ವೀಡಿಯೋ ವರದಿಗಳು

ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ವಿಧಾನಗಳನ್ನು ಪಾಲಿಸದ ಮಹಿಳೆಯನ್ನು ಅಧಿಕಾರಿಗಳು ಏನು ಮಾಡಿದರು ನೋಡಿ…!

Pinterest LinkedIn Tumblr

ಮಿಚಿಗನ್: ಇಲ್ಲಿನ ಡೆಟ್ರಾಯಿಟ್ ಮೆಟ್ರೋಪಾಲಿಟನ್ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ವಿಧಾನಗಳನ್ನು ಪಾಲಿಸದ ಮಹಿಳೆಯನ್ನು ಅಧಿಕಾರಿಗಳು ವಿಮಾನದಲ್ಲೇ ಧರಧರನೇ ಎಳೆದೊಯ್ಯುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ಘಟನೆಯು ಸೋಮವಾರ ಡೆಲ್ಟಾ ಏರ್‍ಲೈನ್ಸ್ ವಿಮಾನದಲ್ಲಿ ನಡೆದಿದ್ದು, ಟರ್ಮಿನಲ್‍ನಲ್ಲಿ ಮಹಿಳೆ ಏರ್‍ಪೋರ್ಟ್ ನೀತಿ-ನಿಯಮ ಪಾಲಿಸಿರಲಿಲ್ಲ. ಈ ವೇಳೆ ಅಧಿಕಾರಿಗಳು ನಿಯಮಗಳನ್ನು ಪಾಲಿಸುವಂತೆ ಪರಿಪರಿಯಾಗಿ ಬೇಡಿಕೊಂಡ್ರೂ, ಮಹಿಳೆ ಮನವಿಯನ್ನು ನಿರಾಕರಿಸಿದ್ದಾಳೆ. ಹೀಗಾಗಿ ಆಕೆಗೆ ಅಧಿಕಾರಿಗಳು ಈ ಶಿಕ್ಷೆ ನೀಡಿದ್ದಾರೆ ಎಂದು ಏರ್‍ಪೋರ್ಟ್‍ನಲ್ಲಿರೋ ಮಂದಿ ತಿಳಿಸಿದ್ದಾರೆ.

ಘಟನೆಯ ದೃಶ್ಯವನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದ್ದಿದ್ದು, ಯೂಟ್ಯೂಬ್‍ನಲ್ಲಿ ಹರಿಯಬಿಟ್ಟಿದ್ದಾರೆ. ವಿಡಿಯೋದಲ್ಲಿ ನೀತಿ-ನಿಯಮಗಳನ್ನು ಪಾಲಿಸದಿರುವ ಮಹಿಳೆಯನ್ನು ಸಮವಸ್ತ್ರ ಧರಿಸಿದ ಅಧಿಕಾರಿಗಳಿಬ್ಬರು ಮಹಿಳೆಯ ಕಾಲು ಹಾಗು ಕೈಯನ್ನು ಹಿಡಿದು ಧರಧರನೇ ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮಾತ್ರವಲ್ಲದೇ ಇದನ್ನು ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರು ನೋಡುತ್ತಾ ನಗ್ತಾ ಇರುವುದನ್ನು ಕೂಡ ನಾವು ನೋಡಬಹುದು. ಇನ್ನು ಸದ್ಯ ಮಹಿಳೆಯ ಯಾರು ಎನ್ನುವುದು ತಿಳಿದುಬಂದಿಲ್ಲ.

Comments are closed.