ವಿಶಿಷ್ಟ

ಈಕೆಯ ಭಯಾನಕ ಸೆಲ್ಫಿ ಹುಚ್ಚಿನ ಬಗ್ಗೆ ಒಮ್ಮೆ ನೋಡಿ …ಮೈ ಜುಮ್ಮೆನ್ನುತ್ತೀ…!

Pinterest LinkedIn Tumblr

3

ಸೆಲ್ಫಿ ಮೊಬೈಲ್‌ಗಳು ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿ ಅನ್ನೋದು ಗೊತ್ತು. ಆದರೂ ತಮಗಿಷ್ಟ ಬರೋ ಹಾಗೋ ಸುಂದರವಾಗಿ ಕಾಣೋವರೆಗೂ ಚಿತ್ರ ವಿಚಿತ್ರವಾದ ಫೋಟೋ ತೆಗೆಯುವ ಈ ಸೆಲ್ಫಿ ಮೊಬೈಲ್‌ಗಳು ಯಾರಿಗೆ ಇಷ್ಟ ಇಲ್ಲ ಹೇಳಿ! ಸುಂದರ, ರಮ್ಯ ಸ್ಥಳಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವವರೇ ಹೆಚ್ಚುತ್ತಿದ್ದಾರೆ. ಈ ರೀತಿ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಎಷ್ಟೋ ಮಂದಿ ಅಚಾನಕ್ಕಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸೆಲ್ಫಿ ಸಹವಾಸವೇ ಬೇಡ ಎಂದರೂ ಅದು ಹುಚ್ಚು ಬಿಡದ ಮಾಯೆಯಂತೆ ಕಾಡುತ್ತಲೆ ಇರುತ್ತದೆ. ಈ ಸೆಲ್ಫಿ ಅನ್ನೋ ಮಾಯಾ ಜಾಲದಲ್ಲಿ ಸಿಲುಕಿ ದಾಖಲೆಗಳನ್ನು ನಿರ್ಮಿಸಿದವರು ಇದ್ದಾರೆ.

5

4

2

1

‘ಸೆಲ್ಫಿ ದಿಟ್ಟ’ ಎಂದು ಖ್ಯಾತಿಗೆ ಒಳಗಾಗಿರುವ ಏಂಜಲಿನಾ ನಿಕೋಲ್ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದ ರೋಚಕ ಕತೆ ಇದು. ವೃತ್ತಿಯಲ್ಲಿ ಮಾಡೆಲಿಂಗ್, ಪ್ರವೃತ್ತಿಯಲ್ಲಿ ನುರಿತ ಫೋಟೋಗ್ರಾಫರ್. ಈಕೆ ಸೆಲ್ಫಿ ಯುಗ ಕಾಲಿಡುತ್ತಿದ್ದಂತೆ ಅಪಾಯಕಾರಿ ಸ್ಥಳಗಳಲ್ಲಿ ಒಬ್ಬಳೆ ನಿಂತು ‘ಸೆಲ್ಫಿ‘ ತೆಗೆದುಕೊಂಡು ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾಳೆ.

23 ವರ್ಷದ ಏಂಜಲಿನಾ ನಿಕೋಲ್ ಅತಿ ಎತ್ತರದ ಕಟ್ಟಡದ ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಖುಷಿ ಪಡುತ್ತಾಳೆ. ಅತಿ ಎತ್ತರದ ಕಟ್ಟಡಗಳನ್ನೇರಿ ಸೆಲ್ಫಿ ತೆಗೆದುಕೊಳ್ಳುವುದು ಈಕೆಗೆ ಎಲ್ಲಿಲ್ಲದ ಉತ್ಸಾಹವಂತೆ! ಅವಳಿಗೇನೋ ಉತ್ಸಾಹ. ಆದರೆ ಅತಿ ಎತ್ತರದ ಕಟ್ಟಡದ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಅವಳ ಹುಚ್ಚು ಸಾಹಸ ಕಂಡು ನೋಡುಗರ ಎದೆ ದಸಕ್ಕೆನ್ನದೇ ಇರಲಾರದು.

ಅವಳ ಈ ಸೆಲ್ಫಿ ಫೋಟೋಗಳು ಒಂದಕ್ಕಿಂತ ಒಂದು ಸುಂದರ. ಎತ್ತರದ ಕಟ್ಟಡದ ತುದಿಯಿಂದ ತೆಗೆದ ಸೆಲ್ಫಿ ಫೋಟೋಗಳಂತು ಇಡೀ ಜಗತ್ತನ್ನೇ ತೋರಿಸುವಂತಿರುತ್ತದೆ ಎನ್ನುತ್ತಾರೆ ಫೋಟೋ ಪ್ರಿಯರು

ಒಂದೆರಡು ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಇದ್ದಕ್ಕಿದ್ದಂತೆ ಜನಪ್ರಿಯತೆ ಗಳಿಸಿದಳು. ಆಕೆಗೆ ಒಂದಷ್ಟು ಅಭಿಮಾನಿಗಳು ಹುಟ್ಟಿಕೊಂಡರು. ಉಸಿರು ಬಿಗಿ ಹಿಡಿಯುವಂತೆ ಮಾಡುವ ಚಿತ್ರಗಳಂತೂ ಆಕೆಯನ್ನು ಸೆಲ್ಫಿಯುಗದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿತು.
ಅಷ್ಟು ಎತ್ತರದಿಂದ ಸೆಲ್ಫಿ ತೆಗೆಸಿಕೊಂಡರೂ ಭಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ ‘ಭಯಾನಾ‘ ಎಂದು ನಗುತ್ತಾಳೆ.ಎಷ್ಟೇ ಎತ್ತರದಿಂದ ಸೆಲ್ಫಿ ತೆಗೆದುಕೊಂಡರೂ ನನಗೆ ಭಯವಾಗುವುದಿಲ್ಲ. ಇದೆಲ್ಲ ನನಗೆ ಅಭ್ಯಾಸವಾಗಿದೆ ಎನ್ನುತ್ತಾಳೆ.

ಈ ಏಂಜಲಿನಾಳ ಗುಂಡಿಗೆಗೆ ಶಹಬ್ಬಾಸ್ ಎಂದು ಹೇಳಬೇಕು. ಆಕೆಯ ಧೈರ್ಯವನ್ನು ಮೆಚ್ಚಿ ಕೊಳ್ಳಬೇಕು. ಆದರೆ ಆಕೆಯ ಸಹೋದ್ಯೋಗಿ ಮಾಡೆಲ್‌ಗಳು ಇದೆಲ್ಲ ಬೇಡ ಎಂದು ಬುದ್ಧಿವಾದ ಹೇಳಿದ್ದಾರೆ. ಕೇಳದ ಆಕೆಗೆ ಜಾಗರೂಕಳಾಗಿರು ಎಂದು ಹೇಳಿ ಸುಮ್ಮನಾಗಿದ್ದಾರೆ. ಏಂಜಲಿನಾ ಏನೋ ಮಾಡುತ್ತಾಳೆ ಎಂದು ನಾವು ಸೆಲ್ಫಿ ವಿಷಯದಲ್ಲಿ ಮೈ ಮರೆಯಬಾರದು. ಅಪಾಯಕಾರಿ ಸ್ಥಳಗಳಲ್ಲಿ ಕೊಂಚ ಯಾಮಾರಿದರೂ ಪ್ರಾಣ ಕಟ್ಟಿಟ್ಟ ಬುತ್ತಿ.

ಈಗಂತೂ ಎಷ್ಟೋ ನದಿಗಳು ಬೆಟ್ಟಗಳ ತಪ್ಪಲಲ್ಲಿ ‘ಇಲ್ಲಿ ಸೆಲ್ಫಿ ತೆಗೆಯುವುದು ನಿಷಿದ್ಧ’ ಎಂಬ ನಾಮಫಲಕ ತಗುಲಿ ಹಾಕುವ ಮಟ್ಟಿಗೆ ಸೆಲ್ಫಿ ಹುಚ್ಚಿಗೆ ಸ್ವಲ್ಪವಾದರೂ ಕಡಿವಾಣ ಹಾಕಲಾಗಿದೆ. ಸೆಲ್ಫಿ ಯುಗದಲ್ಲಿ ಮೊಬೈಲ್‌ಗಳಲ್ಲಿ ಸೆಲ್ಫಿ ಎಕ್ಸ್‌ಪರ್ಟ್ ಅನ್ನುವ ವಿವಿಧ ಮೊಬೈಲ್ ಕಂಪನಿಗಳು ಹುಟ್ಟಿಕೊಳ್ಳುತ್ತಿರುವುದು ಸೆಲ್ಫಿ ಯಶಸ್ವಿಗೆ ಕಾರಣ.

Comments are closed.