ಪ್ರಮುಖ ವರದಿಗಳು

ರಜನಿ ಪುತ್ರಿ ಜೊತೆಗೆ ಡಿವೋರ್ಸ್ ಪಡೆದ ಧನುಷ್; 18 ವರ್ಷಗಳ ಬಳಿಕ ದೂರಾದ ಜೋಡಿ

Pinterest LinkedIn Tumblr

ಚೆನ್ನೈ: ಸೌತ್ ಇಂಡಸ್ಟ್ರಿಯ ಮತ್ತೊಂದು ಸ್ಟಾರ್ ಜೋಡಿ ವಿಚ್ಛೇಧನ ಪಡೆದಿದೆ.ನಟ ಧನುಷ್ ಹಾಗೂ ಪತ್ನಿ ಐಶ್ವರ್ಯಾ ರಜನಿಕಾಂತ್ ಇಬ್ಬರೂ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ.

18 ವರ್ಷಗಳ ಬಳಿಕ ಇಬ್ಬರೂ ಬೇರೆಯಾಗಲು ನಿರ್ಧರಿಸಿರುವುದು ತಮಿಳು ಚಿತ್ರರಂಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ. ನಟ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಟ್ವಿಟ್ಟರ್ ನಲ್ಲಿ ಬೇರೆಯಾಗುತ್ತಿರುವ ವಿಷಯವನ್ನು ಘೋಷಣೆ ಮಾಡಿದ್ದಾರೆ. ಇಬ್ಬರೂ ಬೇರೆಯಾಗುತ್ತಿರುವುದಾಗಿ ಧನುಷ್ ಹಾಗೂ ಐಶ್ವರ್ಯಾ ಜೊತೆಯಾಗಿ ಟ್ವೀಟ್ ಮಾಡಿ ಘೋಷಣೆ ಮಾಡಿದ್ದಾರೆ.

ಧನುಷ್ ಸೋಶಿಯಲ್ ಮೀಡಿಯಾ ಮೂಲಕ ವಿಚ್ಛೇದನದ ಬಗ್ಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. “18 ವರ್ಷ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಹಾಗೂ ಹಿತೈಷಿಯಾಗಿ ಜೊತೆಗಿದ್ದೆವು. ಬೆಳವಣಿಗೆ, ಪರಸ್ಪರ ಅರಿತುಕೊಳ್ಳುವಿಕೆ, ಹೊಂದಾಣಿಕೆ ಹಾಗೂ ಒಪ್ಪಿಕೊಳ್ಳುವ ಜರ್ನಿ ಮಧುರವಾಗಿತ್ತು. ಇವತ್ತು ನಾವು ನಮ್ಮ ಬೇರೆ ದಾರಿಗಳನ್ನು ಹುಡುಕಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೇವೆ. ಐಶ್ವರ್ಯ ಹಾಗೂ ನಾನು ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದು, ಒಬ್ಬರನೊಬ್ಬರು ಸ್ವತಂತ್ರ ವ್ಯಕ್ತಿಯಾಗಿ ಅರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ನಿರ್ಧಾರಗಳಿಗೆ ಗೌರವ ನೀಡಿ ಮತ್ತು ಇದನ್ನು ನಿಭಾಯಿಸಲು ಬಿಡಿ ” ಎಂದು ಧನುಷ್ ತಿಳಿಸಿದ್ದಾರೆ.

ನವೆಂಬರ್ 18, 2004ರಲ್ಲಿ ಧನುಷ್ ಹಾಗೂ ಐಶ್ವರ್ಯಾ ವಿವಾಹವಾಗಿದ್ದರು.

Comments are closed.