ಕರಾವಳಿ

ಕುಂದಾಪುರ: ಮೊಳಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷರಿಗೆ ಹಲ್ಲೆ- ಮೊಳಹಳ್ಳಿ, ಬಿದ್ಕಲಕಟ್ಟೆ ಬಂದ್

Pinterest LinkedIn Tumblr

ಕುಂದಾಪುರ: ತಾಲ್ಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಗ್ರಾಮ ಪಂಚಾಯಿತಿ ವಿಶೇಷ ಸಭೆಯಲ್ಲಿ ಮನೆ ಹಂಚಿಕೆ ಕುರಿತಂತೆ ಉಂಟಾದ ಚರ್ಚೆ ವಿಕೋಪಕ್ಕೆ ಹೋಗಿದ್ದು ಮೊಳಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷ ಉದಯ್ ಕುಲಾಲ್ ಮೇಲೆ ನಾಲ್ವರು ಗ್ರಾಮಪಂಚಾಯತ್ ಸದಸ್ಯರು ಸೇರಿದಂತೆ ಒಟ್ಟು ಐದು ಮಂದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಹಲ್ಲೆಯನ್ನು ಖಂಡಿಸಿ ಬುಧವಾರ ಮೊಳಹಳ್ಳಿ ಹಾಗೂ ಬಿದ್ಕಲಕಟ್ಟೆ ಬಂದ್ ನಡೆಸಲಾಯ್ತು ಮತ್ತು ಬಿಜೆಪಿಯಿಂದ ಖಂಡನಾ ಸಭೆ ನಡೆಯಿತು.

molahalli-panchayt_bundh_udaya-kuala-2 molahalli-panchayt_bundh_udaya-kuala-3 molahalli-panchayt_bundh_udaya-kuala-4 molahalli-panchayt_bundh_udaya-kuala-8 molahalli-panchayt_bundh_udaya-kuala-6 molahalli-panchayt_bundh_udaya-kuala-10 molahalli-panchayt_bundh_udaya-kuala-7 molahalli-panchayt_bundh_udaya-kuala-9 molahalli-panchayt_bundh_udaya-kuala-5 molahalli-panchayt_bundh_udaya-kuala-1 molahalli-panchayt_bundh_udaya-kuala-14 molahalli-panchayt_bundh_udaya-kuala-13 molahalli-panchayt_bundh_udaya-kuala-15 molahalli-panchayt_bundh_udaya-kuala-12 molahalli-panchayt_bundh_udaya-kuala-11

ಮೊಳಹಳ್ಳಿ ಗ್ರಾಮ ಪಂಚಾಯಿತಿಗೆ ಮಂಜೂರಾಗಿದ್ದ 12 ಮನೆಗಳ ವಿತರಣೆ ಕುರಿತಂತೆ ಕರೆಯಲಾಗಿದ್ದ ಸಭೆಯಲ್ಲಿ ಮನೆ ಹಂಚಿಕೆಯ ಕುರಿತಂತೆ ಅಧ್ಯಕ್ಷ ಹಾಗೂ ಸದಸ್ಯರೊಬ್ಬರ ನಡುವೆ ಕಾವೇರಿದ ಚರ್ಚೆ ನಡೆದಿತ್ತು. ಈ ಚರ್ಚೆ ವಿಕೋಪಕ್ಕೆ ಹೋಗಿದ್ದು ಆರೋಪಿಗಳೆರೆಲ್ಲರೂ ಅಧ್ಯಕ್ಷರ ಛೇಂಬರ್‌ನಲ್ಲಿಯೇ ಉದಯ ಅವರಿಗೆ ಹಲ್ಲೆಗೆ ಮುಂದಾಗಿದ್ದಾರೆ. ಇವರ ಪೈಕಿ ದಿನೇಶ್ ಹೆಗ್ಡೆ ಉದಯ ಎಂಬುವವರು ಕುಲಾಲ ರವರಿಗೆ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದಿದ್ದು ಉಳಿದ ನಾಲ್ವರು ಕೈಯಿಂದ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೊಂದು ಪೂರ್ವಯೋಜಿತ ಕ್ರತ್ಯವಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಮತ್ತು ಅವರ ಮೇಲೆ ಗಂಭೀರವಾದ ಸೆಕ್ಷನ್ ಹಾಕುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದ್ದಾರೆ.

ಮೊಳಹಳ್ಳಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಮೊದಲಾದ ಅವ್ಯವಹಾರಗಳು ನಡೆಯುತ್ತಿದೆ. ಇನ್ನು ಇಸ್ಫೀಟ್ ಕ್ಲಬ್ ನಡೆಸಲು ಪರವಾನಿಗೆ ನೀಡಲು ಕೇಳಿಕೊಳ್ಳಲಗಿದ್ದು ಇದ್ಯಾವುದಕ್ಕೂ ಸಹಕರಿಸಿದ ಹಿನ್ನೆಲೆ ಅಧ್ಯಕ್ಷರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸರು ನಿಸ್ಪಕ್ಷಪಾತ ತನಿಖೆಯನ್ನು ನಡೆಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಿರಲು ಕ್ರಮಕೈಗೊಳ್ಳಬೇಕು. ಇನ್ನು ಇಂತಹ ಘಟನೆಗಳು ಮರುಕಳಿಸಿ ಕಾನೂನು ಕೈಗೆತ್ತಿಕೊಳ್ಳುವ ಕಾರ್ಯವಾದರೇ ಅದಕ್ಕೆ ಸರಕಾರ ಹಾಗೂ ಪೊಲೀಸ್ ಇಲಾಖೆ ನೇರ ಹೊಣೆಯಾಗಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಖಂಡನಾ ಸಭೆಯಲ್ಲಿ ಹೇಳಿದ್ದಾರೆ.

ತಮ್ಮ ಪಂಚಾಯತಿಯ ಅಧ್ಯಕ್ಷರ ಮೇಲಾದ ಹಲ್ಲೆ ಖಂಡಿಸಿ ಮೊಳಹಳ್ಳಿ ಹಾಗೂ ಬಿದ್ಕಲಕಟ್ಟೆ ಪೇಟೆ ಬಂದ್ ಮಾಡಲಾಗಿತ್ತು. ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಉಡುಪಿಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾಗಳ ಅಧ್ಯಕ್ಷ ರಾಜೇಶ್ ಕಾವೇರಿ, ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಯುವಮೋರ್ಚಾ ಅಧ್ಯಕ್ಷ ಸತೀಶ್ ಪೂಜಾರಿ ವಕ್ವಾಡಿ, ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ್, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸದಸ್ಯರು, ವಿವಿಧ ಗ್ರಾಮಪಂಚಾಯತ್ ಪ್ರತಿನಿಧಿಗಳು ಖಂಡನಾ ಸಭೆಯಲ್ಲಿ ಭಾಗವಹಿಸಿದ್ದರು.

Comments are closed.