ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ನಿರಾಕರಿಸಲ್ಪಟ್ಟ ಶಬರಿಮಲೆ ಹಾಗೂ ಶನಿ ಶಿಂಗ್ಣಾಪುರ ದೇವಸ್ಥಾನದ ಕುರಿತು ನೀವು ಕೇಳಿರಬಹುದು. ಆದರೆ ಪುರುಷರಿಗೆ ಪ್ರವೇಶ ನಿಷೇಧವಿರುವ ದೇವಸ್ಥಾನ ಭಾರತದಲ್ಲಿದೆ ಎಂಬುದನ್ನು ಕೇಳಿರಲಾರಿರಿ!
ಭಾರತೀಯ ಮಹಿಳೆ ಹಿಂದಿನಿಂದಲೂ ಲಿಂಗತಾರತಮ್ಯ ಎದುರಿಸುತ್ತಾ ಬಂದಿದ್ದಾಳೆ ಅದು ಈಗಲೂ ಮುಂದುವರಿದಿದೆ. ಸಾಮಾಜಿಕ ಕಟ್ಟುಪಾಡುಗಳಿಂದ ಆಕೆಗೆ ಮುಕ್ತಿ ಸಿಕ್ಕಿಲ್ಲ. ಆದರೆ, ಇಂದಿಗೂ ಆಕೆಗೆ ಪೂಜೆ ಸಲ್ಲಿಸಲು ನಿಷೇಧಿಸಲ್ಪಟ್ಟ ಹಲವು ಸ್ಥಳಗಳು ಭಾರತದಲ್ಲಿವೆ.
ಪುರುಷರಿಗೆ ಕೆಲವು ದೇವಸ್ಥಾನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಅದು ಕೆಲವೆಡೆ ವರ್ಷಪೂರ್ತಿ ಇನ್ನು ಕೆಲವೆಡೆ ನಿರ್ದಿಷ್ಟ ಸಮಯದಲ್ಲಾಗಿದೆ.
ಅಟ್ಟುಕಲ್ ದೇವಾಲಯ, ಕೇರಳ
ಕೇರಳದಲ್ಲಿ ಪೊಂಗಲ್ ಹಬ್ಬ ಬಹಳ ಪ್ರಸಿದ್ಧಿ. ಪ್ರತಿವರ್ಷ ಇಲ್ಲಿ ಲಕ್ಷಾಂತರ ಮಹಿಳೆಯರು ಸಮಾಗಮಗೊಳ್ಳುತ್ತಾರೆ. ಈ ದೇವಾಲಯ ಕನ್ನಕಿ(ಪಾರ್ವತಿ)ಗೆ ಸಂಬಂಧಿಸಿದ್ದು, ಇಲ್ಲಿಗೆ ಹೆಚ್ಚಿಗೆ ಮಹಿಳೆಯರು ಆಗಮಿಸುವುದರಿಂದ ಇದನ್ನು ಮಹಿಳೆಯರ ಸಬರಿಮಲೆ ಎಂದು ಕರೆಯುತ್ತಾರೆ. ಹಿಂದೂ ಧರ್ಮಶಾಸ್ತ್ರದ ಪ್ರಕಾರ, ಈ ದೇವಾಲಯ ಸಮಾಜದಲ್ಲಿರುವ ದುಷ್ಟ ಶಕ್ತಿಗಳನ್ನು ಸೋಲಿಸಲು ಮಹಿಳೆಗೆ ಆಧ್ಯಾತ್ಮ ಶಕ್ತಿ ನೀಡಿತ್ತು ಎಂದು ನಂಬಲಾಗುತ್ತದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಈ ದೇವಾಲಯದ ಮಹೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವಿ ಕನ್ನಿಕೆಗೆ ಮಹಿಳೆಯರು ಬಳೆಗಳನ್ನು ಸಮರ್ಪಿಸುತ್ತಾರೆ.
ಭಕ್ತಿ ಮಾ ದೇವಾಲಯ, ಕನ್ಯಾಕುಮಾರಿ
ಕನ್ಯಾಕುಮಾರಿಯ ಭೂಶಿರದ ಮೇಲೆ ಶ್ರೀ ಭಗವತಿ ದೇವಾಲಯ ನೆಲೆನಿಂತಿದೆ. ಇದನ್ನು ಬಂಗಾಳಕೊಲ್ಲಿ, ಭಾರತೀಯ ಸಾಗರ ಮತ್ತು ಅರಬಿಯನ್ ಸಮುದ್ರ ಸುತ್ತುವರಿದಿದೆ. ಸಾಧು ಪರಶುರಾಮನಿಂದ ಪರಿಶುದ್ಧಗೊಂಡ ಸ್ಥಳವಾಗಿದೆ ಎಂದು ಹಿಂದೂ ಧರ್ಮಶಾಸ್ತ್ರ ಹೇಳುತ್ತದೆ. ಇದು ಶಕ್ತಿಪೀಠಗಳಲ್ಲಿ ಒಂದಾಗಿದೆ. ಭಗವತಿಯನ್ನು ಸನ್ಯಾಸ ದೇವತೆ ಎಂದೂ ಕರೆಯಲಾಗುತ್ತದೆ. ಆದ್ದರಿಂದ ಇಲ್ಲಿ ಮದುವೆಯಾದ ಪುರುಷರಿಗೆ ಪ್ರವೇಶ ನಿಷೇಧಿಸಲಾಗಿದೆ. ಸನ್ಯಾಸಿಯಾದ ಪುರುಷನಿಗೆ ದೇವಾಲಯದ ಗೇಟ್‍ವರೆಗೆ ಮಾತ್ರ ಪ್ರವೇಶವಿದೆ.
ಚಕ್ಕುಲಥುಕವು ದೇವಾಲಯ, ಆಲಪ್ಪುಝ, ಕೇರಳ
ಚಕ್ಕುಲಥುಕವು ದೇವಾಲಯದಲ್ಲಿ ದುರ್ಗಾ ದೇವತೆಯನ್ನು ಪೂಜಿಸಲಾಗುತ್ತದೆ. ಕೇರಳದ ಆಲಪ್ಪುಝ ಜಿಲ್ಲೆಯಲ್ಲಿದೆ ಈ ದೇವಸ್ಥಾನ. ಪೊಂಗಲ್ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಮಹಿಳೆಯರು ಇಲ್ಲಿ ಸೇರುತ್ತಾರೆ. ಇಲ್ಲಿ ನಾರಿ ಪೂಜೆ ಎಂಬ ವಿಶೇಷ ಪೂಜೆ ನಡೆಯುತ್ತದೆ. ಇದಲ್ಲದೆ ಧನು ಎಂಬ ವಿಶೇಷ ಧಾರ್ಮಿಕ ವಿಧಿ 10 ದಿನಗಳ ಕಾಲ ನಡೆಯುತ್ತದೆ. ಇದರಲ್ಲಿ ಮಹಿಳಾ ಭಕ್ತರು ಮಾತ್ರ ಪಾಲ್ಗೊಳ್ಳುವುದು ವಿಶೇಷತೆಯಾಗಿದೆ.
ಬ್ರಹ್ಮ ದೇವಾಲಯ, ಪುಷ್ಕರ್, ರಾಜಸ್ತಾನ
ಜಗತ್ತಿನಲ್ಲಿ ಬ್ರಹ್ಮನಿಗೆ ಅರ್ಪಿತವಾದ ದೇವಾಲಯ ಇದೊಂದೇ ಎಂದು ಹೇಳಬಹುದು. ರಾಜಸ್ತಾನದ ಪುಷ್ಕರ್ ಎಂಬ ಸ್ಥಳದಲ್ಲಿ ಈ ದೇವಸ್ಥಾನವಿದೆ. ಇದು ಪುಷ್ಕರ್ ಕೆರೆಯ ಸಮೀಪವಿದೆ. ಬ್ರಹ್ಮ ದೇವ ಈ ಪುಷ್ಕರ್ ಕೆರೆಯಲ್ಲಿ ಯಜ್ಞ ನಡೆಸಲು ಉದ್ದೇಶಿಸಿದ. ಆದರೆ ಸಮಯಕ್ಕೆ ಸರಿಯಾಗಿ ಆತನ ಪತ್ನಿ ಸರಸ್ವತಿ ದೇವಿ ಆಗಮಿಸಲಿಲ್ಲ. ಆದ್ದರಿಂದ ಬ್ರಹ್ಮ ಧಾರ್ಮಿಕ ವಿಧಿವಿಧಾನ ಪೂರೈಸಲು ಇಲ್ಲಿ ಗಾಯತ್ರಿ ದೇವಿಯನ್ನು ಮದುವೆಯಾದ. ಇದನ್ನು ಪಾರ್ವತಿ ನೋಡಿದ್ದು, ಆಕ್ರೋಶಗೊಂಡು ದೇವಾಲಯದ ಗರ್ಭಗುಡಿಗೆ ಮದುವೆಯಾದ ಮಹಿಳೆಯರು ಒಳಪ್ರವೇಶಿಸಬಾರದು ಎಂದು ಹೇಳಿ ದೇವಾಲಯವನ್ನು ನಾಶ ಮಾಡುತ್ತಾಳೆ. ಈ ಹಿನ್ನೆಲೆಯಲ್ಲಿ ಪುರುಷರಿಗೆ ಇಲ್ಲಿ ಪ್ರವೇಶ ನಿಷೇಧ ಹೇರಲಾಗಿದೆ.

ಮಾತಾ ಟೆಂಪಲ್, ಮುಝಫ್ಫರ್‍ಪುರ್, ಬಿಹಾರ
ಇಲ್ಲಿ ನಿರ್ದಿಷ್ಟ ಸಮಯದಲ್ಲಿ ಪುರುಷರಿಗೆ ಮಾತ್ರ ನಿಷೇಧ ಹೇರಲಾಗುತ್ತದೆ. ಈ ಸಂದರ್ಭದಲ್ಲಿ ಪುರುಷ ಅರ್ಚಕನಿಗೂ ಒಳಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಇಲ್ಲಿ ಕೇವಲ ಮಹಿಳೆಯರಿಗೆ ಪ್ರವೇಶವಿರುತ್ತದೆ.