Entertainment

ಹುಟ್ಟೂರು ಆರ್ಡಿಯಲ್ಲಿ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿಗೆ ಅದ್ಧೂರಿ ಸ್ವಾಗತ(Video)

Pinterest LinkedIn Tumblr

ಕುಂದಾಪುರ: ಬಿಗ್ ಬಾಸ್ 7 ನೇ ಸೀಸನ್ ವಿನ್ನರ್ ಶೈನ್ ಶೆಟ್ಟಿ ಗೆಲುವಿನ ಬಳಿಕ ಮೊದಲ ಬಾರಿಗೆ ತನ್ನ ಹುಟ್ಟೂರಿಗೆ ಆಗಮಿಸಿದ್ರು. ಹೆಬ್ರಿ ತಾಲೂಕಿನ ಆರ್ಡಿಯಲ್ಲಿರುವ ತನ್ನ ಚಿಕ್ಕಪ್ಪ ಗುಣಕರ ಶೆಟ್ಟಿ ನಿವಾಸಕ್ಕೆ ಆಗಮಿಸಿದ ಶೈನ್ ಶೆಟ್ಟಿಯವರನ್ನು ಆರತಿ ಎತ್ತಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭ ಗುಣಕರ ಶೆಟ್ಟಿ ದಂಪತಿ ಹಾಗೂ ಶೈನ್ ಶೆಟ್ಟಿ ಬಿಗ್ ಬಾಸ್ ಸ್ಪರ್ದಿಯಾಗಿದ್ದಾಗ ಓಟಿಂಗ್ ವಿಚಾರದಲ್ಲಿ ಶ್ರಮಿಸಿದ ನಿಶಾಂತ್ ಮತ್ತು ಸುಶಾಂತ್, ಅವರು ಶೈನ್ ಶೆಟ್ಟಿಯವರನ್ನು ಬರಮಾಡಿಕೊಂಡರು. ಹಿಲಿಯಾಣದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ಕರುಣಾಕರ ಶೆಟ್ಟಿ ಯರುಕೋಣೆ ಮೊದಲಾದವರು ಶೈನ್ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಶೈನ್ ಶೆಟ್ಟಿಯವರನ್ನು ನೋಡಲು ಆಸುಪಾಸಿನಿಂದ ಬಹಳಷ್ಟು ಮಂದಿ ಆಗಮಸಿದ್ದು‌ ಸೆಲ್ಪಿ ತೆಗೆದುಕೊಂಡು ಆಟೋಗ್ರಾಫ್ ಪಡೆದು ಖುಷಿಪಟ್ಟರು. ಇದೆ ಸಂದರ್ಭ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ಶೈನ್ ಶೆಟ್ಟಿ ಮಾತನಾಡಿ, ಗತ್ತು ಕಡಿಮೆ ಮಾಡಿ ಕೆಲಸ ಜಾಸ್ಥಿ ಮಾಡಿದಾಗ ಜೀವನದಲ್ಲಿ ಯಶಸ್ಸು ಸಾಧ್ಯ. ಬಿಗ್ ಬಾಸ್ ಗೆಲ್ಲಲು ಜನರ ಪ್ರೀತಿ ಸಾಧ್ಯವಾಯಿತು. ವ್ಯಕ್ತಿತ್ವ ಉತ್ತಮವಿದ್ದಾಗ ಗೆಲುವು ಸಾಧ್ಯವಿದೆ. ಮುಂದಿನ‌ ದಿನದಲ್ಲಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವೆ ಎಂದರು.

ಶೈನ್ ಶೆಟ್ಟಿ ತಂದೆ ಶರಶ್ಚಂದ್ರ ಶೆಟ್ಟಿ ಹಾಗೂ ತಾಯಿ ಇಂದಿರಾ ಮಗನಿಗೆ ಸಾಥ್ ನೀಡಿದ್ರು. ನ್ಯಾಯವಾದಿ ಉದಯ ಕುಮಾರ್ ಶೆಟ್ಟಿ ಕಾಳಾವರ, ತಾಲೂಕು ಪಂಚಾಯತ್ ಸದಸ್ಯ ಚಂದ್ರಶೇಖರ್ ಶೆಟ್ಟಿ ಸುರ್ಗೋಳಿ, ಮಾಜಿ ತಾ.ಪಂ ಅಧ್ಯಕ್ಷೆ ದೀಪಿಕಾ ಸಂತೋಷ್ ಶೆಟ್ಟಿ, ಗ್ರಾಮಪಂಚಾಯತ್ ಅಧ್ಯಕ್ಷೆ ಶೋಭಾ ಶೆಟ್ಟಿ, ಗ್ರಾ.ಪಂ ಸದಸ್ಯ ಸಂತೋಷ್ ಹೆಗ್ಡೆ, ಸತೀಶ್ ಕುಮಾರ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಕುಂದಾಪುರ ಪ್ರಖಂಡ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ನಿವ್ರತ್ತ ಶಿಕ್ಷಕ ರಾಜೀವ ಶೆಟ್ಟಿ ಬೆಪ್ಡೆ, ಸಾಮಾಜಿಕ ಹೋರಾಟಗಾರ ಸಂತೋಷ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು.

ಗಣೇಶ್ ಅರಸಮ್ಮನಕಾನು ಕಾರ್ಯಕ್ರಮ ನಿರೂಪಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.