ಅನಿವಾಸಿ ಭಾರತೀಯರು

ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ಮೋದಿಗೆ ಆತಿಥ್ಯ ನೀಡಿದ್ದು ಕುಂದಾಪುರದ ಆನಂದ ಪೂಜಾರಿ..!

Pinterest LinkedIn Tumblr

ಕುಂದಾಪುರ: ಮೂರು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುದ್ಧ ಸಸ್ಯಹಾರಿ ಖಾದ್ಯ ತಯಾರಿಸಿ ನೀಡುವ ಜವಾಬ್ದಾರಿ ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೊಟೇಲ್‌ ಉದ್ಯಮಿ ಆನಂದ್‌ ಪೂಜಾರಿ ಅವರಿಗೆ ನೀಡಲಾಗಿತ್ತು.

ಆನಂದ ಪೂಜಾರಿ ಅವರು ಮೋದಿ ಅವರು ವಾಷಿಂಗ್ಟನ್‌ ಡಿ.ಸಿ.ಯಲ್ಲಿ ವಾಸ್ತವ್ಯವಿದ್ದ ಮೂರು ದಿನ ಊಟೋಪಚಾರದ ನೇತೃತ್ವ ವಹಿಸಿದ್ದರು. ಆನಂದ ಪೂಜಾರಿ ಅವರು ಮೋದಿ ಅವರಿಗೆ ಐದನೇ ಬಾರಿಗೆ ಊಟದ ಆತಿಥ್ಯದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ವಾಷಿಂಗ್ಟನ್‌ ಡಿಸಿಯಲ್ಲಿ 35 ವರ್ಷಗಳಿಂದ ನೆಲೆಸಿರುವ ಆನಂದ ಪೂಜಾರಿ ಮತ್ತು ಪತ್ನಿ ಸುಮಿತಾ ದಂಪತಿ ಎರಡೂವರೆ ದಶಕಗಳಿಂದ ವುಡ್‌ಲ್ಯಾಂಡ್ಸ್‌ ಹೊಟೇಲ್ ನಡೆಸುತ್ತಿದ್ದಾರೆ. ಇವರು ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ನಿವಾಸಿ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಯ ಪುತ್ರ.

ವಾಷಿಂಗ್ಟನ್‌ ಡಿಸಿಯಲ್ಲಿಯೇ ಇವರ ಹೊಟೇಲ್‌ ಇರುವುದರಿಂದ ಭಾರತದಿಂದ ಅಮೆರಿಕಕ್ಕೆ ಕೇಂದ್ರ ಸಚಿವರ ಸಹಿತ ಗಣ್ಯರು ಭೇಟಿ ನೀಡಿದರೆ ಇವರೆ ಆತಿಥ್ಯದ ಜವಬ್ದಾರಿ ವಹಿಸುತ್ತಾರೆ.

2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾದ್ದರಿಂದ ಮೊದಲ ದಿನ ರಾತ್ರಿಯ ಊಟಕ್ಕೆ ಸಿರಿಧಾನ್ಯಗಳ ಬಿಸಿಬೇಳೆ ಬಾತ್‌ ಮಾಡಿದ್ದರು. ಉಳಿದಂತೆ ಮೋದಿಯವರು ಗುಜರಾತಿ ಶೈಲಿಯಲ್ಲಿ ಕಿಚಡಿ, ಢೋಕ್ಲಾ, ಹಸಿ ಅಥವಾ ಬೇಯಿಸಿದ ತಾಜಾ ತರಕಾರಿಗಳು, ಹಣ್ಣುಗಳು ಇತ್ಯಾದಿಯನ್ನಷ್ಟೇ ಬಯಸುವುದರಿಂದ ಮತ್ತು ದ. ಭಾರತೀಯ ವಿಶೇಷಗಳಾದ ಇಡ್ಲಿ-ಚಟ್ನಿ, ವಡೆ-ಸಾಂಬಾರ್‌ ಸಹ ಅವರಿಗೆ ಇಷ್ಟವೇ ಆದ್ದರಿಂದ, ಪುನರಾವರ್ತನೆ ಆಗದಂತೆ ನೋಡಿಕೊಂಡು ಶುದ್ಧ ಸಸ್ಯಹಾರ ಆಹಾರವನ್ನೇ ಒದಗಿಸಿದ್ದಾರೆ ಎನ್ನಲಾಗಿದೆ.

Comments are closed.