ರಾಷ್ಟ್ರೀಯ

ಅಕ್ರಮ ಸಂಬಂಧ ಶಂಕೆ: ಯುವಕನೊಬ್ಬನನ್ನು ಜೀವಂತವಾಗಿ ಸುಟ್ಟು ಹಾಕಿದ ಮಹಿಳೆ

Pinterest LinkedIn Tumblr

man-on-fire

ಪ್ರತಾಪಗಢ್: ಅಕ್ರಮ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ಮಹಿಳೆಯೊಬ್ಬಳು 20 ವರ್ಷದ ಯುವಕನೊಬ್ಬನನ್ನು ಸಜೀವವಾಗಿ ದಹನ ಮಾಡಿ ಹತ್ಯೆ ಮಾಡಿರುವ ಘಟನೆಯೊಂದು ಉತ್ತರ ಪ್ರದೇಶದ ಪ್ರತಾಪ್’ಗಢ್ ನಲ್ಲಿ ನಡೆದಿದೆ.

ಅರ್ಜುನ್ ಸಿಂಗ್ ಚೌಹಾಣ್ (20) ಹತ್ಯೆಯಾದ ಯುವಕ. ರಂಗಿಲಿ ಹತ್ಯೆ ಮಾಡಿದ ಮಹಿಳೆಯಾಗಿದ್ದಾಳೆ. ಅಕ್ರಮ ಸಂಬಂಧ ಹೊಂದಿದ್ದಾನೆಂದ ಶಂಕಿಸಿದ್ದ ರಂಗಿಲಿ ಹಲವು ದಿನಗಳಿಂದಲೂ ಈತನ ಮೇಲೆ ಕಣ್ಣಿಟ್ಟಿದ್ದಳು.

ಇದರಂತೆ ಅರ್ಜುನ್ ನಿನ್ನೆ ಮಹಿಳೆಯನ್ನು ಭೇಟಿಯಾಗಲು ಜೇಥ್ವಾನಾ ಪ್ರದೇಶಕ್ಕೆ ಹೋದ ಸಂದರ್ಭದಲ್ಲಿ ಮತ್ತಿಬ್ಬರು ವ್ಯಕ್ತಿಗಳೊಂದಿಗೆ ಸ್ಥಳಕ್ಕೆ ತೆರಳಿದ ರಂಗಿಲಿ ಅರ್ಜುನ್ ನ್ನು ಸಜೀವವಾಗಿ ದಹನ ಮಾಡಿದ್ದಾಳೆಂದು ತಿಳಿದುಬಂದಿದೆ.

ಬೆಂಕಿಯ ನರಳಾಟವನ್ನು ನೋಡಿದ ಸ್ಥಳೀಯರು ಕೂಡಲೇ ಅರ್ಜನ್ ನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ಹೇಳಿದ್ದಾರೆ.

ಪ್ರಕರಣ ಸಂಬಂಧ ಮಹಿಳೆ ಹಾಗೂ ಮತ್ತಿಬ್ಬರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಈವರೆಗೂ ಯಾವುದೇ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿಲ್ಲ.

Comments are closed.