ವಿಶಿಷ್ಟ

ನೀವು ‘ಡೇಟಿಂಗ್`ಗೆ ಹೋಗುವ ಈ ವಿಷಯಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಿ….

Pinterest LinkedIn Tumblr

dating

ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಸಾಮಾನ್ಯ ಪದ ಡೇಟಿಂಗ್….. ಹುಡುಗ-ಹುಡುಗಿ ಡೇಟಿಂಗ್ ನಡೆಸುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಸಿನಿಮಾಗಳ ಪ್ರಭಾವವೋ ಅಥವಾ ಪಾಶ್ಚಿಮಾತ್ಯರ ಅನುಕರಣೆಯೋ ಡೇಟಿಂಗ್ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ. ನಗರ ಪ್ರದೇಶಗಳಲ್ಲಿ ಈ ಸಂಖ್ಯೆ ಹೆಚ್ಚು. ಹಾಗಾದರೆ, ನೀವು ಡೇಟಿಂಗ್ ಮಾಡುವ ಪುರುಷ ಅಥವಾ ಮಹಿಳೆ ಹೇಗಿರಬೇಕು. ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲ ವಿಷಯಗಳು ಇಲ್ಲಿವೆ.

ಗೌರವಾನ್ವಿತನೇ..?: ನೀವು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿ ಪ್ರಾಮಾಣಿಕನೇ ಅಥವಾ ಸುಳ್ಳುಗಾರನೇ ಎಂಬುದನ್ನ ತಿಳಿದುಕೊಳ್ಳಿ. ಅವರ ತಂದೆ-ತಾಯಿ ಜೊತೆ ಎಷ್ಟು ವಿಧೇಯನಾಗಿದ್ದಾನೆ ಎಂದು ಅರಿಯಿರಿ

ಮೆಡಿಕಲ್ ಕಂಡೀಷನ್ : ನಿಮ್ಮ ಪ್ರೀತಿ ಪಾತ್ರ ಹುಡುಗನ ಮೆಡಿಕಲ್ ಕಂಡೀಶನ್ ತಿಳಿದುಕೊಳ್ಳುವುದು ಬಹುಮುಖ್ಯವಾದ ಅಂಶ. ಯಾವುದೇ ರೀತಿಯ ಮಾರಕ ರೋಗಗಳ ಸೋಂಕಿನ ಬಗ್ಗೆ ಖಚಿತಪಡಿಸಿಕೊಂಡರೆ ಉತ್ತಮ. ನಡವಳಿಕೆಯಲ್ಲಿನ ಮಾನಸಿಕ ಸ್ಥಿತಿ ಅರಿಯಬೇಕು.

ಉದ್ದೇಶ : ಯಾವುದೇ ಹುಡುಗ ಅಥವಾ ಹುಡುಗಿ ನಿಮ್ಮ ಜೊತೆ ಡೇಟಿಂಗ್ ಮಾಡಲು ಇಚ್ಛಿಸುತ್ತಿರುವುದು ನಿಮ್ಮನ್ನ ಲೈಂಗಿಕವಾಗಿ ಅನುಭವಿಸಲೋ..? ಹಣದ ಆಸೆಯಿಂದಲೋ ಅಥವಾ ಇನ್ಯಾವುದೇ ಸ್ವಾರ್ಥದ ಮನೋಭಾವ ಇದೆಯೇ ಎಂಬುದನ್ನ ತಿಳಿದುಕೊಳ್ಳಿ.

ಪರ್ಮನೆಂಟ್ ಅಡ್ರೆಸ್: ನೀವು ಡೇಟಿಂಗ್ ಮಾಡುವ ವ್ಯಕ್ತಿಯ ಪರ್ಮನೆಂಟ್ ಅಡ್ರೆಸ್ ಅನ್ನ ತಪ್ಪದೇ ತಿಳಿದುಕೊಳ್ಳಿ, ಮೂಲದ ಬಗ್ಗೆ ಕೆದಕಿ ಕೆದಕಿ ಮಾಹಿತಿ ಪಡೆಯಿರಿ

ಕ್ರಿಮಿನಲ್ ಇತಿಹಾಸ: ನೀವು ಡೇಟಿಂಗ್ ಮಾಡುವ ಪುರುಷ ಅಥವಾ ಮಹಿಳೆಯ ಪೂರ್ವಾಪರಗಳನ್ನ ಪರಿಶೀಲಿಸಿ, ಕ್ರಿಮಿನಲ್ ಕೇಸ್`ನಂತಹ ಹಿನ್ನೆಲೆ ಇದ್ದರೆ ಎಚ್ಚರಿಕೆ ವಹಿಸಿ.

ಸಂಗಾತಿಯ ಕೆಲಸ: ನೀವು ಮನಃಪೂರ್ವಕವಾಗಿ ಸಂಗಾತಿಯೆಂದು ಒಪ್ಪಿಕೊಳ್ಳುವ ವ್ಯಕ್ತಿಯ ಹುದ್ದೆಯನ್ನ ಖಚಿತಪಡಿಸಿಕೊಳ್ಳಿ. ಕೆಲಸದ ಬಗ್ಗೆ ಸುಳ್ಳು ಹೇಳುತ್ತಿರುವ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ. ಸತ್ಯಾಸತ್ಯತೆ ಅರಿಯಿರಿ..

ಹವ್ಯಾಸ; ನಿಮ್ಮ ಸಂಗಾತಿಯ ಹವ್ಯಾಸದ ಬಗ್ಗೆ ತಿಳಿದುಕೊಳ್ಳಿ, ಇದರಿಂದ ನಿಮ್ಮಿಬ್ಬರ ಬಾಂಧವ್ಯ ಹೆಚ್ಚುತ್ತದೆ.

ಮಕ್ಕಳು ಪಡೆಯುವ ಬಗ್ಗೆ: ನಿಮ್ಮ ಸಂಗಾತಿಯ ಜೊತೆ ಲಿವ್ ಇನ್ ರಿಲೇಶನ್`ಶಿಪ್ ಹೊಂದುವಂತಿದ್ದರೆ ಮಕ್ಕಳನ್ನ ಮಾಡಿಕೊಳ್ಳುವ ಬಗ್ಗೆ ಮೊದಲೇ ಚರ್ಚಿಸಿ ನಿರ್ಧಾರ ಕೈಗೊಳ್ಳಿ.

Comments are closed.