ಕರ್ನಾಟಕ

ಒಳ ಉಡುಪು ಗಿಪ್ಟ್ ಕೊಟ್ಟು ಸುತ್ತಾಡೋಕೆ ಬಾ ಎಂದ ಬಾಡಿಗೆ ಮನೆ ಓನರ್: ದೂರು ಕೊಟ್ಟ ಶಿಕ್ಷಕಿ..!

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ಬಾಡಿಗೆ ಮನೆಯ ಮಾಲೀಕನೊಬ್ಬನ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಡಿಗೆ ಮನೆಯಲ್ಲಿ ವಾಸವಿರುವ ಶಿಕ್ಷಕಿಗೆ ಮಾಲೀಕ ಕಿರುಕುಳ ನೀಡುತ್ತಿದ್ದಾಗಿ ಶಿಕ್ಷಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಬೆಂಗಳೂರಿನ ಶ್ರೀನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಶಿಕ್ಷಕಿಗೆ ಮನೆ ಮಾಲೀಕ ಪದ್ಮನಾಭ ಎಂಬ ವ್ಯಕ್ತಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಶಿಕ್ಷಕಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಶಿಕ್ಷಕಿಯ ಹುಟ್ಟುಹಬ್ಬಕ್ಕೆ ಮನೆ ಮಾಲೀಕ ಒಳ ಉಡುಪುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದನಂತೆ. ಹೊರಗೆ ಸುತ್ತಾಡಲು ಆಹ್ವಾನಿಸಿದ್ದಾನಂತೆ. ಫೋನ್ ಮಾಡಿ ಬೇರೆ ಅಸಭ್ಯವಾಗಿ ಮಾತನಾಡಿದ್ದಾನೆ. ಅಲ್ಲದೆ ರಾತ್ರೋ ರಾತ್ರಿ ಬಾಡಿಗೆಮನೆ ಕಾಂಪೌಂಡ್ ಗೇಟ್ ಹಾರಿ ಮನೆ ಡೋರ್ ಲಾಕ್ ಮಾಡಿ ಕಿರುಕುಳ ನೀಡಿದ್ದಾಗಿ ಶಿಕ್ಷಕಿ ಆರೋಪಿಸಿದ್ದಾರೆ.

ಸದ್ಯ ಮನೆ‌ ಮಾಲೀಕ‌ ಪದ್ಮನಾಭ ದುರ್ವರ್ತನೆಗೆ ಶಿಕ್ಷಕಿ ಅಸಮಾಧಾನಗೊಂಡಿದ್ದಕ್ಕೆ ಮನೆ ಖಾಲಿ ಮಾಡುವಂತೆಯೂ ಕಿರಿಕ್ ಮಾಡಿದ್ದಾನಂತೆ.

ಇದರಿಂದ ನೊಂದ ಶಿಕ್ಷಕಿ ಮನೆ ಮಾಲೀಕ ಪದ್ಮನಾಭ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

Comments are closed.