ದುಬೈ: ದುಬೈ ಯುವರಾಜ ಹಾಗೂ ಯುಎಇ ಉಪ ಪ್ರಧಾನಿ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ‘ಫ್ಲೈದುಬೈ’ ಪೈಲಟ್, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಆರೋಗ್ಯ ವಿಚಾರಿಸಿದ್ದಾರೆ.

ಬುಧವಾರ ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದ ಕಾಕ್ಪಿಟ್ನಲ್ಲಿ ಸಹ-ಪೈಲಟ್ನಿಂದ ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಚ್ಚಾರ್ ಅವರು ದುಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಆರೋಗ್ಯ ವಿಚಾರಿಸಿದ ದುಬೈ ಕ್ರೌನ್ ಪ್ರಿನ್ಸ್, ಭಾರತೀಯ ಪೈಲಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವರು ನಮ್ಮ ತಂಡದ ಭಾಗವಾಗಿರುವುದಕ್ಕೆ… ನಮ್ಮ ರಾಷ್ಟ್ರದ ಭಾಗವಾಗಿರುವುದಕ್ಕೆ… ನಮ್ಮಿಂದ ಹಾಗೂ ರಾಷ್ಟ್ರದ ನಾಯಕತ್ವದಿಂದ ಅವರಿಗೆ ಸಂಪೂರ್ಣ ಮೆಚ್ಚುಗೆ ಮತ್ತು ಪ್ರಶಂಸೆ ಸಲ್ಲುತ್ತದೆ. ಹಾಗೂ ಯುಎಇ (UAE) ಪ್ರತಿನಿಧಿಸುವ ಮೌಲ್ಯಗಳ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ… ಇದು ಸಹಾನುಭೂತಿಯ ರಾಷ್ಟ್ರ… ಶಾಂತಿಯ ರಾಷ್ಟ್ರ… ಮತ್ತು ಜೀವಕ್ಕೆ ಬೆಲೆ ನೀಡುವ ರಾಷ್ಟ್ರ,” ಎಂದು ಮಚ್ಚರ್ ಭೇಟಿಯ ಫೋಟೋಗಳನ್ನು ಹಂಚಿಕೊಂಡಿರುವ ಕ್ರೌನ್ ಪ್ರಿನ್ಸ್ ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Comments are closed.