ರಾಷ್ಟ್ರೀಯ

ಆರ್‍ಬಿಐ ಗವರ್ನರ್ ತಿಂಗಳಿಗೆ ಪಡೆಯುವ ಸಂಬಳ ಎಷ್ಟು ಗೊತ್ತಾ..?

Pinterest LinkedIn Tumblr

urjith

ಮುಂಬೈ: ಭಾರತೀಯ ರಿಸರ್ವ ಬ್ಯಾಂಕ್‍ನ ಗವರ್ನರ್ ಊರ್ಜಿತ್ ಪಟೇಲ್ ಒಂದು ತಿಂಗಳಿಗೆ 2.9 ಲಕ್ಷ ರೂ. ಸಂಬಳವನ್ನು ಪಡೆಯುತ್ತಾರೆ. ಆದರೆ ಯಾವುದೇ ಹೆಚ್ಚಿನ ಸೌಲಭ್ಯ ಪಡೆಯುತ್ತಿಲ್ಲ ಎನ್ನುವ ವಿಚಾರ ಮಾಹಿತಿ ಹಕ್ಕಿನ ಅಡಿ ಬಹಿರಂಗವಾಗಿದೆ.

ಆರ್‍ಟಿಐ ಅಡಿ ಕೇಳಲಾದ ಪ್ರಶ್ನೆಗೆ ಆರ್‍ಬಿಐ ಪ್ರಸ್ತುತ ಎರಡು ಕಾರು ಮತ್ತು ಇಬ್ಬರು ಡ್ರೈವರ್‍ಗಳನ್ನು ಗವರ್ನರ್ ನೇಮಿಸಿಕೊಂಡಿದ್ದಾರೆ ಎಂದು ಉತ್ತರ ನೀಡಿದೆ. ಅಕ್ಟೋಬರ್ ತಿಂಗಳಲ್ಲಿ ಗರ್ವನರ್ ಆಗಿ ನೇಮಕವಾದ ಉರ್ಜಿತ್ ಪಟೇಲ್ ರಘುರಾಮ್ ರಾಜನ್‍ರಷ್ಟೇ ಸಂಬಳ ಸಂಬಳವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.

ರಘುರಾಮ್ ರಾಜನ್ ಸಂಬಳ ನಿವೃತ್ತಿ ವೇಳೆ ಕೂಡ ಕೊನೆಯದಾಗಿ 2.09 ಲಕ್ಷ ರೂ. ಸಂಬಳವನ್ನು ಪಡೆದಿದ್ದರು. ರಾಜನ್ ಗವರ್ನರ್ ಆಗಿ ಸಪ್ಟೆಂಬರ್ 5,2013ರಂದು ನೇಮಕಗೊಂಡಾಗ ತಿಂಗಳಿಗೆ 1.69 ಲಕ್ಷ ರೂ. ಪಡೆಯುತ್ತಿದ್ದರು. ನಂತರದ ದಿನಗಳಲ್ಲಿ ಸಂಬಳವನ್ನು ಪರಿಷ್ಕರಿಸಿದ ನಂತರ 2014 ಮತ್ತ 2015ರಲ್ಲಿ ಕ್ರಮವಾಗಿ 1.78 ಲಕ್ಷ, 1.87 ಲಕ್ಷ ರೂ. ಸಂಬಳ ಏರಿಕೆಯಾಗಿತ್ತು. ಇತ್ತೀಚಿಗೆ 2014 ರಲ್ಲಿ ಗವರ್ನರ್ ಸ್ಯಾಲರಿ 2.04 ರಿಂದ 2.09 ಲಕ್ಷ ರೂ.ಗಳಿಗೆ ಏರಿಕೆ ಆಗಿತ್ತು.

ಹಿಂದಿನ ಗವರ್ನರ್ ಆಗಿದ್ದ ರಘುರಾಂ ರಾಜನ್ ಮೂರು ಕಾರು ಮತ್ತು ನಾಲ್ಕು ಡ್ರೈವರ್‍ಗಳನ್ನು ಹೊಂದಿದ್ದರು. ಒಬ್ಬ ಕೇರ್‍ಟೇಕರ್ ಮತ್ತು ಒಂಬತ್ತು ಜನ ಸಹಾಯಕರನ್ನು ಹೊಂದಿದ್ದರು. ಬ್ಯಾಂಕ್ ಒದಗಿಸಿದ್ದ ಬಂಗಲೆಯಲ್ಲಿ ರಾಜನ್ ವಾಸವಾಗಿದ್ದರು ಎಂದು ಆರ್‍ಬಿಐ ಹೇಳಿದೆ.

ರಘುರಾಂ ರಾಜನ್ ನಂತರ ಊರ್ಜಿತ್ ಪಟೇಲ್, ಅಗಸ್ಟ್ 20ರಂದು ಆರ್‍ಬಿಐ ಗರ್ವನರ್ ಆಗಿ ನೇಮಕಗೊಂಡಿದ್ದಾರೆ. ಸದ್ಯ ಮುಂಬೈ ನಗರದ ಬ್ಯಾಂಕಿನ ಫ್ಲಾಟ್‍ನಲ್ಲಿ ವಾಸವಾಗಿದ್ದಾರೆ.

Comments are closed.