ವಿಶಿಷ್ಟ

ಸುಟ್ಟು ಪಾತ್ರೆಯನ್ನು ಸುಲಭವಾಗಿ ಸ್ವಚ್ಛಗೊಳಿಸಿ

Pinterest LinkedIn Tumblr

-ಸ್ವವ್‌ ಮೇಲೆ ಹಾಲು ಅಥವಾ ಇನ್ನಿತರ ಪದಾರ್ಥ ಇಟ್ಟು ಮರೆತು ಹೋದರೆ ಪದಾರ್ಥವೆಲ್ಲಾ ಸೀದು ಪಾತ್ರೆ ಕರಕಲಾಗಿರುತ್ತದೆ. ಇಂಥ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಬಹಳ ಕಷ್ಟದ ಕೆಲಸ. ಕೆಲ ಸುಲಭ ಮಾರ್ಗ ಅನುಸರಿಸಿದರೆ ಸೀದು ಹೋದ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಚಗೊಳಿಸಬಹುದು.

-ಸೀದು ಹೋದ ಪಾತ್ರೆಗೆ ಅರ್ಧದಷ್ಟು ನೀರು ಹಾಕಿ. ಅದಕ್ಕೆ 2ರಿಂದ 3 ಮೂರು ಚಮಚ ವಾಷಿಂಗ್‌ ಪೌಡರ್‌ ಹಾಕಿ. ಒಲೆ ಮೇಲೆ 15 ನಿಮಿಷ ಇಡಿ. ಅದು ಉಕ್ಕಿಬಂದಾಗ ಬೆಂಕಿಯನ್ನು ಕಡಿಮೆ ಮಾಡಿ 4 ರಿಂದ 5 ನಿಮಿಷ ಸ್ವಲ್ಪ ನೀರು ಹಾವಿಯಾಗುವವರೆಗು ಕುದಿಸಿ. ನಂತರ ಸ್ಟವ್‌ ಆಫ್‌ ಮಾಡಿ. ನೀರನ್ನು ಹೊರಗೆ ಹಾಕಿ. ತಳದಲ್ಲಿ ಸೀದ ಪದಾರ್ಥಗಳು ಹಗುರವಾಗಿರುತ್ತದೆ. ಅದನ್ನು ಚಮಚ ಉಪಯೋಗಿಸಿ ತೆಗೆಯಿರಿ. ನಂತರ ವಾಷಿಂಗ್‌ ಲಿಕ್ವಿಡ್‌ ನಿಂದ ಸ್ಕ್ರಬ್‌ಬಳಸಿ ಉಜ್ಜಿ. ಪಾತ್ರೆ ಫಳ ಫಳ ಹೊಳೆಯುತ್ತದೆ.

-ಸುಟ್ಟ ಪಾತ್ರೆಗೆ ನೀರು ಹಾಕಿ ಅದಕ್ಕೆ ವಿನಿಗರ್‌ ಹಾಕಿ ಕಡಿಮೆ ಉರಿಯುಟ್ಟು ಕುದಿಸಿ. ನಂತರ ಅದನ್ನು ಚೆಲ್ಲಿ. ಬೇಕಿಂಗ್‌ ಸೋಡ ಹಾಕಿ ಪಾತ್ರೆತೊಳೆಯುವ ಸ್ಕ್ರಬ್‌ನಿಂದ ಉಜ್ಜಿದರೆ ಸುಲಭವಾಗಿ ಕರೆ ಹೋಗುತ್ತದೆ. (ಬೇಕಿಂಗ್‌ ಸೋಡ ಇಲ್ಲದಿದ್ದರೆ ಅದರ ಬದಲು ಉಪ್ಪು ಬಳಸಬಹುದು).

Comments are closed.