ಆರೋಗ್ಯ

ಅರಿಶಿನದ ಆರೋಗ್ಯಕರ ಗುಣಗಳನ್ನು ನೀವು ತಿಳಿದುಕೊಳ್ಳಲೇಬೇಕು…

Pinterest LinkedIn Tumblr

arasina-2

ಭಾರತೀಯರು ಹಿಂದಿನ ಕಾಲದಿಂದಲೂ ಅರಿಶಿವನ್ನು ತುಂಬಾ ಪವಿತ್ರವೆಂದು ನಂಬಿಕೊಂಡು ಬಂದಿದ್ದಾರೆ. ಯಾವುದೇ ಶುಭಕಾರ್ಯವಿದ್ದರೂ ಅರಿಶಿನವನ್ನು ಬಳಸಲಾಗುತ್ತದೆ. ಅದರಲ್ಲೂ ಅರಿಶಿನವಿಲ್ಲದೆ ಶುಭಕಾರ್ಯಗಳು ನಡೆಯುವುದೇ ಇಲ್ಲವೆನ್ನಬಹುದು…! ಅಷ್ಟರ ಮಟ್ಟಿಗೆ ಅರಿಶಿನ ಎಲ್ಲರ ಮನೆ ಮಾತಾಗಿದೆ.

ಸಾಂಬಾರ ಪದಾರ್ಥವಾಗಿರುವ ಅರಿಶಿನದಲ್ಲಿ ಹಲವಾರು ಗುಣಗಳು ಇವೆ. ಇದು ಉರಿಯೂತ ಶಮನಕಾರಿ. ಬ್ಯಾಕ್ಟೀರಿಯಾ ವಿರೋಧಿ, ಫಂಗಲ್ ವಿರೋಧಿ, ವೈರಲ್ ವಿರೋಧಿವಾಗಿದೆ. ಇದರಲ್ಲಿರುವ ಪ್ರಮುಖ ಪೋಷಕಾಂಶವೆಂದರೆ ಆಹಾರದ ನಾರಿನಾಂಶ, ಪ್ರೋಟೀನ್, ಕ್ಯಾಲ್ಸಿಯಂ, ಸತು, ಕಬ್ಬಿನಾಂಶ, ಮೆಗ್ನಿಶಿಯಂ, ತಾಮ್ರ, ವಿಟಮಿನ್ ಸಿ, ಇ ಮತ್ತು ಕೆ ಇದೆ.

ಅರಿಶಿನವನ್ನು ಹಾಗೆ ಸೇವನೆ ಮಾಡುವುದು ತುಂಬಾ ಕಷ್ಟವಾಗಬಹುದು. ಇದರಿಂದ ಅದನ್ನು ಬೇರೆ ಪದಾರ್ಥಗಳಲ್ಲಿ ಸೇರಿಸಿ ಸೇವನೆ ಮಾಡಬೇಕು. ಅರಿಶಿನವನ್ನು ಹಾಗೆ ಸೇವನೆ ಮಾಡುವುದು ತುಂಬಾ ಕಷ್ಟವಾಗಬಹುದು. ಇದರಿಂದ ಅದನ್ನು ಬೇರೆ ಪದಾರ್ಥಗಳಲ್ಲಿ ಸೇರಿಸಿ ಸೇವನೆ ಮಾಡಬೇಕು. ಅರಿಶಿನವನ್ನು ಯಾವ್ಯಾವ ವಿಧದಿಂದ ಬಳಸಿದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನವು ನಿವಾರಣೆ ಮಾಡಬಹುದು.

ಅರಿಶಿನ ಹಾಲು
ಶೀತ ಹಾಗೂ ಕೆಮ್ಮು ಮತ್ತು ನೋವಿನಿಂದ ಬಳಲಿದಾಗ ಹಿಂದಿನಿಂದಲೂ ಮನೆಯಲ್ಲಿ ನೀಡುತ್ತಿದ್ದ ಮದ್ದೆಂದರೆ ಅದು ಅರಿಶಿನ ಹಾಲು, ಅರ್ಥ ಚಮಚವನ್ನು ಅರಿಶಿನವನ್ನು ಕುದಿಯುತ್ತಿರುವ ಹಾಲಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಹಾಲು ಕುದಿಯುತ್ತಾ ಇರುವಾಗ ಅದಕ್ಕೆ ಅರಿಶಿನ ಹಾಕಿ, ಹಾಲಿಗೆ ಅರಿಶಿನ ಹಾಕಿ ಕುಡಿದರೆ ಕೆಮ್ಮು, ಶೀತ ಕಡಿಮೆಯಾಗುತ್ತದೆ.

ಮೊಡವೆಗಳಿಗೆ
ಅರಿಶಿನವು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ಸ್ವಲ್ಪ ಅರಿಶಿನವನ್ನು ಸ್ವಲ್ಪ ಜೇನುತುಪ್ಪಕ್ಕೆ ಸೇರಿಸಿಕೊಂಡು ಮಿಶ್ರಮ ಮಾಡಿ, ಇದು ಮೊಡವೆಗಳ ಮೇಲೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ, ಒಣಗಿದ ಬಳಿಕ ನೀರಿನಿಂದ ತೊಳೆದು ಒರೆಸಿಕೊಳ್ಳಿ.

ನಿರ್ವಿಷಕಾರಿ ಪಾನೀಯ
ಅರಿಶಿನದ ನೀರನ್ನು ಪ್ರತೀ ದಿನ ಸೇವನೆ ಮಾಡಿದರೆ ಅದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ನಿಂಬೆರಸ, ಜೇನುತುಪ್ಪ, 1/3 ಚಮಚ ಅರಿಶಿನ ಹಾಕಿ ಪಾನೀಯವನ್ನು ತಯಾರಿಸಿಕೊಳ್ಳಿ. ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಿ.

ಫೇಸ್ ಮಾಸ್ಕ್
ಚರ್ಮದ ಕಾಂತಿಯನ್ನು ಹೆಚ್ಚಿಸಲು ಅರಿಶಿನವನ್ನು ಫೇಸ್ ಮಾಸ್ಕ್ ಆಗಿ ಬಳಸಿಕೊಳ್ಳಬಹುದು. ಒಂದು ಚಮಚ ಮೊಸರು, 1/3 ಚಮಚ ಅರಿಶಿನ, 1/2 ಚಮಚ ಅರಿಶಿನ, 1/2 ಚಮಚ ಜೇನುತುಪ್ಪ ಮಿಶ್ರಣ ಮಾಡಿ ಫೇಸ್ ಮಾಸ್ಕ್ ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆದು ಒರೆಸಿಕೊಳ್ಳಿ.

ಬಾಯಿಯ ಅಲ್ಸರ್‌ಗೆ
ಅರಿಶಿನದಿಂದ ಮಾಡಿಕೊಳ್ಳುವಂತಹ ಪೇಸ್ಟ್ ಅನ್ನು ಬಾಯಿಯ ಅಲ್ಸರ್‌ನಿಂದ ಪರಿಹಾರ ಪಡೆಯಲು ಬಳಸಬಹುದು. ಒಂದು ಚಮಚ ನೀರಿಗೆ ಸ್ವಲ್ಪ ಅರಿಶಿನ ಹಾಕಿ, ಅದಕ್ಕೆ ಅರ್ಧ ಚಮಚ ತೆಂಗಿನ ಎಣ್ಣೆ ಸೇರಿಸಿಕೊಳ್ಳಿ. ಬಾಯಿಯಲ್ಲಿರುವ ಗಾಯಕ್ಕೆ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ನೀರಿನಿಂದ ಬಾಯಿ ತೊಳೆಯಿರಿ.

ತೂಕ ಕಳೆದುಕೊಳ್ಳಲು
ತೂಕ ಕಳೆದುಕೊಳ್ಳಲು ಅರಿಶಿನ ತುಂಬಾ ಸಹಕಾರಿ. ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕ್ಕೆ ಅರ್ಧ ಚಮಚ ಅರಿಶಿನ ಮತ್ತು ಅರ್ಧ ಚಮಚ ಶುಂಠಿ ರಸವನ್ನು ಹಾಕಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.

Comments are closed.