ಕರಾವಳಿ

ಬೈಕ್ ಸ್ಕಿಡ್ ಆಗಿ ಬ್ರೈನ್ ಡೆಡ್ ಆದ ಹಿಮಾಂಶು ಅಂಗಾಂಗ ಮಣಿಪಾಲದಿಂದ ಬೆಂಗಳೂರಿಗೆ ರವಾನೆ (ವಿಡಿಯೋ ವರದಿ)

Pinterest LinkedIn Tumblr

ಉಡುಪಿ: ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯೊಬ್ಬರ ಅಂಗಾಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ಬೆಂಗಳೂರಿಗೆ ರವಾನಿಸಲಾಯಿತು. ಬೈಕ್ ಸ್ಕಿಡ್ ಆಗಿ ಗಂಬೀರ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯ ಹೃದಯ ಮತ್ತು ಲಿವರನ್ನು ಬೆಂಗಳೂರಿಗೆ ವಿಮಾನದ ಮೂಲಕ ಕೊಂಡೊಯ್ಯಲಾಯಿತು. ಕಾರ್ನಿಯ ಮತ್ತು ಎರಡು ಕಿಡ್ನಿಯನ್ನು ಮಣಿಪಾಲ ಆಸ್ಪತ್ರೆಯ ರೋಗಿಗೆ ನೀಡುವ ನಿರ್ಧಾರ ಮಾಡಲಾಯಿತು.

himanshu_manipal_anganga-ravane-2 himanshu_manipal_anganga-ravane-3 himanshu_manipal_anganga-ravane-5 himanshu_manipal_anganga-ravane-6 himanshu_manipal_anganga-ravane-4 himanshu_manipal_anganga-ravane-11 himanshu_manipal_anganga-ravane-10 himanshu_manipal_anganga-ravane-9 himanshu_manipal_anganga-ravane-8 himanshu_manipal_anganga-ravane-7 himanshu_manipal_anganga-ravane-1

ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡು ಬೈನ್ ಡೆಡ್ ಆಗಿದ್ದ ಉಡುಪಿಯ ಹಿಮಾಂಶುವಿನ ಅಂಗಾಗಗಳನ್ನು ಇಂದು ಬೆಂಗಳೂರಿಗೆ ರವಾನಿಸಲಾಯಿತು. ಹೃದಯ ಹಾಗೂ ಲಿವರ್‌ನ್ನು ಮಂಗಳೂರಿನ ಮೂಲಕ ವಿಮಾನದಲ್ಲಿ ಬೆಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕಾರ್ನಿಯ ಮತ್ತು ಎರಡು ಕಿಡ್ನಿಯನ್ನು ಮಣಿಪಾಲ ಆಸ್ಪತ್ರೆಯ ರೋಗಿಗೆ ನೀಡುವ ನಿರ್ಧಾರ ಮಾಡಲಾಯಿತು. ಶನಿವಾರ ಮಣಿಪಾಲದ ಮಣ್ಣಪಳ್ಳ ಬಳಿ ಬೈಕ್ ಸ್ಕಿಡ್ ಆಗಿತ್ತು. ಸವಾರ ಹರ್ಷಿತ್ ಸ್ಥಳದಲ್ಲೇ ಮೃತಪಟ್ಟಿದ್ದರು, ಸಹಸವಾರನಾಗಿದ್ದ ಹಿಮಾಂಶು ಗಂಭೀರ ಗಾಯಗೊಂಡಿದ್ದರು. ಹಿಮಾಂಶುವನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಲೆಗೆ ತೀರ್ವ ಪೆಟ್ಟಾಗಿದ್ದುದರಿಂದ ಬ್ರೈನ್ ಡೆಡ್‌ ಆಗಿದೆ ಎಂದು ವೈದ್ಯರು ದೃಢೀಕರಿಸಿದ್ರು. ಬಳಿಕ ಹಿಮಾಂಶು ಪೋಷಕರು ಅಂಗಾಗ ದಾನದ ನಿರ್ಧಾರ ಮಾಡಿದ್ರು.

ಹಿಮಾಂಶುವಿನ ತಂದೆಯೂ ವೈದ್ಯರಾಗಿದ್ದು, ತನ್ನ ಮಗನ ಸುಸ್ಥಿತಿಯ ಅಂಗಾಗಳನ್ನು ಅಗತ್ಯವಿರುವ ವ್ಯಕ್ತಿಗಳಿಗೆ ನೀಡಲು ತೀರ್ಮಾನಿಸಿದರು. ಬೆಂಗಳೂರಿನ ಅಂಗಾಗ ರವಾನೆ ಮತ್ತು ಕಸಿ ಮಾಡುವ Z.C.C.K ಸಂಸ್ಥೆಯ ಅಧಿಕಾರಿಗಳು ಮಣಿಪಾಲಕ್ಕೆ ಮುಂಜಾನೆ ಆಗಮಿಸಿದ್ರು. ಅಂಗಾಗ ರವಾಣಿಸಲು ಪೊಲೀಸರು ಮಣಿಪಾಲದಿಂದ ಮಂಗಳೂರು ವಿಮಾನ ನಿಲ್ಧಾಣದವರೆಗೂ ಜೀರೋ ಟ್ರಾಫಿಕ್ ರಚನೆ ಮಾಡಿದ್ರು.

ಇದನ್ನೂ ಓದಿರಿ: 

ಉಡುಪಿ: ಅಪಘಾತದ ಗಾಯಾಳು ಹಿಮಾಂಶು ಬ್ರೈನ್ ಡೆಡ್; ಅಂಗಾಂಗ ದಾನಕ್ಕೆ ಪಾಲಕರ ನಿರ್ಧಾರ

https://www.kannadigaworld.com/kannada/karavali-kn/286202.html

Comments are closed.