Uncategorized

ಟ್ಯಾಕ್ಸಿಗಳ ದುಬಾರಿ ಶುಲ್ಕ ‘ಹಗಲು ದರೋಡೆ’: ಕೇಜ್ರಿವಾಲ್ ಕಿಡಿ

Pinterest LinkedIn Tumblr

Kejriwalನವದೆಹಲಿ (ಪಿಟಿಐ): ಸರ್ಕಾರ ನಿಗದಿ ಪಡಿಸಿದ್ದಕ್ಕಿಂತಲೂ ಹೆಚ್ಚು ದರ ಪಡೆಯುವ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಯ ನಡೆ ‘ಹಗಲು ದರೋಡೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಟೀಕಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್‌ಗಳ ಮೂಲಕ ಕೇಜ್ರಿವಾಲ್ ಅವರು ದುಬಾರಿ ದರ ವಿಧಿಸುವ ಟ್ಯಾಕ್ಸಿ ಸೇವಾ ಸಂಸ್ಥೆಗಳ ಕ್ರಮವನ್ನು ಜರೆದಿದ್ದಾರೆ.
‘ದುಬಾರಿ ದರ ಹಗಲು ದರೋಡೆ. ಯಾವುದೇ ಜಾವಾಬ್ದಾರಿಯುತ್ತ ಸರ್ಕಾರ ಇದಕ್ಕೆಲ್ಲ ಅವಕಾಶ ನೀಡುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೇ, ‘ಲೂಟಿಗೆ ಅವಕಾಶ ನೀಡಿದ್ದರೆ ಸೇವೆ ಒದಗಿಸುವುದಿಲ್ಲ ಎಂದು ಕೆಲವು ಟ್ಯಾಕ್ಸಿಗಳು ಹೇಳುತ್ತಿವೆ. ಇದು ಬಹಿರಂಗ ಬ್ಲ್ಯಾಕ್‌ಮೇಲ್‌. ಸರ್ಕಾರ ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ದುಬಾರಿ ಶುಲ್ಕ, ಡೀಸೆಲ್ ಕಾರುಗಳ ಓಡಾಟ, ಪರವಾನಗಿ/ಬ್ಯಾಡ್ಜ್‌ಗಳಿಲ್ಲದ ಚಾಲಕರು… ಇದರ ಜತೆಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಟ್ಯಾಕ್ಸಿಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಗುಡುಗಿದ್ದಾರೆ.
ಇದೇ ವೇಳೆ, ತಮ್ಮ ಸರ್ಕಾರವು ಜನತೆಗೆ ಪ್ರಮುಖ ಸೇವೆಯನ್ನೊದಗಿಸುವ ಟ್ಯಾಕ್ಸಿ ಸಂಸ್ಥೆಗಳ ವಿರುದ್ಧ ಇಲ್ಲ. ಆದರೆ, ‘ಅವರು ನಿಯಮಗಳನ್ನು ಪಾಲಿಸಬೇಕಾಗುತ್ತದೆ’ ಎಂದಿದ್ದಾರೆ.

Write A Comment