ಕರಾವಳಿ

ಕುಂದಾಪುರ ಪೇಟೆಯಲ್ಲಿ ‘ಕೈ’ ಪಕ್ಷದಿಂದ ಬೃಹತ್ ಪಾದಯಾತ್ರೆ | ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮತಯಾಚನೆ

Pinterest LinkedIn Tumblr

ಕುಂದಾಪುರ: ಜನರಿಗೆ ನಾವು ಮಾಡಿದ ಕೆಲಸಗಳ ಲೆಕ್ಕ ಕೊಟ್ಟು ಅಭ್ಯರ್ಥಿ ಹೆಸರಲ್ಲೇ ಚುನಾವಣೆಯಲ್ಲಿ ಮತ ಕೇಳಬೇಕು. ಕೆಲಸ ಮಾಡಿದ ಆತ್ಮತೃಪ್ತಿ ಜನಪ್ರತಿನಿಧಿಗೆ ಇರಬೇಕು. ನಾವು ಜನಕ್ಕೆ ಮಾಡುವುದು ಸೇವೆಯಲ್ಲ, ಬದಲಾಗಿ ಅದು ಕರ್ತವ್ಯ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಸಂಜೆ ಆಯೋಜಿಸಿದ ಬ್ರಹತ್ ಪಾದಯಾತ್ರೆಯಲ್ಲಿ ಭಾಗವಹಿಸಿ ಅವರು ಮತಯಾಚನೆ ನಡೆಸಿದರು.

20 ತಿಂಗಳು ಸಂಸದನಾಗಿದ್ದಾಗ ಕ್ಷೇತ್ರಕ್ಕೆ ಬಹಳಷ್ಟು ಕೆಲಸ ಮಾಡಿದ್ದು ಅದೇ ಆಧಾರದಲ್ಲಿ ಈ ಬಾರಿ ಮತಯಾಚನೆ ಮಾಡುತ್ತಿರುವೆ. ಜನರಿಗೆ ಮಾಡಿದ ಕೆಲಸಗಳು ಶಾಶ್ವತ. ಸ್ಥಾನಗಳು ಕೇವಲ ಕ್ಷಣಿಕ. ಈ ಬಾರಿ ಸಂಸದನಾಗಿ ಆಯ್ಕೆಯಾದರೆ ಮಾಡಬೇಕಾದ ಅಗತ್ಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ವಿಶನ್ ಡಾಕ್ಯುಮೆಂಟ್ ಮಾಡಿದ್ದು ಉಡುಪಿ ಜಿಲ್ಲೆಗೆ ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಪರಿಸರ ಸ್ನೇಹಿ ಉದ್ಯಮಗಳ ಸ್ಥಾಪನೆ, ಪ್ರವಾಸೋಧ್ಯಮಕ್ಕೆ ಒತ್ತು ನೀಡಲಾಗುತ್ತದೆ. ಕರಾವಳಿ ಭಾಗದಲ್ಲಿ ಪ್ರವಾಸೋಧ್ಯಮಕ್ಕೆ ವಿಫುಲ ಅವಕಾಶಗಳಿದೆ. ಅಂತೆಯೇ ಧಾರ್ಮಿಕ ಪ್ರವಾಸೋಧ್ಯಮಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.

ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ ಗಫೂರ್, ಪ್ರಧಾನ ಕಾರ್ಯದರ್ಶಿ ಜಿ.ಎ ಬಾವ, ಕೆಪಿಸಿಸಿ ಸದಸ್ಯ ಹಾಗೂ ಕುಂದಾಪುರ ಚುನಾವಣಾ ಉಸ್ತುವಾರಿ ಸುರೇಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಶೋಕ್ ಪೂಜಾರಿ ಬೀಜಾಡಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಸತೀಶ್ ಕಿಣಿ ಬೆಳ್ವೆ, ಎಸ್. ರಾಜು ಪೂಜಾರಿ, ಬಿ. ಹಿರಿಯಣ್ಣ, ಕೋಣಿ ಕೃಷ್ಣದೇವ ಕಾರಂತ, ದೇವಾನಂದ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮೊದಲಾದವರಿದ್ದರು.

Comments are closed.