ರಾಷ್ಟ್ರೀಯ

ದಸರಾ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ಬೆಲೆ ಕಡಿಮೆಗೊಳಿಸಿದ ಎಚ್‍ಟಿಸಿ

Pinterest LinkedIn Tumblr

htc

ನವದೆಹಲಿ: ದಸರಾ ಹಿನ್ನೆಲೆಯಲ್ಲಿ ತೈವಾನ್ ಮೂಲದ ಎಚ್‍ಟಿಸಿ ಕಂಪೆನಿಯ ಎಚ್‍ಟಿಸಿ 10 ಬೆಲೆ ಕಡಿಮೆಯಾಗಿದೆ.

ಈ ವರ್ಷದ ಮೇ ತಿಂಗಳಿನಲ್ಲಿ 52,990 ರೂ. ಬೆಲೆಗೆ ಬಿಡುಗಡೆಯಾಗಿದ್ದ ಫೋನ್ ಬೆಲೆ 5 ಸಾವಿರ ರೂ. ಕಡಿಮೆಯಾಗಿದೆ. ಇದರಿಂದಾಗಿ ಈಗ ಈ ಫೋನ್ 47,990 ರೂ. ನಿಗದಿಯಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಮಾತ್ರ ಈ ಫೋನ್ ದರ ಕಡಿತಗೊಂಡಿದ್ದು, ಯಾವ ದಿನಾಂಕದ ವರೆಗೆ ಈ ದರಕಡಿತ ಇರುತ್ತದೆ ಎನ್ನುವ ಮಾಹಿತಿಯನ್ನು ಕಂಪೆನಿ ನೀಡಿಲ್ಲ. ಈ ಫೋನಿಗೆ ಎಚ್‍ಟಿಸಿ ಆಂಡ್ರಾಯ್ಡ್ ನೂಗಟ್ ಓಎಸ್ ಅಪ್‍ಡೇಟ್ ನೀಡಿದೆ.

ಗುಣ ವೈಶಿಷ್ಟ್ಯಗಳು: ನ್ಯಾನೋ ಸಿಂಗಲ್ ಸಿಮ್, 5.2 ಇಂಚಿನ ಸೂಪರ್ ಎಲ್‍ಸಿಡಿ ಸ್ಕ್ರೀನ್(1440*2560 ಪಿಕ್ಸೆಲ್, 565 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3), ಆಂಡ್ರಾಯ್ಡ್ ಮಾರ್ಶ್‍ಮೆಲೊ ಓಎಸ್, ಕ್ವಾಲಕಂ ಕ್ವಾಡ್‍ಕೋರ್ ಪ್ರೊಸೆಸರ್ ಹೊಂದಿದೆ.

64 ಜಿಬಿ ಆಂತರಿಕ ಮಮೊರಿ, 4ಜಿಬಿ ರಾಮ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮಥ್ರ್ಯ, 12 ಎಂಪಿ ಹಿಂದುಗಡೆ, 5 ಎಂಪಿ ಮುಂದುಗಡೆ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿರುವ ಈ ಫೋನ್ 3000 ಎಂಎಎಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.

Comments are closed.