ಸ್ವರ್ಗನಾ….ನರಕನನಾ…..? ನರಕ ಎಂದಾಕ್ಷಣ ನೆನಪಾಗೋದು ಏನು? ಸಾವಿನ ನಂತರದ ನಾವು ಭೂಮಿ ಮೇಲೆ ಮಾಡಿದ ಪಾಪದ ಪ್ರತಿಫಲವಾಗಿ ಇನ್ನೊಂದು ಲೋಕದಲ್ಲಿ ನಮಗೆ ಸಿಗುವಂತಹ ಯಾತನೆ. ಇದನ್ನೇ ನರಕ ಎನ್ನುತ್ತಾರೆ. ಯಾರಿಗೂ ಗೊತ್ತಿಲ್ಲ ಸ್ವರ್ಗ ಅಥವಾ ನರಕ ಎಂದು ಹೇಗಿರುತ್ತದೆ ಅನ್ನೋದು. ಆದರೆ ಸಾಯುವ ಮೊದಲೇ ನಿಮಗೆ ನರಕದ ದರ್ಶನ ಪಡೆಯುವ ಅವಕಾಶ ಇದೆ. ಅದು ಹೇಗೆ ಅಂತೀರಾ..? ಥೈಲ್ಯಾಂಡ್ನಲ್ಲಿದೆ ವಾಂಗ್ ಸಾಯಿನ್ ಸುಕ್ ಹೆಲ್ ಗಾರ್ಡನ್ ಎಂಬ ನರಕ ದೇವಾಲಯ.
ಥೈಲ್ಯಾಂಡ್ ಹೆಲ್ ಹಾರರ್ ಪಾರ್ಕ್ ಎಂದೇ ಜನಪ್ರಿಯತೆ ಪಡೆದಿರುವ ಈ ದೇವಾಲಯ ಬ್ಯಾಂಕಾಕ್ನಿಂದ ಸ್ವಲ್ಪವೇ ದೂರದಲ್ಲಿದೆ. ಇಲ್ಲಿ ಬೌದ್ಧ ಧರ್ಮದವರ ಧಾರ್ಮಿಕ ಪಾಠ ನಡೆಯುತ್ತದೆ. ಈ ದೇವಾಲಯ ಪೂರ್ತಿಯಾಗಿ ಭಯಾನಕ ಮೂರ್ತಿಗಳಿವೆ, ನರಕ ಲೋಕದಲ್ಲಿ ನಡೆಯುವಂತಹ ಪ್ರತಿಯೊಂದು ಸಂಗತಿಗಳನ್ನು ಇಲ್ಲಿ ಸ್ಪಷ್ಟವಾಗಿ ಚಿತ್ರಿಸಲಾಗಿದೆ.
ಚಿಯಾಂಗ್ ಮೀನಲ್ಲಿರುವ ಈ ಹೆಲ್ ಟೆಂಪಲ್ನಲ್ಲಿ ನರಕ ಲೋಕದಲ್ಲಿ ಯಾವ ರೀತಿ ಹಿಂಸೆ ನೀಡಲಾಗುತ್ತದೆ ಎಂದು ಬೌದ್ಧ ಧರ್ಮದಲ್ಲಿ ತಿಳಿಸಲಾಗಿದೆಯೋ ಅದೇ ರೀತಿಯ ಚಿತ್ರಣವನ್ನು ಕಾಣಬಹುದು. ಈ ಹೆಲ್ ದೇವಾಲಯವನ್ನು ಬೌದ್ಧ ಧರ್ಮದ ಗುರು ಪ್ರ ಕ್ರು ವಿಶಾಂಜಲಿಕೋನ್ ಎಂಬುವವರು ನಿರ್ಮಾಣ ಮಾಡಿದ್ದರು.
ಅವರಿಗೆ ಈ ದೇವಾಲಯ ನಿರ್ಮಾಣ ಮಾಡುವಂತೆ ತನ್ನ ಕನಸಿನಲ್ಲಿ ಬಂದಿತ್ತಂತೆ. ಅವರು ಹೇಳುವ ಪ್ರಕಾರ ಜನರಿಗೆ ತಾವು ಮಾಡಿದ ತಪ್ಪಿಗೆ ಏನೆಲ್ಲಾ ಶಿಕ್ಷೆಯಾಗುತ್ತದೆ ಅನ್ನೋದು ತಿಳಿಯಬೇಕು. ಅವರಿಗೆ ಹೆದರಿಕೆ ಉಂಟಾಗಬೇಕು ಮತ್ತೊಂದು ಬಾರಿ ಆ ತಪ್ಪು ಮಾಡಲು. ಅದಕ್ಕಾಗಿ ಈ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂದು ಹೇಳುತ್ತಾರೆ.








Comments are closed.