ವಿಶಿಷ್ಟ

ಓದಿರುವುದು ಎಂಜಿನಿಯರಿಂಗ್ ಆದರೂ ಮಾಡುವ ಕೆಲಸವನ್ನೊಮ್ಮೆ ನೋಡಿ…

Pinterest LinkedIn Tumblr

ಇವರು ಓದಿರುವುದು ಎಂಜಿನಿಯರಿಂಗ್ ಆದರೆ ಹರಿವೆ, ಪಾಲಾಕ್ ಹೀಗೆ ವಿವಿಧ ತರಕಾರಿಗಳನ್ನು ಬೆಳೆಯುವುದು ಹಾಗೂ ಮಾರುವುದು ಇವರ ಉದ್ಯೋಗ!

ಇವರ ಹೆಸರು ಶ್ರೀರಾಮ್ ಪ್ರಸಾದ್‌, ಕೊಯಂಬತ್ತೂರು ಮೂಲದವರು. ಎಂಜಿನಿಯರಿಂಗ್‌ ಓದಿದ ಬಳಿಕ ಐಟಿ ಕಂಪನಿಯಲ್ಲಿ 10 ವರ್ಷ ದುಡಿದರು. ಕೈ ತುಂಬಾ ಸಂಬಳ ಬರುತ್ತಿದ್ದರೂ ಬ್ಯುಸಿ ಜೀವನದಲ್ಲಿ ನೆಮ್ಮದಿ ಇಲ್ಲ ಅನಿಸತೊಡಗಿತ್ತು, ಐಟಿ ಕ್ಷೇತ್ರಕ್ಕಿಂತ ಕೃಷಿಯೆಡೆಗೆ ಒಲವು ಹೆಚ್ಚಾಗುತ್ತಾ ಹೋಯ್ತು.

ಕಂಪ್ಯೂಟರ್‌ ಕೀಬೋರ್ಡ್‌ ಕುಟ್ಟುವ ಬದಲಿಗೆ ಊರಿಗೆ ಹೋಗಿ ಹೊಲದಲ್ಲಿ ತರಕಾರಿ ಬೀಜಗಳನ್ನು ಹಾಕಿ ಬೆಳೆಯಲಾರಂಭಿಸಿದರು. ರೈತರಿಂದ ಒಂದಿಷ್ಟು ಜಾಗವನ್ನು ಗುತ್ತಿಗೆ ಪಡೆದುಕೊಂಡು ಆ ಜಾಗದಲ್ಲೂ ಪಾಲಾಕ್, ಹರಿವೆ ಸೊಪ್ಪು ಬೆಳೆದರು. ಬೆಳೆದ ಸೊಪ್ಪಿನ ಮಾರಾಟಕ್ಕೆ ತನ್ನ ಐಟಿ ತಲೆ ಉಪಯೋಗಿಸಿ ಕೀರೈ ಎಂಬ ವೆಬ್‌ಸೈಟ್‌ ಪ್ರಾರಂಭಿಸಿದರು.

ಸುತ್ತಮುತ್ತಲಿನ ಊರಿಗೆ 40 ಬಗೆಯ ಸೊಪ್ಪು ಮಾರಾಟ ಮಾಡುತ್ತಿರುವ ಶ್ರೀರಾಮ್‌ಗೆ ನೂರಕ್ಕೂ ಅಧಿಕ ಬಗೆಯ ಸೊಪ್ಪು ಬೆಳೆದು ಇಡೀ ದಕ್ಷಿಣ ಭಾರತದಲ್ಲಿ ಮಾರಾಟ ಮಾಡುವಂತಾಗಬೇಕೆಂಬ ಆಸೆ. ಕೃಷಿಯಲ್ಲೂ ಕೈ ತುಂಬಾ ಗಳಿಸಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಶ್ರೀರಾಮ್.

Comments are closed.