ಅಂತರಾಷ್ಟ್ರೀಯ

ಈ ಕೋಳಿ ತಲೆ ಇಲ್ಲದೆ ಒಂದೂವರೆ ವರ್ಷ ಬದುಕಿತ್ತು! ಅಚ್ಚರಿಯಾದರೂ ಸತ್ಯ !!! ಎಲ್ಲಿ.. ಹೇಗೆ..?

Pinterest LinkedIn Tumblr

ಮನುಷ್ಯನೇ ಇರಲಿ ಪ್ರಾಣಿಗಳೇ ಇರಲಿ ತಲೆ ಇಲ್ಲದೆ ಬದುಕಬಹುದೇ? ಆದರೆ ಅಮೆರಿಕದ ಕೋಳಿಯೊಂದು ತಲೆ ಇಲ್ಲದೆಯೇ ಒಂದೂವರೆ ವರ್ಷಗಳ ಕಾಲ ಬದುಕಿತ್ತು ಎಂದರೆ! ಅಮೆರಿಕದ ಕೊಲರಾಡೋ ನಿವಾಸಿಯಾಗಿದ್ದ ಲಾಯ್್ಡ ಓಸಲ್​ಎನ್ ಕೋಳಿ ಫಾಮ್ರ್ ನಡೆಸುತ್ತಿದ್ದ. 1945ರ ಸೆಪ್ಟೆಂಬರ್ 18ರಂದು ಎಂದಿನಂತೆ ಮಾಂಸಕ್ಕಾಗಿ ಹಲವು ಕೋಳಿಗಳನ್ನು ಸಾಯಿಸಲಾಗಿತ್ತು. ಈ ಪೈಕಿ ಒಂದು ಕೋಳಿಯನ್ನು ಬಾಕ್ಸ್​ಗೆ ಹಾಕುವಾಗ ಹೊರಗೆ ಬಿದ್ದಿತ್ತು. ಹೊರಕ್ಕೆ ಬೀಳುತ್ತಿದ್ದಂತೆ ಕೋಳಿ ಅಲ್ಲಿಂದ ಓಡಿ ಹೋಯಿತು. ಕೋಳಿಯನ್ನು ಹುಡುಕಿ ಹೊರಟ ಲಾಯ್್ಡೆ ಅಚ್ಚರಿ ಕಾದಿತ್ತು. ತಲೆ ಕತ್ತರಿಸಿದ್ದರೂ ಕೋಳಿ ಬದುಕಿತ್ತು. ಇದನ್ನು ನೋಡಿ ಕರುಣೆಯಿಂದ ಕಂಡ ಲಾಯ್್ಡ ಕೋಳಿಗೆ ಮೈಕ್ ಎಂದು ಹೆಸರಿಟ್ಟು ಅದಕ್ಕೆ ಕಾಳು, ಹಾಲು ಮತ್ತು ನೀರನ್ನು ಸಿರಿಂಜ್ ಮೂಲಕ ನೀಡಿ ನೋಡಿಕೊಂಡರು. ಕೋಳಿಯ ತಲೆ ಕತ್ತರಿಸುವಾಗ ಅದರ ಕಣ್ಣು ಮತ್ತು ಕೊಕ್ಕಿನ ಭಾಗವಷ್ಟೇ ಕತ್ತರಿಸಿ ಹೋಗಿತ್ತು. ಜೀವಂತವಿರಲು ಅಗತ್ಯವಿರುವ ಕೆಲ ನಾಳಗಳು, ಮಿದುಳು ಮತ್ತು ಒಂದು ಕಿವಿ ಉಳಿದುಕೊಂಡಿತ್ತು. ಹೀಗಾಗಿ ಕೋಳಿ ಬದುಕುಳಿದಿತ್ತು.

ಈ ಅಚ್ಚರಿಯ ಸಂಗತಿ ಎಲ್ಲರಿಗೂ ಹರಡಿತ್ತು. ಮೈಕ್ ಅನ್ನು ನೋಡಲು ದೂರ ದೂರದಿಂದ ಜನರು ಬರಲಾರಂಭಿಸಿದರು. ಲಾಯ್್ಡ ಮನೋರಂಜನಾ ತಂಡದೊಂದಿಗೆ ಊರು ಊರು ಸುತ್ತಿ ಈ ಕೋಳಿಯ ಪ್ರದರ್ಶನದಿಂದಲೇ ಸಾಕಷ್ಟು ಕಮಾಯಿ ಮಾಡಿದ್ದರು. ಟೈಮ್ಂತಹ ಖ್ಯಾತ ಮ್ಯಾಗಜಿನ್​ನಲ್ಲಿ ಕೋಳಿ ಮಾಲೀಕ ಲಾಯ್್ಡ ಸಂದರ್ಶನ ಮತ್ತು ಕೋಳಿಯ ಚಿತ್ರವೂ ಪ್ರಕಟವಾಗಿತ್ತು. ಆಗಿನ ಕಾಲದಲ್ಲಿಯೇ ಈ ಕೋಳಿಯ ಬೆಲೆ 10,000 ಡಾಲರ್ ಆಗಿತ್ತು. ಅಂದರೆ ಈಗಿನ ಬೆಲೆಯಲ್ಲಿ 6.52 ಲಕ್ಷ ರೂ.! ಆದರೆ 1947ರಲ್ಲಿ ಲಾಯ್್ಡ ಕಾರ್ಯಕ್ರಮವನ್ನು ನಡೆಸಿ ಹಿಂತಿರುಗುತ್ತಿದ್ದಾಗ ಮಧ್ಯರಾತ್ರಿ ಕೋಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕಾಳೊಂದು ಅದರ ಗಂಟಲಿನಲ್ಲಿ ಸಿಕ್ಕಿಕೊಂಡ ಪರಿಣಾಮ ಹೀಗಾಗಿತ್ತು. ಲಾಯ್್ಡ ಕಾರ್ಯಕ್ರಮದ ಸ್ಥಳದಲ್ಲಿಯೇ ಅದರ ನೀರು ಕುಡಿಸುವ ಸಿರಿಂಜ್ ಮರೆತು ಬಂದಿದ್ದರಿಂದ ನೀರು ಕುಡಿಸಲು ಸಾಧ್ಯವಾಗದೆ ಕೋಳಿ ಸತ್ತುಹೋಗಿತ್ತು. ಕೋಳಿಗೂ ಪೋಸ್ಟ್​ಮಾರ್ಟಂ ನಡೆಸಿದ್ದರು ಎನ್ನುವುದು ಮತ್ತೊಂದು ಅಚ್ಚರಿ!

Comments are closed.