ಗೋವಾ: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಇಂದು ಗುರುವಾರ ಮುಂಜಾನೆ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ.

ಪಣಜಿ ಸಮೀಪದ ಡೋನಾ ಪೌಲಾದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ 75 ವರ್ಷದ ನಟ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು, ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.
45 ನಿಮಿಷಗಳ ನಿರಂತರ ಸಿಪಿಆರ್ ನೀಡಿದರೂ ಪಾಟೇಕರ್ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಇಂದು ನಸುಕಿನ ಜಾವ 5:10ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಪಿಟಿಐ ವರದಿ ಮಾಡಿದೆ.
ಖಡಕ್ ಡೈಲಾಗ್ ಡೆಲಿವರಿ ಹಾಗೂ ಅದ್ಭುತ ಅಭಿನಯದ ಮೂಲಕ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನಾನಾ ಪಾಟೇಕರ್ ಅವರ ಹಠಾತ್ ನಿಧನಕ್ಕೆ ಇಡೀ ಚಿತ್ರರಂಗ, ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ದೇಶಕಂಡ ಶ್ರೇಷ್ಠ ನಟದಲ್ಲಿ ಒಬ್ಬರಾದ ನಾನಾ ಪಾಟೇಕರ್, ಪರಿಂದಾ, ಕ್ರಾಂತಿವೀರ್, ಅಬ್ ತಕ್ ಛಪ್ಪನ್ ಮತ್ತು ವೆಲ್‌ಕಮ್ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಮನೆಮಾತಾಗಿದ್ದಾರೆ. ಕನ್ನಡದ ಸಿನೆಮಾವೊಂದರಲ್ಲೂ ಅವರು ಪಾತ್ರ ಮಾಡಿದ್ದರು.
Comments are closed.