ಪ್ರಮುಖ ವರದಿಗಳು

ಕಂಗನಾ ತನ್ನನ್ನು ತಾನು ಝಾನ್ಸಿ ರಾಣಿ ಲಕ್ಷ್ಮಿ ಭಾಯಿ ಎಂದು ತಿಳಿದಿದ್ದಾರೆಯೇ?: ನಟ ಪ್ರಕಾಶ್​ ರಾಜ್ ವ್ಯಂಗ್ಯ

Pinterest LinkedIn Tumblr

 

ಮುಂಬೈ : ಬಾಲಿವುಡ್​ ಮಾಫಿಯಾ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ವಿರುದ್ಧ ಸಮರಕ್ಕೆ ನಿಂತಿರುವ ಕಂಗನಾಳನ್ನು ಕೆಲ ನೆಟ್ಟಿಗರು ಮಣಿಕಾರ್ಣಿಕ ಚಿತ್ರದ ಝಾನ್ಸಿ ರಾಣಿ ಲಕ್ಷ್ಮಿ ಭಾಯಿ ಪಾತ್ರಕ್ಕೆ ಹೋಲಿಸಿರುವುದಕ್ಕೆ ಭಾರತೀಯ ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿ ಪ್ರಕಾಶ್​ ರಾಜ್ ವ್ಯಂಗ್ಯವಾಡಿದ್ದಾರೆ.

ಬಾಲಿವುಡ್​ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ನಟಿ ಕಂಗನಾ ರಣಾವತ್​ರನ್ನು ತಾನೋರ್ವ ಲಕ್ಷ್ಮೀಬಾಯಿ ಎಂದು ಕಂಗನಾ ಭಾವಿಸಿಕೊಂಡಿದ್ದಾರೆ ಎಂದು ಪ್ರಕಾಶ್​ ರಾಜ್​ ಮೀಮ್ಸ್​ ಮೂಲಕ ಕಾಲೆಳೆದಿದ್ದಾರೆ.

ತಾನು ಮಾಡಿದ ಒಂದು ಐತಿಹಾಸಿಕ ಚಿತ್ರ (ಮಣಿಕಾರ್ಣಿಕ) ದಿಂದ ತಾನೋರ್ವ ಲಕ್ಷ್ಮೀಬಾಯಿ ಎಂದು ಕಂಗನಾ ಭಾವಿಸಿಕೊಂಡಿದ್ದಾರೆ. ಹಾಗಾದರೆ ದೀಪಿಕಾಳ ಪದ್ಮಾವತಿ, ಆಮೀರ್​ ಖಾನ್​ ಅವರ ಮಂಗಲ ಪಾಂಡೆ, ಅಜಯ್​ ದೇವಗನ್​ ಅವರ ಭಗತ್​ ಸಿಂಗ್​, ವಿವೇಕ್​ ಅವರ ಮೋದಿ ಜಿ, ಶಾರೂಕ್​ ಅವರ ಅಶೋಕ ಮತ್ತು ಹೃತಿಕ್​ ಅವರ ಅಕ್ಬರ್ ಪಾತ್ರ ಮಾಡಿರುವ ಇವರೆಲ್ಲಾ ಏನು ಎಂದು ಮೀಮ್ಸ್​ ಮೂಲಕ ಪ್ರಶ್ನಿಸಿದ್ದಾರೆ.

Comments are closed.