ಆರೋಗ್ಯ

ಕೆಮ್ಮು – ಶೀತವನ್ನು ನಿವಾರಣೆ ಮಾಡಲು ಹೀಗೆ ಮಾಡಿ…

Pinterest LinkedIn Tumblr

cold

ಚಳಿಗಾಲ ಆರಂಭವಾಗುತ್ತಿರುವಂತೆ ಶೀತ, ಕೆಮ್ಮು ಸಾಮಾನ್ಯವಾಗಿ ಪ್ರತಿಯೊಬ್ಬರನ್ನೂ ಕಾಡಲು ಆರಂಭಿಸುತ್ತದೆ. ಒಂದೆರಡು ದಿನದಲ್ಲಿ ಇದು ಕಡಿಮೆಯಾಗದೆ ಇದ್ದರೆ, ನಾವು ವೈದ್ಯರನ್ನು ಭೇಟಿಯಾಗುತ್ತೇವೆ. ಆದರೆ ಮನೆಯಲ್ಲಿ ಮಾಡುವಂತಹ ಕೆಲವೊಂದು ಮದ್ದುಗಳು ಇಂತಹ ಸಾಮಾನ್ಯ ಕೆಮ್ಮು ಹಾಗೂ ಶೀತವನ್ನು ಗುಣಪಡಿಸುವುದು. ಬಿಸಿಹಾಲಿಗೆ ಅರಿಶಿಣ ಹಾಗೂ ಕರಿಮೆಣಸಿನ ಪುಡಿಯನ್ನು ಹಾಕಿ ಕುಡಿಯುವುದರಿಂದ ಕೆಮ್ಮು ಹಾಗೂ ಶೀತವನ್ನು ನಿವಾರಣೆ ಮಾಡಬಹುದು ಎಂದು ನಾವೆಲ್ಲರೂ ಕೇಳಿದ್ದೇವೆ, 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!.

ಮನೆಮದ್ದು ತಯಾರಿಸುವ ಹಾಗೂ ಬಳಸುವ ವಿಧಾನ
ಕೆಮ್ಮು ಹಾಗೂ ಶೀತಕ್ಕೆ ಪರಿಹಾರ ನೀಡುವಂತಹ ಈ ಮನೆಮದ್ದನ್ನು ತಯಾರಿಸಲು ಒಂದು ಲೋಟ ಹಾಲಿಗೆ ಅರ್ಧ ಚಮಚ ಕರಿಮೆಣಸಿನ ಪುಡಿ ಮತ್ತು ಎರಡು ಚಮಚ ಅರಿಶಿಣವನ್ನು ಹಾಕಿ ಸರಿಯಾಗಿ ಕಲಸಿಕೊಳ್ಳಿ. ಈ ಮದ್ದನ್ನು ದಿನದಲ್ಲಿ ಎರಡು ಸಲ ಕುಡಿದರೆ ಪರಿಹಾರ ಕಾಣಬಹುದು. ಜ್ವರ ಶೀತಕ್ಕೆ ಸಿದ್ಧೌಷಧ ಬೆಳ್ಳುಳ್ಳಿ, ಕರಿಮೆಣಸು ರಸಂ.

ಮನೆಮದ್ದು ಯಾವ ರೀತಿ ಕೆಲಸ ಮಾಡುವುದು?
ಬಿಸಿ ಹಾಲು, ಕರಿಮೆಣಸಿನ ಪುಡಿ ಮತ್ತು ಅರಿಶಿಣದ ಮಿಶ್ರಣವು ಗಂಟಲನ್ನು ಶಮನಗೊಳಿಸಿ ಕೆಮ್ಮು ಹಾಗೂ ಶೀತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಬಿಸಿ ಹಾಲು ಗಂಟಲಿನಲ್ಲಿರುವಂತಹ ಕಫವನ್ನು ದೂರಮಾಡುತ್ತದೆ. ಇದರಿಂದ ಕೆಮ್ಮು ಹಾಗೂ ಗಂಟಲಿನಲ್ಲಿ ಉಂಟಾಗುವಂತಹ ಕಿರಿಕಿರಿ ಕಡಿಮೆಯಾಗಿ ಪರಿಹಾರ ಸಿಗುತ್ತದೆ.

ಅರಿಶಿಣ ಮತ್ತು ಕರಿಮೆಣಸಿನಲ್ಲಿ ಉರಿಯೂತ ಶಮನಕಾರಿ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವ ಕಾರಣದಿಂದ ಬ್ಯಾಕ್ಟೀರಿಯಾದಿಂದ ಆಗುವಂತಹ ಸೋಂಕನ್ನು ನಿವಾರಣೆ ಮಾಡುತ್ತದೆ. ಇದರಿಂದ ಸಾಮಾನ್ಯ ಶೀತ ಹಾಗೂ ಕೆಮ್ಮನ್ನು ಶಮನ ಮಾಡುತ್ತದೆ. ಮುಂದಿನ ಸಲ ನಿಮಗೆ ಕೆಮ್ಮು ಹಾಗೂ ಶೀತ ಕಾಣಿಸಿಕೊಂಡರೆ, ಅರಿಶಿಣ, ಕರಿಮೆಣಸಿನ ಪುಡಿ ಹಾಕಿ ಬಿಸಿಹಾಲು ಕುಡಿಯಿರಿ. ಇದು ಖಂಡಿತವಾಗಿಯೂ ನಿಮ್ಮ ಶೀತ ಹಾಗೂ ಕೆಮ್ಮನ್ನು ನಿವಾರಿಸುವುದು.

Comments are closed.