ಉಡುಪಿ: ಬೈಕ್ ಸ್ಕಿಡ್ ಅಪಘಡದಲ್ಲಿ ಓರ್ವ ಯುವಕ ಮೃತನಾಗಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ. ಮಣಿಪಾಲದ ಮಣ್ಣಪಳ್ಳ ಬಳಿ ಅಪಘಾತ ಸಂಭವಿಸಿದ್ದು ಹರ್ಷಿತ್(19) ಮೃತಪಟ್ಟ ಸವಾರ.

ಅಪಘಾತದಲ್ಲಿ ಗಂಭೀರ ಗಾಯಗೊಂಡ ಹಿಮಾನುಶ್ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಹರ್ಷಿತ್ ಬಂಟಕಲ್ ಇಂಜಿನೀಯರ್ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
Comments are closed.