ಪ್ರಮುಖ ವರದಿಗಳು

ಪ್ರಧಾನಿ ಮೋದಿ ತಾಯಿ ಹೀರಾಬೆನ್‌ ಅವರಿಗೆ ನೂರರ ಸಂಭ್ರಮ: ಅಮ್ಮನ ಆಶೀರ್ವಾದ ಪಡೆದ ನರೇಂದ್ರ ಮೋದಿ..!

Pinterest LinkedIn Tumblr

ನವದೆಹಲಿ: ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ಇರಲಿದ್ದಾರೆ. ತಮ್ಮ ತಾಯಿಯ 100ನೇ ಜನ್ಮದಿನವಾದ ಇಂದು ಅವರು ಅಮ್ಮನನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರು ಇಂದು (ಜೂನ್ 18) 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀರಾಬೆನ್ ಅವರು ಜೂನ್ 18, 1923 ರಂದು ಜನಿಸಿದ್ದು ಶತಾಯುಶಿಯಾಗಿದ್ದಾರೆ.

ಹೀರಾಬೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ನಗರದ ಹೊರವಲಯದಲ್ಲಿರುವ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿರುವ ರಸ್ತೆಯೊಂದಕ್ಕೆ ಹೀರಾಬೆನ್ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಗಾಂಧಿನಗರ ಮೇಯರ್ ಹಿತೇಶ್ ಮಕ್ವಾನಾ, ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ 100 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮುಂದಿನ ಪೀಳಿಗೆಗೆ ಅವರ ಜೀವನವು ಸ್ಫೂರ್ತಿದಾಯಕವಾಗಿದೆ. ಹೀಗಾಗಿ ರೈಸನ್ ಪ್ರದೇಶದ 80 ಮೀಟರ್ ರಸ್ತೆಗೆ ‘ಹೀರಾ ಮಾರ್ಗ’ ಎಂದು ಹೆಸರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

Comments are closed.