ಕರ್ನಾಟಕ

ಡಿಕೆ ರವಿ ತಾಯಿ ಗೌರಮ್ಮ ಚುನಾವಣೆ ಅಖಾಡಕ್ಕೆ; ಕೋಲಾರದಿಂದ ಯಾವ ಪಕ್ಷದಿಂದ ಸ್ಪರ್ಧೆ ಗೊತ್ತೇ..?

Pinterest LinkedIn Tumblr

ಬೆಂಗಳೂರು: ನಿಗೂಡವಾಗಿ ಸಾವನ್ನಪ್ಪಿದ್ದ ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ತಾವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಗೌರಮ್ಮ ಅವರು ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. 43 ವಿಧಾನಸಭಾ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಪ್ರಕಟಿಸಿದ್ದು ಗೌರಮ್ಮ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ.

ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ ಪರ್ಕ್ಷದ ಅಧ್ಯಕ್ಷ ಶಿವರಾಮಯ್ಯ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ಕೋಲಾರದಲ್ಲಿ ಅಪಾರ ಜನಬೆಂಬಲ ಗಳಿಸಿದ್ದ ಡಿ.ಕೆ. ರವಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. “ಕೋಲಾರದಲ್ಲಿ ನನ್ನ ಮಗ ಮಾಡಿದ್ದ ಜನಪರ ಕೆಲಸಗಳನ್ನು ಮುಂದಿಟ್ಟುಕೊಂಡು ಣಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನಾನು ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

“ನಿಷ್ಥಾವಂತ ಅಧಿಕಾರಿಗಳಾಗಿದ್ದ ನನ್ನ ಮಗನನ್ನು ವರ್ಗಾವಣೆ ಮಾಡುವ ಮೂಲಕ ಹತ್ಯೆ ಮಾಡಲಾಗಿದೆ. ಮಗನ ಸಾವಿಗೆ ಕಾಂಗ್ರೆಸ್ ಪಕ್ಷವೇ ಕಾರಣ, ಆ ಪಕ್ಷವನ್ನು ಸೋಲಿಸಬೇಕು. ಅದಕ್ಕಾಗಿ ರಾಜ್ಯದಾದ್ಯಂತ ಪ್ರಾಮಾಣಿಕ ಪಕ್ಷ, ಅಭ್ಯರ್ಥಿಗಳಿಗೆ ಬೆಂಬಲ ಸಿಗಬೇಕಿದೆ” ಗೌರಮ್ಮ ಹೇಳಿದರು.

ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಧ್ಯಕ್ಷ ಶಿವರಾಮಯ್ಯ ಮಾತನಾಡಿ ಪಕ್ಷವು 43 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ, ಮುಳಬಾಗಿಲಿನಿಂದ ಮುರಳಿ ಅಥವಾ ಮಲ್ಲಿಕಾರ್ಜುನ ಕಿಣಿಗೇರಿ, ಶ್ರೀನಿವಾಸಪುರದಿಂದ ಹರಿಕುಮಾರ್‌, ಕೆಜಿಎಫ್‌ನಿಂದ ವೆಂಕಟರಮಣಪ್ಪ, ಬಸವನಗುಡಿಯಿಂದ ಎಚ್‌.ಎಂ.ರಾಮು, ದೊಡ್ಡಬಳ್ಳಾಪುರದಿಂದ ತಿರುಮಲೇಗೌಡ, ಮಂಡ್ಯದಿಂದ ಶಿವರಾಮಯ್ಯ, ಬ್ಯಾಟರಾಯನಪುರದಿಂದ ಸಾಯಿ ಸತೀಶ್‌, ತುರುವೇಕೆರೆಯಿಂದ ಎ.ಎಸ್‌.ಕೆಂಪೇಗೌಡ, ವರುಣಾದಿಂದ ಸಿ.ರವಿಕುಮಾರ್‌ ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Comments are closed.