ಪ್ರಮುಖ ವರದಿಗಳು

ನಿಮಗೆ ಪಾಟಿಯಾಲ ಪೆಗ್ ಬಗ್ಗೆ ಗೊತ್ತೇ…? ಈ ಬಗ್ಗೆ ಕುತೂಹಲಕಾರಿ ವಿಷಯ ಮುಂದಿದೆ ಓದಿ…

Pinterest LinkedIn Tumblr

pati

ಯಾರಿಗೆ ತಾನೇ ಪಾಟಿಯಾಲ ಪೆಗ್ ಬಗ್ಗೆ ಗೊತ್ತಿಲ್ಲ? ನಿಮ್ಮ ಜೈನ್ ಗೆಳೆಯರು ಸಹ ಈ ವಿಷಯ ಕುರಿತು ತಿಳಿದುಕೊಂಡಿರಲಿಕ್ಕಿಲ್ಲ. ನಿಜಕ್ಕೂ ಇದೊಂದು ದೇಶೀಯ ವಸ್ತುವಾಗಿದೆ. ಪ್ರತಿಯೊಬ್ಬ ಭಾರತೀಯನು ಈ ಕುರಿತು ತಿಳಿದುಕೊಂಡಿದ್ದಾನೆ. ಒಂದು ವೇಳೆ ತಿಳಿದುಕೊಂಡಿರದಿದ್ದರೆ ಪ್ರತಿ ಭಾರತೀಯರು ಇದನ್ನು ಕಡ್ಡಾಯವಾಗಿ ತಿಳಿದುಕೊಳ್ಳಲೇ ಬೇಕು.

ಈ ಕುರಿತು ತಿಳಿದುಕೊಂಡಿರದ ಪಂಜಾಬಿಗಳೇ ಇಲ್ಲ. ಹಾಗೂ ಪಾಟಿಯಾಲ ಪೆಗ್ಗನ್ನು ಇಷ್ಟ ಪಡದಿರುವವರೇ ಇಲ್ಲ. ಒಂದು ವೇಳೆ ಈ ಕುರಿತು ಸಂಶಯವಿದ್ದರೆ ಅವರ ಪಂಜಾಬಿತನದ ಬಗ್ಗೆಯೇ ಸಂಶಯ ಮೂಡುವುದರಲ್ಲಿ ಅನುಮಾನವೇ ಇಲ್ಲ.

patiyala1

ಪಾಟಿಯಾಲ ಪೆಗ್ ನಿಜಕ್ಕೂ 1891, 1938ರ ದಶಕದಲ್ಲಿ ಪಾಟಿಯಾಲದಲ್ಲಿ ಆಡಳಿತ ನಡೆಸುತ್ತಿದ್ದ ಮಹಾರಾಜ ಭೂಪೇಂದ್ರ ಸಿಂಗ್‍ನೊಂದಿಗೆ ಕೇಳಿಬಂದಿದೆ. ಬಹುಶಃ ಈ ಮೊದಲು ನೀವು ಭೂಪೇಂದ್ರ ಸಿಂಗ್ ರಾಜನ ಹೆಸರನ್ನು ಕೇಳಿರಲಿಕ್ಕಿಲ್ಲ. ಒಂದು ವೇಳೆ ಕೇಳಿರದಿದ್ದರೆ ಈಗ ನಾವು ಹೇಳುವ ಈ ಕಥೆಯೊಂದಿಗೆ ಮುಂದೆ ಅವನ ಕುರಿತು ಬರುವ ಎಲ್ಲಾ ಕಥೆಗಳನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಮಹಾರಾಜ ಭೂಪೇಂದ್ರ ಸಿಂಗ್ ಒಮ್ಮೆ ಆದೇಶ ನೀಡಿ, ತನ್ನ ರೋಲ್ಸ್ ರಾಯ್ ಕಾರನ್ನು ಕಸ ಸಾಗಿಸುವ ಟ್ರಕ್ಕನ್ನಾಗಿ ಬದಲಾಯಿಸಲು ಸೂಚಿಸಿದ್ದನಂತೆ. ಇದಕ್ಕೆ ಪ್ರಮುಖ ಕಾರಣ ಈ ಹಿಂದೆ ಮಹಾರಾಜ ಭೂಪೇಂದ್ರ ಸಿಂಗ್ ಕಂಪನಿಗೆ ನೀಡಿದ್ದ ಆದೇಶವನ್ನು ಕಂಪನಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ರೋಲ್ಸ್ ರಾಯ್ ಕಾರನ್ನು ಕಸ ಸಾಗಿಸುವ ಟ್ರಕ್ಕನ್ನಾಗಿ ಬದಲಾಯಿಸಲು ಸೂಚಿಸಿದ್ದ ಎನ್ನುವುದು ಪ್ರಚಲಿತದಲ್ಲಿರುವ ಅಂಶವಾಗಿದೆ.

patiyala

ಇದರೊಂದಿಗೆ ಈತ 1928ರಲ್ಲಿ 2930 ವಜ್ರಗಳುಳ್ಳ ಪಾಟಿಯಾಲ ನೆಕ್ಲೆಸ್ ಸರವನ್ನು ಸಹ ಹೊಂದಿದ್ದ ಎನ್ನಲಾಗಿದೆ. ಜಗತ್ತಿನ ಅತಿ ದೊಡ್ಡ ಏಳನೆ ದೊಡ್ಡ ವಜ್ರವನ್ನು ಈ ನೆಕ್ಲೆಸ್‍ನಲ್ಲಿ ಅಳವಡಿಸಲಾಗಿತ್ತು ಎನ್ನಲಾಗಿದೆ.

ರಾಜ ಭೂಪೇಂದ್ರ ಸಿಂಗ್ ತನ್ನ ಅತಿಥಿಗಳಿಗೆ ಉತ್ತಮ ಅತಿಥಿ ಸತ್ಕಾರ ನೀಡುವಲ್ಲಿಯೂ ಹೆಸರುವಾಸಿಯಾಗಿದ್ದನು. ಅದೇ ವೇಳೇ ಈ ಪಾಟಿಯಾಲ ಪೆಗ್ ಕೂಡ ಹೊರಜಗತ್ತಿಗೆ ಪರಿಚಯವಾಯಿತು ಎನ್ನಲಾಗಿದೆ.

ಮಹಾರಾಜ ಭೂಪೇಂದ್ರ ಸಿಂಗ್ ಆಳ್ವಿಕೆಯಲ್ಲಿ ಉತ್ತಮ ಪೋಲೋ ಆಟಗಾರರ ತಂಡವನ್ನು ಹೊಂದಿದ್ದು, ತಂಡದಲ್ಲಿ ಸಿಕ್‍ನ ದಂತಕಥೆಗಳಾಗಿರುವ ಸೈನಿಕರು ಕೂಡ ಕ್ರೀಡಾಪಟುಗಳಾಗಿದ್ದರು. ಒಮ್ಮೆ ಮಹಾರಾಜ ಐರಿಷ್‍ನ ಪೋಲೋ ತಂಡವನ್ನು ಸ್ಪರ್ಧೆಗಾಗಿ ಆಹ್ವಾನಿಸಿದ್ದಾನೆ. ಆ ತಂಡ ಜಯಗಳಿಸುವಲ್ಲಿ ಬಹಳ ಯಶಸ್ವಿ ಹಾಗೂ ಉತ್ತಮ ಆಟಗಾರರನ್ನು ಒಳಗೊಂಡ ತಂಡವಾಗಿತ್ತು. ತಂಡದ ಕುರಿತು ಐರಿಷ್ ಜನರಿಗೆ ಬಹಳ ಹೆಮ್ಮೆ ಇತ್ತು.

ಪ್ರಮುಖವಾಗಿ ಐರಿಷ್‍ನವರು ಆಲ್ಕೋಹಾಲ್ ಸೇವನೆಯಲ್ಲಿ ಬಹು ಸಾಮಥ್ರ್ಯ ಉಳ್ಳವರೆಂದು ಹೆಸರುವಾಸಿಯಾಗಿದ್ದರು. ಮಹಾರಾಜ ಭೂಪೇಂದ್ರ ಸಿಂಗ್ ಅವರೊಂದಿಗೆ ಸ್ಪರ್ಧೆಯೊಂದನ್ನು ಏರ್ಪಡಿಸಿ ಸ್ಪರ್ಧೆಯ ಹಿಂದಿನ ದಿನ ರಾತ್ರಿಯೇ ತನ್ನ ನಗರಕ್ಕೆ ಆಹ್ವಾನಿಸುತ್ತಾನೆ. ಅವರಿಗೆ ಉಳಿದುಕೊಳ್ಳಲು ಎಲ್ಲ ವ್ಯವಸ್ಥೆಗಳನ್ನು ಮಾಡಿ ರಾತ್ರಿ ಊಟ ಹಾಗೂ ಐರಿಷ್‍ನವರು ನಿರೀಕ್ಷಿಸುವ ವಿಷ್ಕಿಯನ್ನು ದೊಡ್ಡ ಪ್ರಮಾಣದ ಪೆಗ್‍ನಲ್ಲಿ ಸರಬರಾಜು ಮಾಡಿಸಿದ್ದಾನೆ. ದೊಡ್ಡ ಪ್ರಮಾಣದ ಅಲ್ಕೋಹಾಲ್ ಸೇವಿಸಿದ ಐರಿಷ್ ಆಟಗಾರರು ಮರು ದಿನ ನಡೆದ ಪೋಲೋ ಸ್ಪರ್ಧೆಯಲ್ಲಿ ಪರಾಜಿತಗೊಂಡಿದ್ದಾರೆ.

ಅತಿ ಹೆಚ್ಚು ಪೆಗ್‍ನ ಮದ್ಯ ಸರಬರಾಜು ಮಾಡಿರುವ ಉದ್ದೇಶ ಕುರಿತು ಐರಿಷ್ ತಂಡದ ಆಟಗಾರರು ಮಹಾರಾಜ ಭೂಪೇಂದ್ರ ಸಿಂಗ್‍ಗೆ ದೂರು ನೀಡಿದರು. ತಂಡದ ದೂರಿಗೆ ಸಮರ್ಥನೆ ನೀಡಿದ ರಾಜಾ ಸಿಂಗ್, ಹೌದು ಪಾಟಿಯಾಲದಲ್ಲಿ ಮದ್ಯ ಸರಬರಾಜು ಮಾಡಿದ ಪೆಗ್‍ಗಳು ದೊಡ್ಡದಾಗಿರುತ್ತದೆ. ಆ ಕಾರಣದಿಂದಲೇ ಅದನ್ನು ಪಾಟಿಯಾಲ ಪೆಗ್ ಎಂದು ಕರೆಯಲಾಗುತ್ತದೆ ಎಂದು ವಿವರ ನೀಡಿದನು.

ನಿಮಗೆ ಪಾಟಿಯಾಲ ಪೆಗ್‍ನ ಪ್ರಮಾಣ ಕುರಿತು ಸರಿಯಾದ ಮಾಹಿತಿ ಇರದಿದ್ದರೆ, ಇಲ್ಲಿದೆ ಮಾಹಿತಿ ಕೆಲವರ ಪ್ರಕಾರ, ಎರಡು ಬೆರಳ ಎತ್ತರ, ಮಧ್ಯ ಬೆರಳು ಮತ್ತು ತೋರು ಬೆರಳು ಪ್ರಮಾಣದಷ್ಟು ಮದ್ಯವನ್ನು ಪೆಗ್ ಎಂದು ಹೇಳಲಾಗುತ್ತದೆ. ಇದು ಸುಮಾರು 120 ಮಿಲಿ ಲೀಟರ್ ಆಗಿರುತ್ತದೆ.

Comments are closed.