ಕರಾವಳಿ

ಕಣ್ಣಿನ ನರಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಬೆಟ್ಟದ ಕಾಯಿ

Pinterest LinkedIn Tumblr

ಈ ಆಹಾರಗಳು ನಮ್ಮ ಕಣ್ಣಿನ ನರಗಳ ಆರೋಗ್ಯ ಹೆಚ್ಚಿಸಲು ಅತ್ಯುತ್ತಮ ಆಗಿವೆ. ಕಣ್ಣಿನ ನರಗಳ ಆರೋಗ್ಯ ಹೆಚ್ಚಿಸಲು ಯಾವ ಆಹಾರಗಳು ಉತ್ತಮ ಎಂದು ಈ ಲೇಖನದಲ್ಲಿ ತಿಳಿಯೋಣ. ಈಗಾಗಲೇ ನಮಗೆ ಗೊತ್ತು ಮೊಬೈಲ್ ಟಿವಿ ಜಾಸ್ತಿ ನೋಡುವುದರಿಂದ ನಮ್ಮ ಕಣ್ಣಿನ ಆರೋಗ್ಯ ಹಾಳಾಗುತ್ತದೆ ಆದರೆ ಇವುಗಳಿಂದಲೇ ಒಂದಷ್ಟು ಕೆಲಸಗಳು ನಾವು ಮಾಡುತ್ತಾ ಇರುತ್ತೇವೆ ಹಾಗಂತ ನಮ್ಮ ಕಣ್ಣಿನ ಆರೋಗ್ಯವನ್ನು ಕಡೆಗಣಿಸಲು ಆಗುವುದಿಲ್ಲ ಹಾಗಾಗಿ ಕಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಕೆಲವೊಂದು ಆಹಾರವನ್ನು ನಾವು ಹೆಚ್ಚು ಸೇವಿಸಬೇಕು ಅವು ಯಾವುವು ಎಂದು ನಾವು ನೋಡೋಣ. ಬೆಟ್ಟದ ನೆಲ್ಲಿಕಾಯಿ ಆಮ್ಲದಲ್ಲಿ ಇರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಕಣ್ಣಿನ ನರಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಆಮ್ಲ.

ಆದಷ್ಟು ಆಮ್ಲವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ ಈ ಬೆಟ್ಟದ ನೆಲ್ಲಿಕಾಯಿ ಹಸಿಯಾಗಿ ಸೇವಿಸಬಹುದು ಅಥವಾ ಇದನ್ನು ಜ್ಯೂಸ್ ಮಾಡಿ ಕೂಡ ಕುಡಿಯಬಹುದು ಒಟ್ಟಾರೆ ಆಗಿ ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲವನ್ನು ಆಗಾಗ ಸೇವಿಸಿ ಇದರಿಂದ ನಿಮ್ಮ ಕಣ್ಣಿನ ಆರೋಗ್ಯ ಹೆಚ್ಚುತ್ತದೆ ಹಾಗೆಯೇ ಏಲಕ್ಕಿ, ಏಲಕ್ಕಿ ತಂಪು ಸ್ವಭಾವದ ಆಹಾರ ಆಗಿದೆ ಇದು ನಮ್ಮ ಕಣ್ಣಿಗೆ ತಂಪನ್ನು ನೀಡುತ್ತದೆ ಹಾಗೆಯೇ ಕಣ್ಣಿನ ನರಗಳ ಆರೋಗ್ಯ ಹೆಚ್ಚಿಸುತ್ತದೆ.

ಏಲಕ್ಕಿಯನ್ನು ಸೋಂಪಿನ ಕಾಲಿನ ಜೊತೆ ಸೇವಿಸುವುದು ತುಂಬಾ ಒಳ್ಳೆಯದು ಇದು ನಮ್ಮ ಜೀರ್ಣಕ್ರಿಯೆ ಸಹಾ ಉತ್ತೇಜಿಸುತ್ತದೆ ಈ ಏಲಕ್ಕಿ ಮತ್ತು ಸೊಂಪಿನ ಪುಡಿಯನ್ನು ಹಾಲಿನ ಜೊತೆ ಅಥವಾ ನೀರಿನ ಜೊತೆ ಬೆರೆಸಿ ಕುಡಿಯುವುದರಿಂದ ನಮ್ಮ ಕಣ್ಣಿನ ಆರೋಗ್ಯ ಹೆಚ್ಚಾಗುತ್ತದೆ ಹಾಗೆಯೇ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಹಸಿರು ತರಕಾರಿಗಳಲ್ಲಿ ಇರುವ ವಿಟಮಿನ್ ಎ ನಮ್ಮ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಅದರಲ್ಲೂ ಪಾಲಕ್ ಸೊಪ್ಪು ಈ ಸೊಪ್ಪಿನಲ್ಲಿ ಇರುವ ವಿಟಮಿನ್ ಎ ನಮ್ಮ ಕಣ್ಣಿನ ಕಾರ್ನಿಯಾ ವನ್ನು ರಕ್ಷಿಸುತ್ತದೆ ಹಾಗೆಯೇ ಅಲ್ಟ್ರಾ ವಯಲೆಟ್ ಅಥವಾ ಯುವಿ ಕಿರಣಗಳಿಂದ ಕಣ್ಣಿಗೆ ಆಗುವ ಒತ್ತಡವನ್ನು ಕಡಿಮೆ ಮಾಡುತ್ತದೆ ಇನ್ನು ಸಲ್ಮೊನ್ ಅನ್ನುವ ಮೀನು ಸಹಾ ನಮ್ಮ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಸಾಲ್ಮೊನ್ ಮೀನನ್ನು ನಾವು ಆಗಾಗ ಸೇವಿಸುತ್ತಾ ಇದ್ದರೆ ಇದು ನಮ್ಮ ಕಣ್ಣಿನ ರೆಟಿನಾ ವನ್ನೂ ಪ್ರೊಟೆಕ್ಟ್ ಮಾಡುತ್ತದೆ

ಸಾಲ್ಮೋನ್ ಮೀನಲ್ಲಿ ಇರುವ ಒಮೆಗಾ 3 ಫ್ಯಾಟಿ ಆಸಿಡ್ ನಮ್ಮ ಕಣ್ಣಿನಲ್ಲಿ ತೇವಾಂಶವನ್ನು ಕಾಪಾಡುತ್ತದೆ ಹಾಗೆಯೇ ಕುರುಡುತನ ಸಮಸ್ಯೆಯನ್ನು ಬರದಂತೆ ನಮ್ಮನ್ನು ರಕ್ಷಿಸುತ್ತದೆ. ಇನ್ನು ಕ್ಯಾರೆಟ್ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತಿರುತ್ತದೆ ಕ್ಯಾರೆಟ್ ಅನ್ನು ಹೆಚ್ಚಾಗಿ ಆಗಾಗ ಸೇವಿಸುತ್ತಾ ಇರಿ ಇದರಿಂದ ನಮ್ಮ ಕಣ್ಣಿನ ಆರೋಗ್ಯ ಹೆಚ್ಚುತ್ತದೆ ಕ್ಯಾರೆಟ್ ಅಲ್ಲಿ ವಿಟಮಿನ್ ಎ ಬೀಟಾ ಕೆರೋಟಿನ್ ಪೊಟ್ಯಾಷಿಯಂ ಮತ್ತು ಫೈಬರ್ ವಿಟಮಿನ್ ಗಳು ನೈಟ್ ಬ್ಲೈಂಡ್ನೆಸ್ ಆಗದಂತೆ ನೋಡಿಕೊಳ್ಳುತ್ತದೆ ಅಂದರೆ ಸಂಜೆ ಆದಾಗ ಕೆಲವರಿಗೆ ಕಣ್ಣಿನ ದೃಷ್ಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದನ್ನು ಇರಳು ಕಣ್ಣು ಎಂದು ಕರೆಯುತ್ತಾರೆ ಹಾಗಾಗಿ ಆದಷ್ಟು ಕ್ಯಾರೆಟ್ ಅನ್ನು ನಿಮ್ಮ ಡಯಟ್ ಗೆ ಸೇರಿಸಿ ಇದರಿಂದ ಇರುಳು ಕುರುಡು ಸಮಸ್ಯೆಯಿಂದ ದೂರ ಇರಬಹುದು ಹಾಗೆಯೇ ಬಾದಾಮಿ ಸಹಾ ನಮ್ಮ ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ ಬಾದಾಮಿಯಲ್ಲಿ ಇರುವ ನ್ಯೂಟ್ರಿಷನ್ ಗಳು ಬರೀ ನಮ್ಮ ಮೆದುಳಿನ ಆರೋಗ್ಯ ಮತ್ತು ಹೃದಯದ ಆರೋಗ್ಯಕ್ಕೆ ಉಪಯೋಗ ಆಗಿರುವುದು ಅಲ್ಲದೆ ನಮ್ಮ ಕಣ್ಣಿನ ಆರೋಗ್ಯ ಸಹಾ ಹೆಚ್ಚಿಸುತ್ತದೆ.

Comments are closed.