ರಾಷ್ಟ್ರೀಯ

ಗುಜರಾತ್ ಪೊಲೀಸರು ಎನ್ ಕೌಂಟರ್ ಮಾಡಿ ನನ್ನನ್ನು ಕೊಲ್ಲಲು ಯೋಜಿಸಿದ್ದಾರೆ: ಜಿಗ್ನೇಶ್ ಮೇವಾನಿ

Pinterest LinkedIn Tumblr

ಅಹ್ಮದಾಬಾದ್: ಗುಜರಾತ್ ಪೊಲೀಸರು ಎನ್ ಕೌಂಟರ್ ಮಾಡಿ ನನ್ನನ್ನು ಕೊಲ್ಲಲು ಯೋಜಿಸಿದ್ದಾರೆ, ಇದರಿಂದ ನನ್ನ ಜೀವಕ್ಕೆ ಅಪಾಯವಿದೆ ಎಂದು ದಲಿತ ಕಾರ್ಯಕರ್ತ ಹಾಗೂ ವದ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.

ಗುಜರಾತಿನ ಎಡಿಆರ್ ಪೊಲೀಸ್ ಮತ್ತು ಮೀಡಿಯಾ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ನಡೆದ ಚರ್ಚೆ ವೈರಲ್ ಆದ ಹಿನ್ನೆಲೆಯಲ್ಲಿ ಜಿಗ್ನೇಶ್ ತಮ್ಮ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ.

ಪೊಲೀಸರು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನೊಳಗೊಂಡಿರುವ ಈ ಗುಂಪಿನಲ್ಲಿ ಚರ್ಚೆಯಾದ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ, ಒಂದು ವಿಡಿಯೋದಲ್ಲಿ ಪೊಲೀಸರು ರಾಜಕಾರಣಿಯಂತೆ ಬಟ್ಟೆ ಹಾಕಿರುವ ವ್ಯಕ್ತಿಗೆ ಥಳಿಸುತ್ತಿದ್ದು, ಮತ್ತೊಂದರಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎನ್ ಕೌಂಟರ್ ಬಗೆಗಿನ ಸಂದರ್ಶನವೊಂದಕ್ಕೆ ಉತ್ತರಿಸುತ್ತಿದ್ದಾರೆ.

ಪೊಲೀಸರ ಬಾಪ್ ಆಗಲು ಇಚ್ಚಿಸುವ ಮತ್ತು ಪೊಲೀಸರನ್ನು ಲಖೋಟಾ ಎಂದು ಕರೆದಿರುವ ವ್ಯಕ್ತಿಗಳು ಹಾಗೂ ಪೊಲೀಸರ ವಿಡಿಯೋ ಚಿತ್ರೀಕರಿಸುವ ವ್ಯಕ್ತಿಗಳು ನಿಮ್ಮೊಂದಿಗೆ ಪೊಲೀಸರು ಹೀಗಿರುತ್ತಾರೆ ಎಂದು ತಿಳಿದುಕೊಳ್ಳಬೇಕು, ಲೆಕ್ಕ ಚುಕ್ತಾ ಮಾಡಲಾಗುವುದು ಎಂದು ಗುಜರಾತ್ ಪೊಲೀಸ್ ಎಂದು ಬರೆದಿದ್ದಾರೆ.

ಜಿಗ್ನೆಶ್ ಮೇವಾನಿಯ ಎನ್ ಕೌಂಟರ್ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳು ಚರ್ಚಿಸಿರುವ ವಿಷಯವನ್ನು ವೆಬ್ ಪೊರ್ಟೆಲ್ ನಲ್ಲಿ ಲಿಂಕ್ ಇಲ್ಲಿದ್ದು, ಇದನ್ನು ನೀವು ನಂಬುತ್ತೀರಾ ಎಂದು ಜಿಗ್ನೇಶ್ ಟ್ವೀಟ್ ಮಾಡಿದ್ದಾರೆ. ಫೆಬ್ರವರಿ 18ರಂದು ಅಹ್ಮದಾಬಾದ್ ಬಂದ್ ಆರಂಭಿಸುವ ಮುನ್ನ ಪೊಲೀಸರು ಮೇವಾನಿಯನ್ನು ಬಂಧಿಸುವ ಸಂದರ್ಭದಲ್ಲಿ ಜಿಗ್ನೇಶ್ ಪೊಲೀಸರ ಜೆತೆಗೆ ವಾದಿಸುವ ವಿಡಿಯೋ ವೈರಲ್ ಆಗಿತ್ತು.

ಇದೀಗ ಮೇವಾನಿ ಅವರು ತನಗೆ ಪ್ರಾಣ ಬೆದರಿಕೆ ಇರುವ ಬಗ್ಗೆ ಗುಜರಾತ್‌ ಡಿಜಿಪಿ, ರಾಜ್ಯ ಗೃಹ ಸಚಿವರು ಮತ್ತು ಗೃಹ ಕಾರ್ಯದರ್ಶಿಗೆ ದೂರು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

Comments are closed.