ವಿಶಿಷ್ಟ

ದೈಹಿಕ ಅಸಮರ್ಥ ವ್ಯಕ್ತಿಯೀಗ ಬಂಗಾಳದ ‘ಮಾದರಿ ಪುರುಷ’

Pinterest LinkedIn Tumblr

ಕೋಲ್ಕತ್ತಾ: ಕಾಯಕವೇ ಕೈಲಾಸ ಎಂಬಂತೆ ತಾವು ಮಾಡುವ ಕೆಲಸದ ಮೇಲೆ ನಂಬಿಕೆ, ಅಚಲ ಆತ್ಮವಿಶ್ವಾಸವಿದ್ದರೆ ಈ ಭೂಮಿಯಲ್ಲಿ ಸಾಧಿಸಲು ಸಾಧ್ಯವಾಗದೇ ಇರುವುದು ಏನು ಇಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ನಾವಿಂದು ತಮ್ಮದೇ ಸಾಧನೆಯಿಂದ ಇತರರಿಗೆ ಮಾದರಿ ವ್ಯಕ್ತಿಯಾಗಿರುವ ದೈಹಿಕ ಅಸಮರ್ಥ ವ್ಯಕ್ತಿಯೊಬ್ಬರ ಬಗ್ಗೆ ತಿಳಿಸಲಿದ್ದೇವೆ.

ಅವರೇ, ಬಾಸಂ ಸೋನರ್. ಹುಟ್ಟಿನಿಂದಲೇ ಎಲ್ಲರಂತೆ ಸಾಮಾನ್ಯ ವ್ಯಕ್ತಿಯಾಗಿ ಜನಿಸಿದ ಬಾಸಂ, ಸಂಸ್ಥೆಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ 2005ರಲ್ಲಿ ಎತ್ತರ ಜಿಗಿತ ಸ್ಪರ್ಧೆಯ ವೇಳೆ ಬೆನ್ನುಹುರಿಗೆ ಗಂಭೀರವಾದ ಗಾಯ ಮಾಡಿಕೊಂಡರು. ತಕ್ಷಣವೇ ಚಿಕಿತ್ಸೆ ಒದಗಿಸಿದರೂ ಫಲಕಾರಿಯಾಗಲಿಲ್ಲ. ಪರಿಣಾಮ ಗಾಯ ಮತ್ತೆ ಉಲ್ಬಣಿಸಿತ್ತು. ಇದರಿಂದಾಗಿ ಕೈ,ಕಾಲುಗಳು ಪಾರ್ಶ್ಚವಾಯುಗೊಳಗಾಯಿತು.

ಇದರಿಂದ ತೀವ್ರ ಮನನೊಂದ ಬಾಸಂ ಆತ್ಮಹತ್ಮೆಗೂ ಯತ್ನಿಸಿದ. ಬಾಸಂ ಕರುಣಾಜನಕ ಕಥೆ ಕೇಳಿದ ಸ್ಥಳೀಯ ಶಾಸಕ ಅಲಿಪುರ್ದಾರ್ ದಶಾರತ್ ಟಿರ್ಕೆ ಚಿಕಿತ್ಸೆಗಾಗಿ ಧಾವಿಸಿ ಬಂದರು. ಬೆನ್ನುಹುರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಸುಮಾರು ಎಂಟು ತಿಂಗಳ ಸತತ ಚಿಕಿತ್ಸೆಯ ಬಳಿಕ ಸಹಜ ಸ್ಥಿತಿಗೆ ಬರಲಾಯಿತು. ಆದರೆ ಕಾಲುಗಳು ಮಾತ್ರ ನಿಶ್ಚಲವಾಯಿತು.

ಇಲ್ಲಿಂದ ಬಳಿಕ ಜೀವನದಲ್ಲಿ ಸೋಲೊಪ್ಪಿಕೊಳ್ಳಲು ತಯಾರಾಗದ ಬಾಸಂ ಲಾಟರಿ ಮಾರಾಟವನ್ನು ಆರಂಭಿಸಿದರು. 12 ವರ್ಷಗಳಿಂದ ಸಂಪಾದಿಸಿದ 35,000 ರೂ.ಗಳನ್ನು ಅಂಕವಿಕರಿಗಾಗಿ ತಾವೇ ಆರಂಭಿಸಿದ ಸಹಾಯನಿಧಿಗೆ ದೇಣಿಗೆ ನೀಡಿದರು. ಅಲ್ಲದೆ ಅಂಕವಿಕಲ ವ್ಯಕ್ತಿಗಳಿಗಳಿಗಾಗಿ ಟ್ರೈಬಲ್ ಟೀ ಗಾರ್ಡನ್ ಪ್ರದೇಶದಲ್ಲಿ ಶಿಕ್ಷಣವನ್ನು ಆರಂಭಿಸಿದರು. ಮಗದೊಮ್ಮೆ ಲಾಟರಿ ಲಕ್ಕಿ ಡ್ರಾದಲ್ಲಿ 60,000 ರೂ.ಗಳನ್ನು ಒಟ್ಟುಗೂಡಿಸಿ ಮೂರು ಕಂಪ್ಯೂಟರ್‌ಗಳನ್ನು ಖರೀದಿಸಿದರು. ಬಳಿಕ ದೈಹಿಕ ಅಸಮರ್ಥರಿಗೆ ಗಣಕಯಂತ್ರದ ಶಿಕ್ಷಣವನ್ನು ಒದಗಿಸಲು ಆರಂಭಿಸಿದರು.

Comments are closed.