ಕರಾವಳಿ

ಸಚಿವ ಪ್ರಮೋದ್ ಮಧ್ವರಾಜ್‌ರಿಂದ ಎಕ್ಕೂರಿನಲ್ಲಿ ಹೊರಾಂಗಣ ಕ್ರೀಡಾಂಗಣಕ್ಕೆ ಶಿಲಾನ್ಯಾಸ

Pinterest LinkedIn Tumblr

ಮಂಗಳೂರು, ಮಾರ್ಚ್.23: ಎರಡು ವರ್ಷದ ಹಿಂದಿನ ವರೆಗೆ ಕ್ರೀಡಾಇಲಾಖೆಗೆ ಬಜೆಟ್ನಲ್ಲಿ 145 ಕೋಟಿ ರೂ. ಮೊತ್ತ ಸಿಗುತ್ತಿತ್ತು. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅದನ್ನು 285 ಕೋಟಿ ರೂ.ಗೆ ಏರಿಸಲಾಗಿದೆ. ಇದರಿಂದಾಗಿ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ 8 ಕೋ ರೂ. ಅನುದಾನ ನೀಡಲು ಸಾಧ್ಯವಾಗಿದೆ ಎಂದು ಯುವ ಸಬಲೀಕರಣ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಕಂಕನಾಡಿ ಬಿ.ವಾರ್ಡ್ನ ನಗರದ ಎಕ್ಕೂರಿನ ಒಂದು ಎಕರೆ 10 ಸೆಂಟ್ಸ್ ಜಾಗದಲ್ಲಿ ಹೊರಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾ ವಿಕವಾಗಿ ಮಾತನಾಡಿದ ಸ್ಥಳೀಯ ಕಾರ್ಪೊರೇಟರ್, ಮಂಗಳೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಹೊರಾಂಗಣದ ಕ್ರೀಡಾಂಗಣದಿಂದ ಬಜಾಲ್, ಜಪ್ಪಿನಮೊಗರು, ಅಳಪೆ ಗ್ರಾಮದ ಕ್ರೀಡಾಸಕ್ತರಿಗೆ ಸಹಕಾರವಾಗಲಿದೆ. ಇದಲ್ಲದೆ, ಈ ಕ್ರೀಡಾಂಗಣ ಬೆಳಗ್ಗೆ 4.30ರಿಂದ 7 ಗಂಟೆಯವರೆಗೆ ಕೇವಲ ಮಹಿಳೆಯರಿಗೆ ವಾಕಿಂಗ್ ಟ್ರಾಕ್ ಆಗಿ ಉಪಯೋಗವಾಗಲಿದೆ ಎಂದು ಹೇಳಿದರು.

ಶಾಸಕ ಜೆ ಆರ್ ಲೋಬೋ, ಮೇಯರ್ ಭಾಸ್ಕರ ಕೆ., ಪಾಲಿಕೆ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಕೆಎಸ್‌ಆರ್ಟಿಸಿ ನಿರ್ದೇಶಕ ಟಿಕೆ ಸುಧೀರ್, ಶೇಷಮ್ಮ, ಸಿಸ್ಟರ್ ವೆನಿಟಾ, ಮೊದಲಾದವರು ಉಪಸ್ಥಿತರಿದ್ದರು.

Comments are closed.