ಅಂತರಾಷ್ಟ್ರೀಯ

ಡೊನಾಲ್ಡ್ ಟ್ರಂಪ್ ಜೊತೆ ಅನೈತಿಕ ಸಂಬಂಧ ಹೊಂದಿದ್ದೆ, ಅವರು ಹಣ ನೀಡಲು ಯತ್ನಿಸಿದ್ದರು: ಮಾಜಿ ರೂಪದರ್ಶಿ ಬಹಿರಂಗ

Pinterest LinkedIn Tumblr

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ ಎದುರಿಸುತ್ತಿದ್ದ ಮಾಜಿ ಪ್ಲೇ ಬಾಯ್ ರೂಪದರ್ಶಿ ಕರೆನ್ ಮೆಕ್ಡೌಗಲ್ ಸಿಎನ್ಎನ್ ನ ಆಂಡೆರ್ಸನ್ ಕೂಪರ್ 360ಗೆ ನೀಡಿರುವ ಸಂದರ್ಶನದಲ್ಲಿ ಟ್ರಂಪ್ ಜೊತೆಗೆ ತಮಗೆ ಸಂಬಂಧವಿದ್ದಿದ್ದು ಹೌದು ಎಂದು ಒಪ್ಪಿಕೊಂಡಿದ್ದಾಳೆ.

ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ಪ್ರೀತಿಸುತ್ತಿದ್ದರೇ ಎಂದು ಕೇಳಿದ್ದಕ್ಕೆ, ಹೌದು, ಎಲ್ಲಾ ಸಮಯದಲ್ಲಿಯೂ ಅವರು ನನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದರು ಎಂದಿದ್ದಾಳೆ.

ಈ ಪ್ರೀತಿ ಸಂಬಂಧ ಮದುವೆಯವರೆಗೆ ಮುಂದುವರಿಯಬಹುದು ಎಂದು ತಮಗೆ ಅನಿಸಿತ್ತೇ ಎಂದು ಕೇಳಿದ್ದಕ್ಕೆ ಆಗಲೂಬಹುದು ಎಂದಿದ್ದಾಳೆ.

ಆದರೆ ಡೊನಾಲ್ಡ್ ಟ್ರಂಪ್ ತಮಗೆ ರೂಪದರ್ಶಿ ಜೊತೆ ಸಂಬಂಧವಿರುವುದನ್ನು ತಿರಸ್ಕರಿಸಿದ್ದಾರೆ ಎಂದು ಅಮೆರಿಕ ಶ್ವೇತಭವನ ಹೇಳಿದೆ.

ಈ ಸುದ್ದಿಯನ್ನು ಅಮೆರಿಕಾದ ದಿ ನ್ಯಾಷನಲ್ ಎನ್ಕ್ವೈರರ್ ಪತ್ರಿಕೆ ಪ್ರಕಟಿಸಿತ್ತು. ಈ ಪತ್ರಿಕೆ ಅಮೆರಿಕನ್ ಮೀಡಿಯಾ ಇಂಕ್ ಒಡೆತನದ್ದಾಗಿದ್ದು, ಅದು ಮೆಕ್ಡೌಗಲ್ ವಿರುದ್ಧ ಕೇಸು ದಾಖಲಿಸಿದ ನಂತರ ನೀಡಿರುವ ಮೊದಲ ಸಂದರ್ಶನ ಇದಾಗಿದೆ.

ಅಮೆರಿಕಾದ ನ್ಯೂಯಾರ್ಕ್ ಮ್ಯಾಗಜಿನ್ ಕಳೆದ ತಿಂಗಳು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಕ್ಡೌಗಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದು ಇದೇ ಸಂದರ್ಭದಲ್ಲಿ ಪೋರ್ನ್ ಸ್ಟಾರ್ ಜೊತೆಗೆ ಕೂಡ ಸಂಬಂಧ ಹೊಂದಿದ್ದಾರೆ ಎಂದು ವರದಿ ಮಾಡಿತ್ತು. ಆದರೆ ಈ ಸುದ್ದಿ ತಮಗೆ ಮಾತ್ರ ಸಿಗಬೇಕು, ಬೇರೆ ಯಾವ ಮಾಧ್ಯಮಗಳಿಗೆ ಸಹ ನೀಡಬಾರದೆಂದು ನ್ಯಾಷನಲ್ ಎನ್ಕ್ವೆರರ್ ಪತ್ರಿಕೆ ರೂಪದರ್ಶಿಗೆ 150,000 ಡಾಲರ್ ಹಣವನ್ನು ನೀಡಿತ್ತು. ಆದರೆ ಒಪ್ಪಂದಕ್ಕೆ ವಿರುದ್ಧವಾಗಿ ಸುದ್ದಿ ಸೋರಿಕೆಯಾಗಿದ್ದರಿಂದ ನ್ಯಾಷನಲ್ ಎನ್ಕ್ವೆರರ್ ದಾವೆ ಹೂಡಿತ್ತು.

ಸಿಎನ್ಎನ್ ಜೊತೆ ಮಾತನಾಡಿರುವ ಮೆಕ್ಡೌಗಲ್, ತಾವು ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡುತ್ತಿರುವೆ ಏಕೆಂದರೆ ಬೇರೆಯವರೆಲ್ಲಾ ಈ ಬಗ್ಗೆ ಮಾತನಾಡುತ್ತಿದ್ದಾರೆ, ಹೀಗಾಗಿ ನನ್ನ ಕಥೆಯನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾಳೆ.

ತಾನು ಮತ್ತು ಡೊನಾಲ್ಡ್ ಟ್ರಂಪ್ ಹತ್ತಾರು ಬಾರಿ ಲೈಂಗಿಕ ಸಂಪರ್ಕ ನಡೆಸಿದ್ದು ಯಾವುದೇ ರಕ್ಷಣೆಯನ್ನು ಉಪಯೋಗಿಸುತ್ತಿರಲಿಲ್ಲ. ನಮ್ಮಿಬ್ಬರ ಸಂಬಂಧ 2006ರಲ್ಲಿ ಲಾಸ್ ಏಂಜಲೀಸ್ ನಲ್ಲಿ ಆರಂಭವಾಯಿತು, ಆ ಸಂದರ್ಭದಲ್ಲಿ ಅವರ ಪತ್ನಿ ಮೆಲಾನಿಯಾ ಗಂಡು ಮಗು ಬಾರ್ರನ್ ಗೆ ಜನ್ಮ ನೀಡಿದ್ದರು.

ಸೆಲೆಬ್ರಿಟಿ ಅಪ್ರೆಂಟೈಸ್ ಎಂಬ ಟಿವಿ ಸರಣಿಯಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರ ಭೇಟಿಯಾಯಿತು. ಅದು ಪ್ಲೇಬಾಯ್ ಮನೆಯಾಗಿತ್ತು. ನಾನು ಅವರತ್ತ ಆಕರ್ಷಿತಳಾದೆ. ಅವರು ನೋಡಲು ಚೆನ್ನಾಗಿದ್ದಾರೆ. ಅವರ ಚರಿಷ್ಮಾ ನನಗೆ ಇಷ್ಟವಾಯಿತು ಎಂದಳು.

ಅವರ ಬಂಗಲೆಯಲ್ಲಿಯೇ ನಾವು ಲೈಂಗಿಕ ಸಂಪರ್ಕ ನಡೆಸಿದ್ದು ನಂತರ ಅವರು ನನಗೆ ಹಣ ನೀಡುತ್ತಿದ್ದರು. ಆದರೆ ನನಗೆ ಹಣ ತೆಗೆದುಕೊಳ್ಳಲು ಮನಸ್ಸಾಗುತ್ತಿರಲಿಲ್ಲ. ಪ್ಲೇಬಾಯ್ ಮ್ಯಾನ್ಷನ್ ನಲ್ಲಿಯೇ ನಾನು ಅವರ ಪತ್ನಿ ಮತ್ತು ಮಗಳನ್ನು ಕೂಡ ಭೇಟಿಯಾಗಿದ್ದೆ. ಕ್ಯಾಲಿಫೋರ್ನಿಯಾದಲ್ಲಿ ಟ್ರಂಪ್ ಜೊತೆಗೆ ಇದ್ದಾಗ ಅವರನ್ನು ಭೇಟಿ ಮಾಡಲು ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ ಕೂಡ ಬಂದಿದ್ದಳು, ಆಕೆ ಕೂಡ ಅಧ್ಯಕ್ಷರ ಜೊತೆ ಸಂಬಂಧ ಹೊಂದಿದ್ದಳು, ಆದರೆ ಕಳೆದ ವರ್ಷ ಇಬ್ಬರೂ ಸಂಬಂಧ ಮುರಿದುಕೊಂಡಿದ್ದಾರೆ ಎಂದು ರೂಪದರ್ಶಿ ಹೇಳಿದಳು.

ಮೆಕ್ಡೌಗಲ್ ಕಳೆದ ಮಂಗಳವಾರ ಕ್ಯಾಲಿಫೋರ್ನಿಯಾದ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದ್ದು ಅಮೆರಿಕಾ ಅಧ್ಯಕ್ಷರ ಜೊತೆ ಸಂಬಂಧ ಹೊಂದಿರುವ ಬಗ್ಗೆ ಮೌನವಾಗಿರುವಂತೆ ಒಪ್ಪಂದ ಮಾಡಿಕೊಂಡಿರುವುದರಿಂದ ಮುಕ್ತಿ ನೀಡಬೇಕೆಂದು ಕೋರಿದ್ದಾಳೆ.

Comments are closed.