ವಿಶಿಷ್ಟ

ನಿಮ್ಮ ಪ್ರೇಯಸಿಯ ಪ್ರೀತಿ ನಿಜವೋ ಅಥವಾ ಹಣಕ್ಕಾಗಿಯೋ ಎಂಬುದನ್ನು ತಿಳಿದುಕೊಳ್ಳಲು ಈ ಟಿಪ್ಸ್ ಬಳಸಿ….

Pinterest LinkedIn Tumblr

love

ನಿಮ್ಮ ಪ್ರೇಯಸಿ ನಿಮ್ಮನ್ನು ತುಂಬಾ ಪ್ರೀತಿಸುತ್ತಾಳೆ ಅಂತರ ನಿಮಗೆ ಅನಿಸುತ್ತದಾ? ಇದು ನಿಜವಾಗಿರಬಹುದು. ಆದರೆ ನಿಮ್ಮ ಪ್ರೇಯಸಿ ನಿಮ್ಮನ್ನಲ್ಲದೆ ಕೇವಲ ನಿಮ್ಮ ಹಣವನ್ನು ಪ್ರೀತಿಸುತ್ತಾಳೆಂದಾದರೆ? ಮುಂದಿನ ದಿನಗಳಲ್ಲಿ ಆಕೆಗೆ ನಿಮಗಿಂತ ಹೆಚ್ಚಿನ ಶ್ರೀಮಂತ ಹುಡುಗ ಸಿಕ್ಕಿದನೆಂದಾದರೆ? ಮುಂದೇನು…. ಆಕೆ ನಿಮ್ಮ ಹಣವನ್ನು ಪ್ರೀತಿಸುತ್ತಾಳಾ? ಅಥವಾ ನಿಮ್ಮನ್ನೇ ಪ್ರೀತಿಸುತ್ತಾಲಾ ಹೇಗೆ ತಿಳಿದುಕೊಳ್ಳುವುದು? ಇಲ್ಲಿದೆ ಕೆಲವೊಂದು ಟಿಪ್ಸ್

ಸಾಲದ ಬೇಡಿಕೆ
ನಿಮ್ಮ ಪ್ರೇಯಸಿ ನಿರಂತರವಾಗಿ ನನ್ನ ಬಳಿ ಈಗ ಚೇಂಜ್ ಇಲ್ಲ ಹಣ ನೀವೇ ನೀಡಿ ಎನ್ನುತ್ತಿರುತ್ತಾಳೆ. ಯಾವತ್ತೂ ಆಕೆಗಾಗಿ ನೀವೇ ಖರ್ಚು ಮಾಡುತ್ತೀರೆಂದಾದರೆ ಆಕೆ ಉದ್ದೇಶಪೂರ್ವಕವಾಗಿ ಯಾವತ್ತೂ ತನ್ನ ಬಳಿ ಚೇಂಚ್ ಇಟ್ಟುಕೊಳ್ಳುವುದೇ ಇಲ್ಲ. ಕೆಲವೊಂದು ಬಾರಿ ಅವಶ್ಯಕತೆ ಇಲ್ಲದಿದ್ದರೂ ನಿಮಗೆ ಹಣದ ಬೇಕಿದೆ ಎಂದು ಆಕೆಗೆ ಹೇಳಿ. ಬಳಿಕ ನೋಡಿ ಆಕೆ ನಿಮಗೆ ಯಾವ ರೀತಿ ಸಹಾಯ ಮಾಡುತ್ತಾಳೆಂದು. ಒಂದು ವೇಳೆ ಆಕೆ ಏನೂ ಯೋಚಿಸದೆ ಹಣ ನೀಡುತ್ತಾಳೆಂದಾದರೆ ಆಕೆ ನಿಮ್ಮ ಹಣದ ಮೇಲೆ ಅವಲಂಭಿತಳಾಗಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ.

ಕೇವಲ ಹಣವೇ ಆಕೆಗೆ ಮುಖ್ಯ
ಆಕೆ ಐಷಾರಾಮಿ ರೆಸ್ಟೋರೆಂಟ್’ಗೆ ಹೋಗಲಿಚ್ಛಿಸುತ್ತಾಳೆ. ಹೀಗಿರುವಾಗ ಮೆನುವಿನಲ್ಲಿ ದುಬಾರಿ ತಿಂಡಿಯನ್ನೇ ಆರ್ಡರ್ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಕೆಲವೊಮ್ಮೆ ಪರ್ಸ್ ಮನೆಯಲ್ಲಿ ಬಿಟ್ಟು ಬಂದಿರುವ ನೆಪ ನೀಡಿ ಆಕೆಯನ್ನು ಪರೀಕ್ಷಿಸಿ. ಆಗಲೂ ಆಕೆ ದುಬಾರಿ ರೆಸ್ಟೋರೆಂಟ್’ಗೆ ತೆರಳುತ್ತಾಳೋ ಇಲ್ಲವೋ ಎಂದು ನೋಡಿ.

ಶಾಪಿಂಗ್ ಸಂದರ್ಭಗಳು
ನಿಮ್ಮ ಪ್ರೇಯಸಿಗೆ ನಿಮ್ಮ ಹಣದ ಮೇಲೆ ಮೋಹವಿದ್ದರೆ ಆಕೆ ನಿಮ್ಮೊಂದಿಗೆ ಸಮಯ ಕಳೆಯುವುದಕ್ಕಿಂತ ಹೆಚ್ಚು ನಿಮ್ಮೊಂದಿಗೆ ಶಾಪಿಂಗ್ ಮಾಡಲು ಬಯಸುತ್ತಾಳೆ. ಗಿಫ್ಟ್ ಪಡೆಯಲು ಹಾಗೂ ಶಾಪಿಂಗ್’ಗೆ ತೆರಳಲು ಆಕೆ ಅವಕಾಶ ಹುಡುಕುತ್ತಿರುತ್ತಾಳೆ. ಈ ವೇಳೆ ಹಣವೂ ನೀವೇ ಖರ್ಚು ಮಾಡುವಂತೆ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾಳೆ.

Comments are closed.