ಕರ್ನಾಟಕ

ರಾಜ್ಯಸಭಾ ಚುನಾವಣೆ ಮತದಾನ‌‌‌ ಮುಕ್ತಾಯ; ಮತದಾನ ಬಹಿಷ್ಕರಿಸಿದ ಜೆಡಿಎಸ್‌

Pinterest LinkedIn Tumblr

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆ ಇದೀಗ ಮುಕ್ತಾಯಗೊಂಡಿದೆ.

224 ಸದಸ್ಯರ ಪೈಕಿ ನಿಧನ ಹಾಗೂ ರಾಜೀನಾಮೆಯಿಂದ ಖಾಲಿಯಾಗಿದ್ದ 7 ಸ್ಥಾನಗಳನ್ನು ಬಿಟ್ಟು ಉಳಿದಂತೆ 217 ಮತದಾರರು ಹಾಜರಿದ್ದರು.

ಈ ಪೈಕಿ ಅನಾರೋಗ್ಯ ಕಾರಣದಿಂದ ಬೇಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ರುದ್ರೇಶಗೌಡ ಮತ ಹಾಕಲಿಲ್ಲ.

ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಾ.ರಾ.ಮಹೇಶ ಅವರನ್ನು ಬಿಟ್ಟು ಉಳಿದ 28 ಶಾಸಕರು ಮತದಾನ ಬಹಿಷ್ಕರಿಸಿದರು. ಹೀಗಾಗಿ 217 ಮತಗಳ ಪೈಕಿ 188 ಮತಗಳು ಮಾತ್ರ ಚಲಾವಣೆಯಾದಂತಾಗಿವೆ.

Comments are closed.