ರಾಷ್ಟ್ರೀಯ

ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹೆರುತ್ತಲೇ ಇರು ಎಂದು ಪತ್ನಿಗೆ ಸೂಚಿಸಿದ ಬಿಜೆಪಿ ಶಾಸಕ

Pinterest LinkedIn Tumblr

ಮುಜಾಫರ್ ನಗರ: ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹೆರುತ್ತಲೇ ಇರು ಎಂದು ಬಿಜೆಪಿ ಶಾಸಕರೊಬ್ಬರು ತಮ್ಮ ಪತ್ನಿಗೆ ಸೂಚಿಸಿದ್ದಾರಂತೆ.

ಮುಜಾಫರ್ ನಗರದಲ್ಲಿ ಸಾರ್ವಜನಿಕ ಸಭೆಯನೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಜಾಫರ್ ನಗರದ ಬಿಜೆಪಿ ಶಾಸಕ ವಿಕ್ರಮ್ ಶೈನಿ , ನಮಗಿಬ್ಬರೇ ಮಕ್ಕಳು ಸಾಕು ಎನ್ನುತ್ತಾಳೆ ನನ್ನ ಪತ್ನಿ. ಆದರೆ ಜನಸಂಖ್ಯಾ ನಿಯಂತ್ರಣ ಕಾನೂನು ಅಸ್ತಿತ್ವಕ್ಕೆ ಬರುವವರೆಗೂ ಮಕ್ಕಳನ್ನು ಹಡೆಯುತ್ತಾ ಇರಲು ಹೇಳಿದ್ದೇನೆ ಎಂದರು.

ಜನಸಂಖ್ಯಾ ನಿಯಂತ್ರಣ ವಿಷಯದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದ ಸೈನಿ, ನಾವು ಇಬ್ಬರು- ಮಕ್ಕಳು ನಿಯಮವನ್ನು ಒಪ್ಪಿಕೊಂಡಿದ್ದೇವೆ. ಆದರೆ ಇತರರು ಅದನ್ನು ಒಪ್ಪಿಕೊಂಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು.

ಹಿಂದೂಗಳು ಮಕ್ಕಳಿಗೆ ಜನ್ಮ ನೀಡುವುದನ್ನು ನಿಲ್ಲಿಸಬಾರದು. ನಮಗೆ ಇಬ್ಬರು ಮಕ್ಕಳಾದ ಬಳಿಕ, ಸಾಕು ಅಂದಿದ್ದಳು ನನ್ನ ಮಡದಿ, ಆದರೆ ನಾನು ಹೇಳಿದೆ ನಾವು 4-5 ಮಕ್ಕಳನ್ನು ಪಡೆಯೋಣ ಎಂದರು.

ಸೈನಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕ್ರಿಶ್ಚಿಯನ್ನರನ್ನು ಸಂಬೋಧಿಸಿ ವಾಗ್ದಾಳಿ ನಡೆಸಿದ್ದ ಅವರು, ಹೊಸವರ್ಷಾಚರಣೆ ಕ್ರೈಸ್ತರ ಹಬ್ಬ, ಈ ಆಚರಣೆಯಿಂದ ಹಿಂದೂಗಳು ದೂರವಿರಿ ಎಂದು ಮನವಿ ಮಾಡಿದ್ದರು.

Comments are closed.