ಕರ್ನಾಟಕ

‘ಪ್ರಧಾನಿ ಮೋದಿಯವರ ಕಳೆದುಹೋದ ಅಂಕಪಟ್ಟಿ ಸಿಕ್ಕಿದೆ!’ ಟ್ವೀಟ್ ಮಾಡಿದ ರಮ್ಯಾ ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕಳೆದುಹೋದ ಅಂಕ ಪಟ್ಟಿ (ಮಾರ್ಕ್ಸ್ ಕಾರ್ಡ್) ಸಿಕ್ಕಿದೆ ಎಂದು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ.

‘ಬ್ರೇಕಿಂಗ್ ನ್ಯೂಸ್’ ಎಂಬ ಶೀರ್ಷಿಕೆಯಲ್ಲಿ ಟ್ವೀಟ್ ಮಾಡಿರುವ ಅವರು, ರಿ‍ಪೋರ್ಟ್ ಕಾರ್ಡ್ ಎಂಬ ಹೆಸರಿನ ಅಂಕಪಟ್ಟಿಯೊಂದನ್ನು ಪ್ರಕಟಿಸಿದ್ದಾರೆ. ಇದರಲ್ಲಿ, ಹಲವು ವಿಷಯಗಳಲ್ಲಿ ಪ್ರಧಾನಿಗೆ ಶ್ರೇಣಿಗಳಲ್ಲಿ ಅಂಕ ನೀಡಲಾಗಿದೆ.

ಉದ್ಯೋಗ ಸೃಷ್ಟಿ ವಿಷಯದಲ್ಲಿ ‘ಡಿ’ ಶ್ರೇಣಿ, ರಕ್ಷಣಾ ಉಪಕರಣಗಳ ಖರೀದಿಗೆ ಸಂಬಂಧಿಸಿ ಮಾಹಿತಿ ನೀಡುವ ವಿಷಯದಲ್ಲಿ ‘ಸಿ’ ಶ್ರೇಣಿ, ಆರೋಗ್ಯ ಮತ್ತು ಮಕ್ಕಳ ಮರಣ ವಿಷಯದಲ್ಲಿ ‘ಎಫ್‌’ ಶ್ರೇಣಿ, ಆರ್ಥಿಕತೆ ವಿಷಯದಲ್ಲಿ ‘ಎಫ್‌’ ಶ್ರೇಣಿ, ಮಹಿಳಾ ಸುರಕ್ಷತೆ ವಿಷಯದಲ್ಲಿ ‘ಸಿ’ ಶ್ರೇಣಿ ಹಾಗೂ ಕತೆ ಹೇಳುವುದರಲ್ಲಿ ‘ಎ++’ ಶ್ರೇಣಿ ನೀಡಲಾಗಿದೆ.

ಅಂತಿಮವಾಗಿ ‘ಡಿ’ ಶ್ರೇಣಿ ನೀಡಲಾಗಿದ್ದು, ಪಠ್ಯೇತರ ಚಟುವಟಿಕೆ ವಿಭಾಗದಲ್ಲಿ ‘ಹಿಂಸೆ’ ಮತ್ತು ‘ಕೋಮುವಾದ’ವನ್ನು ಆಯ್ದುಕೊಂಡ ಬಗ್ಗೆ ನಮೂದಿಸಲಾಗಿದೆ.

Comments are closed.