ಕರಾವಳಿ

ಸಚಿವ ಪ್ರಮೋದ್ ಆಡಳಿತ ವೈಫಲ್ಯದ ‘ಚಾರ್ಜ್‌ಶೀಟ್’ ಬಿಡುಗಡೆ ಮಾಡಿದ ಉಡುಪಿ ಬಿಜೆಪಿ!

Pinterest LinkedIn Tumblr

ಉಡುಪಿ: ವಿಧಾನಸಭಾ ಚುನಾವಣೆ ಸಮೀಪಿಸ್ತಾ ಇದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪರಿಣಾಮಕಾರಿ ಬೆಳವಣಿಗೆಗಳು ನಡೆಯುತ್ತಿದೆ. ಸಚಿವ ಪ್ರಮೋದ್ ಮದ್ವರಾಜ್ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬುತ್ತಿದೆ. ಇದಕ್ಕೆ ಸಚಿವ ಪ್ರಮೋದ್ ಕೂಡಾ ಅಡ್ಡ ಗೋಡೆಗೆ ದೀಪ ಇಟ್ಟಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮತ್ತೋಂದಡೆ ಉಡುಪಿ ಜಿಲ್ಲಾ ಬಿಜೆಪಿ ಈ ಬಾರೀ ಹೇಗಾದ್ರೂ ಅಧಿಕಾರವನ್ನು ಪಡೆದುಕೊಳ್ಳಬೇಕು ಎಂಬ ಪ್ರಯತ್ನದಲ್ಲಿದೆ. ಈ ಕಾರಣಕ್ಕಾಗಿ ಸಚಿವ ಪ್ರಮೋದ್ ಮದ್ವರಾಜ್ ಅವರ ವೈಫಲ್ಯವನ್ನು ಜನರ ಮುಂದಿಡುವ ಪ್ರಯತ್ನ ನಡೆಸುತ್ತಿದೆ. ಪ್ರಮೋದ್ ಮದ್ವರಾಜ್ ಅವರ ಆಡಳಿತ ವೈಪಲ್ಯದ ಆರೋಪ ಪಟ್ಟಿಯನ್ನು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಡುಗಡೆ ಮಾಡಿದೆ.

ಐದು ವರ್ಷ ಆಡಳಿತ ಅವದಿಯಲ್ಲಿ ಸಚಿವ ಪ್ರಮೋದ್ ಮದ್ವರಾಜ್ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ದಿ ಮಾಡಿಲ್ಲ. 2023 ಕೋಟಿ ರೂಪಾಯಿ ಅನುದಾನವನ್ನು ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ತಂದಿದ್ದೇನೆ ಎಂಬ ಸುಳ್ಳನ್ನು ಹೇಳುತ್ತಿದ್ದಾರೆ. 500 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಎರಿಸುವ ಸಚಿವರ ಕನಸ್ಸು ಹಗಲು ಕನಸ್ಸಾಗಿದೆ. ಹಳೆಯ ರಸ್ತೆಗಳನ್ನು ಅಭಿವೃದ್ದಿ ಪಡಿಸಿದ್ದಾರೆ ಹೊರತು ಹೊಸ ರಸ್ತೆಗಳ ನಿರ್ಮಾಣ ಎಲ್ಲೂ ಆಗಿಲ್ಲ. ರಸ್ತೆ ಅಭಿವೃದ್ದಿಯಲ್ಲಿ ಸಚಿವ ಪ್ರಮೋದ್ ವೈಪಲ್ಯ ಕಂಡು ಕೊಂಡಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರ ಆಡಳಿತ ಅವದಿಯಲ್ಲಿ ಬ್ರಹ್ಮಾವರದಲ್ಲಿ ಪಿ ಜಿ ಸೆಂಟರ್‍ಗೆ ಅವಕಾಶ ಮಾಡಿತ್ತು. ವಿನಯ್ ಕುಮಾರ್ ಸೊರಕೆ ಪಿ ಜಿ ಸೆಂಟರನ್ನು ತಮ್ಮ ಕ್ಷೇತ್ರಕ್ಕೆ ಬಾಚಿದ್ದಾರೆ. ಪ್ರಮೋದ್ ಅವರ ಕೆಟ್ಟ ಆಡಳಿತದಿಂದ ಪಿ ಜಿ ಸೆಂಟರ್ ಕೈ ತಪ್ಪಿ ತಪ್ಪಿದೆ.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗೀ ಅವರಿಗೆ ಪರಭಾರೆ ಮಾಡುವ ಮೂಲಕ ಆಸ್ಪತ್ರೆಯನ್ನು ನುಂಗಿ ನೀರು ಕುಡಿದಿದ್ದಾರೆ.ಬ್ರಹ್ಮಾವರ ಪುರಸಭೆ ಮಾಡಿಲ್ಲ. ಬ್ರಹ್ಮವಾರ ತಾಲೂಕು ಆಗಿ ಘೋಷಣೆಯಾದ್ರು ಅದೀಕೃತವಾಗಿ ಕಾರ್ಯಾಚರಣೆಗೊಂಡಿಲ್ಲ.ಬಹುಗ್ರಾಮ ಯೋಜನೆ ನೆನೆ ಗುಂದಿಗೆ ಬಿದ್ದಿದೆ. ಜಿಲ್ಲೆಯ ಬಹುದೊಡ್ಡ ಮರಳು ಸಮಸ್ಯೆ. ಸಚಿವರು ಮರಳು ಮಾಪೀಯಾದೊಂದಿಗೆ ಸೇರಿ ಮರಳು ಆಭಾವನ್ನು ಸೃಷ್ಟಿ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ನೀಡಿರುವ ಮೋನೋ ರೈಲು, ಗ್ಯಾಸ್ ಪೈಪ್ ಲೈನ್ ಇನ್ನೂ ಜಾರಿಯಾಗಿಲ್ಲ.

ಕ್ರೀಡಾ ಕಿಟ್ ವಿತರಣೆಯಲ್ಲಿ ಅವವ್ಯಹಾರ ಆಗಿದೆ. ಕ್ರೀಡಾ ಇಲಾಖೆಯ ಅಧಿಕಾರಿಗಳಿಂದ ಕ್ರೀಡಾ ಕಿಟ್ ವಿತರಣೆಯಲ್ಲಿ ಬಾರೀ ಭ್ರಷ್ಟಚಾರ ನಡೆದಿದೆ.15 ಸಾವಿರದ ಕಿಟ್‍ನ್ನು 40 ಸಾವಿರಕ್ಕೆ ಖರೀದಿಸಲಾಗಿದೆ. ಕ್ರೀಡಾ ಸಚಿವರಾಗಿ ಕೂಡಾ ಸಂಪೂರ್ಣ ವೈಪಲ್ಯ ಕಂಡಿದ್ದಾರೆ. ಇವರ ಆದಿಕಾರ ಅವಧಿಯಲ್ಲಿ 7 ಮಂದಿ ಜಿಲ್ಲಾಧಿಕಾರಿ 6 ಮಂದಿ ಪೋಲಿಸ್ ವರಿಷ್ಠಾಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಆದ್ರೆ ನಗರಸಭೆಯಲ್ಲಿ ಅತ್ಯಂತ ಭ್ರಷ್ಠಾಚಾರಿ ಪೌರಯುಕ್ತ ಮಂಜುನಾಥಯ್ಯ ಕಳೆದ 5 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದಡೆ ನಾನು ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದೇನೆ ಹೇಳುವ ಇವರು ಇನ್ನೊಂದಡೆ ಭ್ರಷ್ಟಾಚಾರ ಮಾಡುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ನಗರಸಭೆ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆಯೊಂದು ಇವರ ಅಧಿಕಾರದಲ್ಲಿ ನಡೆದಿದೆ. ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯೊಬ್ಬರನ್ನು ಇವರದ್ದೇ ಪಕ್ಷದ ಕಾಂಗ್ರೆಸ್ ಸದಸ್ಯರು ಅಮಾನುಷವಾಗಿ ಹಲ್ಲೆಮಾಡಿದ್ದಾರೆ.

ಉಡುಪಿಯಲ್ಲಿ ಪ್ಲೆಕ್ಸ್ ವ್ಯಾಪರಸ್ಥರ ದುಡಿಮೆ ಹೆಚ್ಚಾಗಿದೆಯೇ ಹೊರತು ಅಭಿವೃದ್ದಿಯಂತೂ ಒಂಚೂರು ಆಗಿಲ್ಲ. ಹೀಗೆ ಒಟ್ಟು 19 ಅಂಶಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖವನ್ನು ಮಾಡಲಾಗಿದೆ

Comments are closed.