ಕರಾವಳಿ

ಮಗನ ಹುಟ್ಟುಹಬ್ಬಕ್ಕೆ ಊರಿಗೆ ಬಂದ ತಂದೆ ಸಿಡಿಲಿಗೆ ಬಲಿ; ಸಿದ್ದಾಪುರದಲ್ಲಿ ಮನಕಲುಕುವ ಘಟನೆ

Pinterest LinkedIn Tumblr

ಉಡುಪಿ: ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸಿದ್ದಾಪುರ ಗ್ರಾಮದ ಸ್ವಾಮಿಹಾಡಿಯ ಸುರೇಶ್‌ ಶೆಟ್ಟಿ (38) ಮೃತಪಟ್ಟವರು.

ಮಂಗಳವಾರ ಸಂಜೆ ಸಿದ್ದಾಪುರದಲ್ಲಿ ಸಿಡಿಲು ಸಹಿತ ಮಳೆಯಾಗಿದ್ದು, ಈ ಸಂದರ್ಭ ಸುರೇಶ್‌ ಅವರು ತನ್ನ ಕಿರಿಯ ಮಗನೊಂದಿಗೆ ಮನೆ ಸಮೀಪವೇ ಇದ್ದ ಮಾವಿನ ಮರದಿಂದ ಬಿದ್ದ ಮಾವಿನಹಣ್ಣು ತರಲು ತೆರಳಿದ್ದರು. ಆಗ ಭಾರೀ ಶಬ್ದದೊಂದಿಗೆ ಸಿಡಿಲು ಎರಗಿದ್ದು, ಅದು ಸುರೇಶ್‌ ಅವರ ಎದೆಯ ಭಾಗಕ್ಕೆ ಬಡಿದಿದೆ. ತಂದೆ ಬಿದ್ದಿರುವುದನ್ನು ಗಮನಿಸಿ ಮಗು ಮನೆಗೆ ಓಡಿ ಹೋಗಿ ಮನೆಯವರಿಗೆ ವಿಷಯ ತಿಳಿಸಿತು.

ಅಸ್ವಸ್ಥಗೊಂಡು ಬಿದ್ದಿದ್ದ ಅವರನ್ನು ಬದುಕಿಸುವ ಪ್ರಯತ್ನ ಮಾಡಲಾಗಿತ್ತಾದರೂ ಇದೇ ವೇಳೆ ಸಿದ್ಧಾಪುರ ಭಾಗದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಎದುರಾಗಿದ್ದರಿಂದ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆಸ್ಪತ್ರೆಗೆ ಕರೆದೊಯ್ಯಲು ವಿಳಂಬವಾಗಿದ್ದರಿಂದ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಮಗುವಿನ ಜನ್ಮದಿನ
ಸುರೇಶ್‌ ಅವರ ಎರಡನೇ ಪುತ್ರನ ನಾಲ್ಕನೇ ವರ್ಷದ ಹುಟ್ಟುಹಬ್ಬ ಮೇ 16ರಂದು ನಡೆಯಲಿಕ್ಕಿತ್ತು. ಅದಕ್ಕಾಗಿಯೇ ಅವರು ಬೆಂಗಳೂರಿನಿಂದ ಬಂದು ಮನೆಯವರ ಜತೆ ಸಿದ್ಧತೆಯನ್ನೂ ನಡೆಸಿದ್ದರು.

Comments are closed.