದ್ಯರು. ನಿಯತ ಮಿಲನದಿಂದ ಸ್ತನಗಳ ಹಾಗೂ ನಿತಂಬಗಳ ಗಾತ್ರ ಹೆಚ್ಚುತ್ತದೆ ಅಥವಾ ಮಹಿಳೆ ದಪ್ಪಗಾಗಿ ಬಿಡುತ್ತಾಳೆ ಎನ್ನುವುದು ತಪ್ಪು ಎಂಬುವುದು ಅವರ ವಾದವಾಗಿದೆ.

ಮಹಿಳೆಯ ಸ್ತನಗಳಲ್ಲಿ ಪುರುಷನ ಆಯಸ್ಸಿನ ಗುಟ್ಟು!

ಮಿಲನದ ವೇಳೆ ಬಿಡುಗಡೆಯಾಗುವ ಪುರುಷನ ವೀರ್ಯ ಮಹಿಳೆಯ ದೇಹದೊಳಕ್ಕೆ ಸೇರಿ ರಕ್ತದಲ್ಲಿ ಮಿಶ್ರಣಗೊಂಡರೂ ತೂಕ ಹೆಚ್ಚುವ ಸಾಧ್ಯತೆಯಿಲ್ಲ. ಯಾಕೆಂದರೆ 2ರಿಂದ 3 ಎಮ್‌ಎಲ್‌ಗಳಷ್ಟು ವೀರ್ಯದಲ್ಲಿ ಕೇವಲ 15ರಷ್ಟು ಮಾತ್ರ ಕ್ಯಾಲರಿ ಇರುತ್ತದೆಯಂತೆ.

ಇನ್ನು ಕೆಲ ಅಧ್ಯಯನಗಳು ಮದುವೆಯ ನಂತರ ದಂಪತಿಯ ತೂಕ ಹೆಚ್ಚಾಗುತ್ತದೆ ಎಂದು ಹೇಳುತ್ತವೆ. ಮಹಿಳೆಯಷ್ಟೇ ಅಲ್ಲದೆ ಪುರುಷನ ತೂಕವೂ ಹೆಚ್ಚಾಗುತ್ತದೆ ಎಂದು ಈ ಅನಿಶ್ಚಿತ ಅಧ್ಯಯನಗಳು ಹೇಳಿವೆ. ಆದರೆ ಇದು ಸಹ ನಿಜವಲ್ಲ ಎನ್ನುತ್ತಾರೆ ತಜ್ಞರು. ಏಕೆಂದರೆ ಮದುವೆಯ ನಂತರ ಸೆಕ್ಸ್‌ಗೂ ತೂಕ ಹೆಚ್ಚಾಗುವುದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲವಂತೆ. ಸಾಮಾನ್ಯವಾಗಿ ಮದುವೆಯ ನಂತರ ದಂಪತಿಗಳಲ್ಲಿ ಭದ್ರತೆಯ ಭಾವ ಮೂಡುತ್ತದೆ ಹಾಗೂ ಮೊದಲಿಗಿಂತ ಹೆಚ್ಚಾಗಿ ಆಹಾರ ಸೇವಿಸುವುದರಿಂದ ತೂಕದಲ್ಲಿ ವ್ಯತ್ಯಾಸವಾಗುತ್ತದೆಯೇ ವಿನಃ ಸೆಕ್ಸ್‌ನಿಂದಲ್ಲ ಎಂಬುವುದು ತಜ್ಞರ ಅಭಿಮತ.

ಮದುವೆಯ ನಂತರ ಅತಿಯಾದ ತೂಕದಿಂದ ಮುಕ್ತರಾಗಲು ಇರುವುದು ಒಂದೇ ಮಾರ್ಗ. ನಿಯಮಿತ ವ್ಯಾಯಾಮ ಮತ್ತು ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಪಾಲಿಸಿದಲ್ಲಿ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು.

Comments are closed.