ವೀಡಿಯೋ ವರದಿಗಳು

ನೋಟಿನ ಕಷ್ಟ ಕೇಳಲು ಹೋದ ಮಾಜಿ ಸಂಸದೆ ರಮ್ಯಾಗೆ ವ್ಯಾಪಾರಸ್ಥರಿಂದ ಎದುರಾಯಿತು ಸಂಕಷ್ಟ ! ಈ ವೀಡಿಯೊ ಒಮ್ಮೆ ನೋಡಿ…

Pinterest LinkedIn Tumblr

ಮಂಡ್ಯ: 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧದಿಂದ ವ್ಯಾಪಾರಸ್ಥರು ಅನುಭವಿಸುತ್ತಿರುವ ಸಮಸ್ಯೆ ಆಲಿಸಲು ಬಂದಿದ್ದ ನಟಿ, ಮಾಜಿ ಸಂಸದೆ ರಮ್ಯಾಗೆ ವ್ಯಾಪಾರಸ್ಥರೇ ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ.

ವ್ಯಾಪಾರಸ್ಥರ ಸಮಸ್ಯೆ ಆಲಿಸಲು ರಮ್ಯಾ ಇಲ್ಲಿನ ತರಕಾರಿ ಮಾರುಕಟ್ಟೆಗೆ ಶುಕ್ರವಾರ ಬಂದಿದ್ದರು. ನೋಟು ರದ್ದಾದ ನಂತರ ಎದುರಿಸುತ್ತಿರುವ ಸಮಸ್ಯೆಗಳೇನು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ವ್ಯಾಪಾರಸ್ಥರು ಸಂಸತ್‌ ಚುನಾವಣೆಗೆ ಸೋತ ನಂತರ ಒಮ್ಮೆಯೂ ನಮ್ಮ ಸಮಸ್ಯೆ ಆಲಿಸಿಲ್ಲ. ಈಗ ಏಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕೆಲವರು ಪ್ರಧಾನಿ ಮೋದಿಗೆ ಜೈಕಾರ್‌ ಹಾಕಿದರೆ, ಕೆಲವರು ರಮ್ಯಾ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಮುಜುಗರಕ್ಕೊಳಗಾದ ರಮ್ಯಾ ಅಲ್ಲಿಂದ ಕಾಲ್ಕಿತ್ತಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯಾ, ವ್ಯಾಪಾರಸ್ಥರ ಸಮಸ್ಯೆ ಕೇಳಲು ಹೋಗಿದ್ದೆ. ಆದರೆ ಕೆಲವರು ಪ್ರಧಾನಿ ಮೋದಿ ಅವರಿಗೆ ಜೈಕಾರ್‌ ಹಾಕುತ್ತಿದ್ದಾರೆ. ಇವರಿಗೆಲ್ಲ ನಾನೇನು ಹೇಳಲಿ ಎಂದರು.

Comments are closed.