ಕುಂದಾಪುರ: ಮನೆಯಲ್ಲಿದ್ದ ಗರ್ಭಿಣಿ ಮಹಿಳೆಯೋರ್ವಳ ಅತ್ಯಾಚಾರ, ಕೊಲೆ ಹಾಗೂ ದರೋಡೆ ಪ್ರಕರಣ ಕರಾವಳಿಯನ್ನೇ ಬೆಚ್ಚಿಬೀಳಿಸಿದ ಘಟನೆ. ಗರ್ಭಿಣಿಯನ್ನು ಕೊಂದ ಹಂತಕನ ಮೇಲೆ ಮಾಡಲಾದ ಆರೋಪ ಸಾಭೀತಾಗಿದ್ದು ಫೆ.20ಕ್ಕೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಕುಂದಾಪುರದಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ದೋಷಿಯೆಂದು ಪ್ರಕಟಿಸಿದೆ.
( ಕೊಲೆಗಾರ ಪ್ರಶಾಂತ)
(ಇಂದಿರಾ)
ಕುಂದಾಪುರ ತಾಲೂಕಿನ ಗೋಪಾಡಿಯ ಪಡುಗೋಪಾಡಿಯ ಲಿಂಗಜ್ಜಿ ಮನೆ ನಿವಾಸಿ ಇಂದಿರಾ ಎನ್ನುವ ಆರೂವರೆ ತಿಂಗಳ ಗರ್ಭಿಣಿ ಮಹಿಳೆಯನ್ನು ಪ್ರಶಾಂತ ಮೊಗವೀರ ಎನ್ನುವ ಕಾಮುಕನೋರ್ವ ಅತ್ಯಾಚಾರ ನಡೆಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಆಕೆಯ ಕರಿಮಣಿ ಸರವನ್ನು ದೋಚಿದ್ದ. ಕೊಲೆ ನಡೆಸಿದ ಬಳಿಕ ರಕ್ತಸಿಕ್ತ ಬಟ್ಟೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ ಪ್ರಶಾಂತನನ್ನು ಕುಂದಾಪುರ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿದ್ದರು. ಈ ಬೆಚ್ಚಿ ಬೀಳಿಸುವ ದುರ್ಘಟನೆ ನಡೆದು 2018 ಎಪ್ರಿಲ್ 11 ದಿನಾಂಕಕ್ಕೆ ಬರೋಬ್ಬರಿ ಮೂರು ವರ್ಷವಾಗುತ್ತೆ. 2015 ಎಪ್ರಿಲ್ 11 ಸಂಜೆ ಹೊತ್ತು ಈ ಘಟನೆ ಕುಂದಾಪುರ ತಾಲೂಕಿನ ಗೋಪಾಡಿಯಲ್ಲಿ ನಡೆದಿತ್ತು.
ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಆನಂದ ಅವರ ಪತ್ನಿಯಾದ ಇಂದಿರಾ ಘಟನೆ ದಿನ ಪುತ್ರನೊಂದಿಗೆ ಇದ್ದ ವೇಳೆ ನೀರು ಕೇಳುವ ನೆಪದಲ್ಲಿ ಬಂದ ಪ್ರಶಾಂತ್ ಆಕೆ ಮೇಲೆ ದೌರ್ಜನ್ಯ ನಡೆಸಿ ಕೊಲೆ ಮಾಡಿ ಕರಿಮಣಿ ದೋಚಿದ್ದ. ಘಟನೆ ವೇಳೆ ಇಂದಿರಾ ಅವರ ಸಹೋದರಿ ಹಾಗೂ ಸಹೋದರಿಯ ಪುತ್ರಿ ಮನೆಯಲ್ಲಿರಲಿಲ್ಲ. ಅವರು ಮನೆಗೆ ಬಂದ ಬಳಿಕ ಘಟನೆ ಬೆಳಕಿಗೆ ಬಂದಿತ್ತು.
(File Pics)
ಎಲ್ಲಾ ಪ್ರಕರಣದಲ್ಲಿಯೂ ಪ್ರಶಾಂತ ದೋಷಿ…
ಘಟನೆ ನಡೆದ ದಿನವೇ ಕೊಲೆಗಾರ ಪ್ರಶಾಂತನನ್ನು ಪೊಲಿಸರು ಬಂಧಿಸಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತು ಘನ ನ್ಯಾಯಾಲಯವು ಆರೋಪಿಗೆ ಜಾಮೀನು ನಿರಾಕರಣೆಯನ್ನು ಮಾಡಿತ್ತು. ಆದ್ದರಿಂದ ಆರೋಪಿ ಬಂಧನವಾದ ದಿನದಿಂದಲೂ ಜೈಲಿನಲ್ಲಿದ್ದ. ಪ್ರಶಾಂತನ ಮೇಲೆ ಹೊರಿಸಲಾಗಿದ್ದ ಕೊಲೆ, ಅತ್ಯಾಚಾರ, ದರೋಡೆ, ಮನೆಗೆ ಅಕ್ರಮ ಪ್ರವೇಶ ಸೇರಿದಂತೆ ಇತರೆ ಕೆಲವು ಪ್ರಕರಣಗಲಲ್ಲಿಯೂ ಇತನೇ ದೋಷಿಯೆಂದು ನ್ಯಾಯಾಲಯ ತೀರ್ಪನ್ನಿತ್ತಿದೆ.
ರವಿಕಿರಣ್ ಮುರ್ಡೇಶ್ವರ್ ವಾದ..!
ಕೊಲೆಯಾದ ಇಂದಿರಾ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹಿಳೆ ಕುಟುಂಬಿಕರ ಆಪೇಕ್ಷೆ ಮೇರೆಗೆ ಈ ಪ್ರಕರಣವನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರನ್ನು ನಿಯೋಜಿಸಲಾಗಿತ್ತು.
(ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್)
ಎಲ್ಲರ ಚಿತ್ತ ತೀರ್ಪಿನತ್ತ..
ಘಟನೆ ನಡೆದ ದಿನದಿಂದಲೂ ಕೊಲೆಗಾರ, ನಟೋರಿಯಸ್ ಪ್ರಶಾಂತನ ಬಗ್ಗೆ ಗೋಪಾಡಿ ಸೇರಿದಂತೆ ಜಿಲ್ಲಾಧ್ಯಂತ ಆಕ್ರೋಷ ವ್ಯಕ್ತವಾಗಿತ್ತು. ಆತನಿಗೆ ಉಘ್ರ ಶಿಕ್ಷೆಯಾಗಬೇಕೆಂಬ ಆಗ್ರಹಗಳು ಕೇಳಿಬಂದಿತ್ತು. ಸದ್ಯ ಕೋರ್ಟ್ ಆತನೇ ದೋಷಿಯೆಂದು ತೀರ್ಪು ನೀಡಿದ್ದು ಫೆ.20ಕ್ಕೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಸದ್ಯ ಎಲ್ಲರ ಚಿತ್ತ ತೀರ್ಪಿನ ದಿನದತ್ತ ನೆಟ್ಟಿದೆ. ಆತನಿಗೆ ಮರಣದಂಡನೆ ಶಿಕ್ಷೆಯೇ ಆಗಬೇಕೆಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಇಂದಿರಾಳ ಮಗ ಒಮ್ಮೊಮ್ಮೆ ತಾಯಿಯನ್ನು ನೆನೆದು ಕಣ್ಣೀರುಡುವಾಗ ನಮಗೆ ತಡೆಯಲಾದರ ದುಃಖವಾಗುತ್ತದೆ. ಇಷ್ಟೆಲ್ಲಾ ಘಟನೆಗೆ ಕಾರಣನಾದ ಪಾಪಿಗೆ ಮರಣ ದಂಡನೆಯಂತಹ ಕಠಿಣ ಸಜೆಯಾಗಬೇಕು. ಆತ ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದ್ದು ಮನಸ್ಸಿಗೆ ನಿರಾಳವಾಗಿದೆ ಎಂದು ಇಂದಿರಾ ಕುಟುಂಬಿಕರು ‘ಕನ್ನಡಿಗ ವರ್ಲ್ಡ್’ಗೆ ತಿಳಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
ಇದನ್ನೂ ಓದಿರಿ: ನೀರು ಕೇಳಿ ಜೀವವನ್ನೇ ತೆಗೆದ ಯುವಕ; ಅರೆಸ್ಟ್ ಆಗಿರುವ ಕ್ರಿಮಿನಲ್ ಹಿನ್ನೆಲೆಯ ಕಾಮುಕ
ಗೋಪಾಡಿ: ಹಾಡಹಗಲೇ ಮಹಿಳೆಯ ಭೀಕರ ಕೊಲೆ; ಅತ್ಯಾಚಾರ ನಡೆಸಿ ಕೊಲೆ ಶಂಕೆ; ಶಂಕಿತ ಆರೋಪಿಯ ಬಂಧನ
ಗೋಪಾಡಿ ಮಹಿಳೆ ಕೊಲೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯಾಗಲಿ: ನ್ಯಾಯಕ್ಕಾಗಿ ಬೀದಿಗಿಳಿದ ಮಹಿಳೆಯರು
ಇಂದಿರಾ ಮನೆಗೆ ಶೋಭಾ ಕರಂದ್ಲಾಜೆ ಭೇಟಿ : ಸಮಗ್ರ ತನಿಖೆಗೆ ಭರವಸೆ
ಕರಾವಳಿಯನ್ನೇ ಬೆಚ್ಚಿಬೀಳಿಸಿದ ಗೋಪಾಡಿಯ ಗರ್ಭಿಣಿ ಮಹಿಳೆ ಕೊಲೆಗೆ ಒಂದು ವರ್ಷದ ಕರಾಳ ನೆನಪು
ಗೋಪಾಡಿಯ ಇಂದಿರಾ ಕೊಲೆ ಪ್ರಕರಣ; ಮೃತಳ ಮನೆಗೆ ಸಚಿವ ಸೊರಕೆ, ಶಾಸಕ ಹಾಲಾಡಿ ಭೇಟಿ; ಸಚಿವರಿಂದ ಪರಿಹಾರದ ಭರವಸೆ
http://ಗೋಪಾಡಿಯಲ್ಲಿ ಕೊಲೆಯಾದ ಗರ್ಭಿಣಿ ಮಹಿಳೆ ಇಂದಿರಾ ಮನೆಗೆ ಉಡುಪಿ ಎಸ್ಪಿ ಭೇಟಿ; ನಿಸ್ಪಕ್ಷಪಾತ ತನಿಖೆಯ ಭರವಸೆ