ಕರಾವಳಿ

ಮುಂಬಾಯಿ : ಹೋಟೇಲು ಉದ್ಯಮ ಪುನರಾರಂಭಿಸಲು ಫೆಡರೇಶನ್ ಆಫ್ ಹೋಟೇಲ್ ಆಂಡ್ ರೆಷ್ಟೂರೆಂಟ್ ಅಸೋಷಿಯೇಶನ್‌ನಿಂದ ಸರಕಾರಕ್ಕೆ ಮನವಿ

Pinterest LinkedIn Tumblr

ಮುಂಬಯಿ : ಕೊವಿಡ್ ನಿಂದಾಗಿ ಸರಕಾರದ ಹೊಸ ನಿಯಮವನ್ನು ಪಾಲಿಸುದರೊಂದಿಗೆ ಹೋಟೇಲು ಉದ್ಯಮವನ್ನು ಪುನರಾರಂಭಿಸಲು ಫೆಡರೇಶನ್ ಆಫ್ ಹೋಟೇಲ್ ಆಂಡ್ ರೆಷ್ಟೂರೆಂಟ್ ಆಫ್ ಮಹಾರಾಷ್ಟ್ರ ಸರಕಾರವನ್ನು ವಿನಂತಿಸಿದೆ.

ಫೆಡರೇಶನ್ ನ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷರಾದ ಡಾ. ವಿರಾರ್ ಶಂಕರ ಶೆಟ್ಟಿ, ಮಹಾರಾಷ್ಟ್ರ ರಾಷ್ಟ್ರವಾದಿ ಹೋಟೇಲು ಕಾಮಗಾರ್ ಯೂನಿಯನ್ ನ ಅಧ್ಯಕ್ಷರಾದ ಕಳತ್ತೂರು ವಿಶ್ವನಾಥ ಜೆ ಶೆಟ್ಟಿ, ನವಿಮುಂಬಯಿ ಹೋಟೇಲು ಓನರ್ ಅಸೋಷಿಯೇಶನ್ ನ ಅಧ್ಯಕ್ಷರಾದ ಮಾರುತಿ ಎನ್ ಬೌರ್, ದಯಾನಂದ ಶೆಟ್ಟಿ, ಭಾಸ್ಕರ್ ಶೆಟ್ಟಿಯವರು ಈ ಬಗ್ಗೆ ಚರ್ಚಿಸಿ ’ವರ್ಷಾ’ ಬಂಗ್ಲೆಗೆ ಬೇಟಿಯಿತ್ತು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮಾತ್ರವಲ್ಲದೆ ಎಸ್.ಸಿ.ಪಿ. ಅಧ್ಯಕ್ಷ ಶರದ್ ಪವಾರ್ ಹಾಗೂ ಸಂಸದೆ ಸುಪ್ರಿಯಾ ಸುಳೆ ಯವರನ್ನು ಬೇಟಿಯಾಗಿ ಕಳೆದ ಆರು ತಿಂಗಳಿಂದ ಅನುಭವಿಸುತ್ತಿರುವ ಹೋಟೇಲಿಗರ ಸಮಸ್ಯೆಯನ್ನು ಅವರ ಗಮನಕ್ಕೆ ತರುವುದರ ಮೂಲಕ ಪೂರ್ಣ ಪ್ರಮಾಣದಲ್ಲಿ ಹೋಟೇಲು ಹಾಗೂ ಬಾರ್ ರನ್ನು ಪ್ರಾರಂಭಿಸಲು ಅನುಮತಿಯನ್ನು ನೀಡಲು ವಿನಂತಿಸಲಾಯಿತು.

ವಿಡಿಯೋ ಕಾನ್ಪರೆನ್ಸ್ ಮೂಲಕ ಸಂಮಂದಪಟ್ಟ ಎಲ್ಲರಲ್ಲೂ ಮಾತನಾಡಿ ಒಂದು ವಾರದಲ್ಲಿ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುದಾಗಿ ಮುಖ್ಯಮಂತ್ರಿಯವರು ಅಸ್ವಾಸನೆ ನೀಡಿದ್ದಾರೆ.

ವರದಿ : ಈಶ್ವರ್ ಎಂ. ಐಲ್  /ಚಿತ್ರ : ದಿನೇಶ್ ಕುಲಾಲ್

Comments are closed.