ಕರಾವಳಿ

ಮಂಜೇಶ್ವರ ಗೋವಿಂದ ಪೈ ತುಳುನಾಡು ‌ಎಂದೂ ಮರೆಯಲಾರದ ಸಂಶೋಧಕ ಕವಿ : ಮಲಾರ್‌ ಜಯರಾಮ ರೈ

Pinterest LinkedIn Tumblr

ಮಂಗಳೂರಿನಲ್ಲಿ ಮಂಜೇಶ್ವರ ಗೋವಿಂದ ಪೈಯವರ 35ನೇ ಹುಟ್ಟುಹಬ್ಬ ಆಚರಣೆ

ಮಂಗಳೂರು, ಮಾರ್ಚ್.23: ಗೋವಿಂದ ಪೈಯವರು ಪಂಡಿತ ಕವಿ, ಸಂತ ಕವಿ, ಪ್ರಗತಿಪರ ಚಿಂತಕ,ದೇಶಪ್ರೇಮಿ, ಅಗಾಧ ಸಂಶೋಧಕ ಹಾಗೂ ತುಳುನಾಡು ‌ಎಂದೂ ಮರೆಯಲಾರದ ಸಂಶೋಧಕ ಕವಿ ಎಂದು ಹಿರಿಯ ಪತ್ರಕರ್ತ, ಸಾಹಿತಿ ಮಲಾರ್‌ ಜಯರಾಮ ರೈ ತಮ್ಮ ವಿಶೇಷ ಉಪನ್ಯಾಸದಲ್ಲಿ ನುಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಸೆಂಟ್ ವಿದ್ಯಾ ಸಂಸ್ಥೆ, ಕಲ್ಕೂರ ಪ್ರತಿಷ್ಠಾನ, ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗವು ಜಂಟಿಯಾಗಿ ಮಂಜೇಶ್ವರ ಗೋವಿಂದ ಪೈಯವರ 35ನೇ ಹುಟ್ಟುಹಬ್ಬದ ಪ್ರಯುಕ್ತ‌ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ‌ ಅವರು ಮಾತನಾಡುತ್ತಿದ್ದರು.

ದ. ಕ.ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ‌ ಅಧ್ಯಕ್ಷರಾದ ಶ್ರೀ ಪ್ರದೀಪ್‌ ಕುಮಾರ್‌ ಕಲ್ಕೂರ‌ ಅವರು ದೀಪವನ್ನು ಬೆಳಗಿ, ಗೋವಿಂದ ಪೈಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದುಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್‌ಅಧ್ಯಕ್ಷರಾದ ಎ.ಕೆ.ಎಂ.ಅಶ್ರಫ್, ಬ್ಯಾರಿ ಸಾಂಸ್ಕೃತಿಕ‌ ಅಕಾಡೆಮಿಯ‌ ಅಧ್ಯಕ್ಷರಾದ ಸಯೀವುಲ್ಲಾ ತಂಗಳ್, ಝಡ್. ಎ. ಕಯ್ಯಾರ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ‌ ಅಕಾಡೆಮಿಯ‌ ಅಧ್ಯಕ್ಷರಾದ ಶ್ರೀ ಪ್ರಭಾಕರ್‌ ಕಲ್ಲೂರಾಯ, ಕರ್ನಾಟಕಜಾನಪದ ಪರಿಷತ್ತಿನ‌ಅಧ್ಯಕ್ಷರಾದ ಎ. ಆರ್.ಸುಬ್ಬಯ್ಯಕಟ್ಟೆ, ಪ್ರೊ. ಶ್ರೀನಾಥ ಕಾಸರಗೋಡು, ಮಂಜೇಶ್ವರಜಿಲ್ಲಾಪಂಚಾಯತಿನ ಶ್ರೀ ಸುಧಾಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಕಾರ್ಯಕ್ರಮದ‌ ಅಧ್ಯಕ್ಷತೆಯನ್ನುಕಾಲೇಜಿನ ಸಂಚಾಲಕರಾದ ಶ್ರೀ ದೇವಾನಂದ ಪೈ ಅವರು ವಹಿಸಿದ್ದರು. ಗೋವಿಂದ ಪೈಯವರಿಂದ ರಚಿಸಲ್ಪಟ್ಟಕನ್ನಡಕೊಂಕಣಿ ಹಾಡುಗಳನ್ನು ಬ್ಯೆಕಾಡಿರತ್ನಾವತಿಜೆ ಹಾಗೂ ಶ್ರೀಮತಿ ಗೀತಾ ಮಲ್ಯ ಹಾಡಿದರು. ಶ್ರೀ ಸುರೇಶ್ ವರ್ಕಾಡಿ ಯವರು ರಚಿಸಿದ ಕವನವನ್ನುಕುಮಾರಿ ಸೌಮ್ಯ ಪಾಣಾಜೆಯವರು ವಾಚಿಸಿದರು.

ಬೆಸೆಂಟ್ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಕನ್ನಡ ವಿಭಾಗದ ಮುಖ್ಯಸ್ಥೆಡಾ.ಮೀನಾಕ್ಷಿ ರಾಮಚಂದ್ರ ನಿರೂಪಣೆ ಗೈದರು. ಪ್ರಾಚಾರ್ಯರಾದಡಾ.ಸತೀಶ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ಕನ್ನಡ ವಿಭಾಗದ ಪ್ರಾಧ್ಯಾಪಿಕೆ ಶ್ರೀಮತಿ ಜ್ಞಾನೇಶ್ವರಿ‌ ಅವರು ವಂದಿಸಿದರು.

Comments are closed.