ಕರಾವಳಿ

ಮಂಗಳೂರಿನಲ್ಲಿ ನಿರ್ಮಾಣವಾಗಲಿದೆ ಶಟಲ್ ಬ್ಯಾಡ್ಮಿಂಟನ್ – ಕಬಡ್ಡಿ ಅಂಕಣ : ಶಂಕುಸ್ಥಾಪನೆ ನೆರವೇರಿಸಿದ ಸಚಿವ ಮಧ್ವರಾಜ್

Pinterest LinkedIn Tumblr

ಮಂಗಳೂರು, ಮಾರ್ಚ್.23: ತಮ್ಮ ಕ್ಷೇತ್ರಕ್ಕೆ ಯಾವ ರೀತಿಯಲ್ಲಿ ಅನುದಾನ ಪಡೆಯಬೇಕೆಂಬುದರ ಬಗ್ಗೆ ಶಾಸಕ ಲೋಬೋ ಅವರು ಪಿಎಚ್ಡಿ ಮಾಡಿದ್ದಾರೆ. ಅವರನ್ನು ಡಾ. ಎಂದು ಕರೆಯಬೇಕು ಎಂದು ಯುವ ಸಬಲೀಕರಣ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ನಗರದ ಉರ್ವ- ಬೋಳೂರಿನಲ್ಲಿ ನಿರ್ಮಾಣವಗಲಿರುವ ಅಂತಾರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಅಂಕಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಜನರ ಆಸಕ್ತಿಗೆ ತಕ್ಕಂತೆ ಕೆಲಸ ಮಾಡುವವನೇ ನಿಜವಾದ ಜನಪ್ರತಿನಿಧಿ ಎಂದು ಹೇಳುತ್ತಾ, ಶಾಸಕ ಲೋಬೋ ಅವರು ಪಕ್ಷ, ಜಾತಿ, ಧರ್ಮದ ಬೇಧವಿಲ್ಲದೆ ಕೆಲಸ ಮಾಡುವ ಪ್ರಾಮಾಣಿಕ ಜನಪ್ರತಿನಿಧಿ ಎಂದು ಬಣ್ಣಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಡಿದ ಮನವಿಯ ಮೇರೆಗೆ ಕ್ರೀಡಾ ಇಲಾಖೆಗೆ ನೀಡಲಾಗುತ್ತಿದ್ದ 145 ಕೋಟಿ ರೂ.ಗಳ ಬಜೆಟನ್ನು 285 ಕೋಟಿ ರೂ.ಗಳಿಗೆ ಏಇರಕೆ ಮಾಡಿರುವುದರಿಂದ ದ.ಕ. ಜಿಲ್ಲೆಗೆ 30 ಕೋಟಿ ರೂ. ನೀಡಲು ಸಾಧ್ಯವಾಯಿತು.

ನಾವು ಒಲಿಪಿಂಕ್ಸ್ನಲ್ಲಿ ಪದಕ ಗೆಲ್ಲಬೇಕೆಂದು ಘೋಷಣೆ ಮಾಡಿದರೆ ಸಾಲದು. ಶಾಲಾ ಹಂತದಲ್ಲಿಯೇ ಮಕ್ಕಳನ್ನು ಕ್ರೀಡಾಪಟುಗಳನ್ನಾಗಿ ಬೆಳೆಸಲು ಪ್ರೇರೇಪಿಸಬೇಕು. ಪೋಷಕರು ಹಾಗೂ ಶಾಲಾ ಕಾಲೇಜು ಮುಖ್ಯಸ್ಥರು ಮಕ್ಕಳ ಕ್ರೀಡಾ ಕ್ಷೇತ್ರದ ಆಸಕ್ತಿಯ ಬಗ್ಗೆ ನಿರುತ್ಸಾಹಗೊಳಿಸಬಾರದು. ಸರಕಾರಗಳು ಕೂಡಾ ಕ್ರೀಡಾ ಇಲಾಖೆಗೆ ಸಾಕಷ್ಟು ಅನುದಾನ ಒದಗಿಸುವ ಮೂಲಕ ಮೂಲಭೂತ ಸೌಕರ್ಯಗಳ ಜತೆ ಕ್ರೀಡಾಪಟುಗಳನ್ನು ಬೆಳೆಸಲು ಪ್ರೇರೇಪಿಸಬೇಕು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದಲೇ ಜಾರಿಗೆ ಬಂದಿರುವ ಕ್ರೀಡಾನೀತಿಯಡಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದು. ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆ ಆಗದಂತೆ ನೋಡಲಾಗುವುದು ಮತ್ತು ಕ್ರೀಡಾ ಸ್ಪರ್ಧೆಗಳ ಸಂದರ್ಭ ಪರೀಕ್ಷೆ ಇದ್ದಾಗ, ಕ್ರೀಡಾಪಟು ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟು, ಅವರಿಗೆ ವಿಶೇಷ ಪರೀಕ್ಷೆಗೆ ಅವಕಾಶ ಒದಗಿಸುವುದು. ಇದರೊಂದಿಗೆ ವಿವಿಧ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿಯನ್ನು ನೀಡುವ ಬಗ್ಗೆ ಕ್ರೀಡಾನೀತಿಯಲ್ಲಿ ಅಳವಡಿಸಲಾಗಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಕಾರ್ಯಕ್ರಮದಲ್ಲಿ ಕ್ರೀಡಾ ಪೋಷಕರಾದ ಸದಾನಂದ ಶೆಟ್ಟಿ, ಶಾಸಕ ಜೆ.ಆರ್ ಲೋಬೋ, ಮೇಯರ್ ಭಾಸ್ಕರ ಮೊಯ್ಲಿ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ರಾಧಾಕೃಷ್ಣ, ನಾಗವೇಣಿ, ಶೈಲಜಾ, ಸಬಿತಾ ಮಿಸ್ಕಿತ್, ರತಿಕಲಾ ಮೊದಲಾದವರು ಉಪಸ್ಥಿತರಿದ್ದರು.

Comments are closed.