ಕನ್ನಡ ವಾರ್ತೆಗಳು

ನೀರು ಕೇಳಿ ಜೀವವನ್ನೇ ತೆಗೆದ ಯುವಕ; ಅರೆಸ್ಟ್ ಆಗಿರುವ ಕ್ರಿಮಿನಲ್ ಹಿನ್ನೆಲೆಯ ಕಾಮುಕ

Pinterest LinkedIn Tumblr

ಗೋಪಾಡಿ ಮನೆಯಲ್ಲಿದ್ದ ಬಸುರಿ ಹೆಂಗಸಿನ ಕೊಲೆ ಆರೋಪಿ ಸೆರೆ

 ಆರೋಪಿಯನ್ನು ತೋರಿಸಲು ಆಗ್ರಹಿಸಿ ಸಂಬಂಧಿಕರಿಂದ ಠಾಣೆಗೆ ಮುತ್ತಿಗೆ

Gopadi_Lady_Murder (2)

ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಹಾಡುಹಗಲಲ್ಲೇ ಗೋಪಾಡಿ ಬೀಚ್ ರಸ್ತೆ ಒಂಟಿ ಮನೆಯ ನಿವಾಸಿ ಆರೂವರೆ ತಿಂಗಳ ಗರ್ಭಿಣಿ ಇಂದಿರಾ ಮೊಗವೀರ(31) ಮಹಿಳೆಯನ್ನು ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬೀಜಾಡಿ ನಿವಾಸಿ ಪ್ರಶಾಂತ್ ಮೊಗವೀರ(27)ನನ್ನು ಬಂಧಿಸಿದ್ದ ಕುಂದಾಪುರ ಪೊಲೀಸರು ತೀವ್ರ ತನಿಖೆಗೊಳಪಡಿಸಿದಾಗ ಅತ್ಯಾಚಾರಕ್ಕೆ ಯತ್ನಿಸಿದ್ದು, ಮಹಿಳೆ ಕಿರುಚಿಕೊಂಡಾಗ ದಾರಿಕಾಣದೇ ಪಕ್ಕದಲ್ಲಿದ್ದ ಕಲ್ಲೆತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

Gopadi_Lady_Murder

(ಆರೋಪಿ ಪ್ರಶಾಂತ್)

Gopadi_Lady_Murder (3) Gopadi_Lady_Murder (2) Gopadi_Lady_Murder (1) Gopadi_Lady_Murder (4) Gopadi_Lady_Murder (5) Gopadi_Lady_Murder (8) Gopadi_Lady_Murder (7) Gopadi_Lady_Murder (6) Gopadi_Lady_Murder (12) Gopadi_Lady_Murder (15) Gopadi_Lady_Murder (16) Gopadi_Lady_Murder (14) Gopadi_Lady_Murder (17) Gopadi_Lady_Murder (13)

ನೀರು ಕೇಳಲು ಬಂದು ಪ್ರಾಣ ತೆಗೆದ: ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಪ್ರಕರಣದಲ್ಲಿ ಪ್ರಶಾಂತ ಮೊಗವೀರ ಒಬ್ಬನೇ ಕೃತ್ಯ ಎಸಗಿರುವುದಾಗಿ ಪೊಲೀಸರಿಗೆ ತಿಳಿದು ಬಂದಿದ್ದು, ಇಂದಿರಾ ಮೊಗವೀರ ಮನೆಯಲ್ಲಿ ಇದ್ದ ಸಂದರ್ಭ ಆರೋಪಿ ಪ್ರಶಾಂತ ಮೊಗವೀರ ಬಂದಿದ್ದು ಕುಡಿಯಲು ನೀರು ಕೇಳಿದ್ದಾನೆ. ಆಗ ಬಾಟಲಿಯಲ್ಲಿ ನೀರು ತಂದು ಕೊಟ್ಟಿದ್ದು ದೊಡ್ಡ ಬಾಟಲಿಯಲ್ಲಿ ನೀರು ಬೇಕೆಂದು ಕೇಳಿದ್ದಾನೆ. ಮತ್ತೆ ಪುನಃ ಇಂದಿರಾ ಒಳಗೆ ಹೋಗುತ್ತಿದ್ದ ಸಂದರ್ಭ ಆಕೆಯನ್ನು ಹಿಂಬಾಲಿಸಿದ ಪ್ರಶಾಂತ್ ಆಕೆಯನ್ನು ಬಲಾತ್ಕಾರಕ್ಕೆ ಯತ್ನಿಸಿದ್ದಾನೆ. ಆಧರೆ ಆಕೆ ಕೊಸರಿಕೊಂಡಾಗ ಬಲಾತ್ಕಾರವಾಗಿ ಕೊಟ್ಟಿಗೆಗೆ ಎಳೆದೊಯ್ದಿದ್ದಾನೆ. ಅಲ್ಲಿ ಆಕೆಯ ಪ್ಯಾಂಟ್ ಮತ್ತು ಒಳ ವಸ್ತ್ರವನ್ನೆ ತೆಗೆದಿದ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭ ಆಕೆ ಬೊಬ್ಬೆ ಹೊಡೆದಿದ್ದು ಗಡಿಬಿಡಿಗೊಂಡ ಆತ ಆಕೆಯನ್ನು ಅಲ್ಲಿಯೇ ಇದ್ದ ಕಲ್ಲಿನಿಂದ ಚಚ್ಚಿ ಕೊಲೆ ಮಾಡಿ ಆಕೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಂಡು ಹೋಗಿದ್ದಾನೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಕ್ರಿಮಿನಲ್ ಹಿನ್ನಲೆಯ ಆಸಾಮಿ: ಮಲ್ಪೆಯಲ್ಲಿ ಮೀನುಗಾರಿಕೆಗೆ ಬಳಸಲೆಂದು ಇಡಲಾಗಿದ್ದ ಸೀಸದ ತುಂಡುಗಳನ್ನು ಕದ್ದ ಆರೋಪದಲ್ಲಿ ನ್ಯಾಯಾಲಯವು ಆತನಿಗೆ ಜೈಲು ಶಿಕ್ಷೆ ನೀಡಿದ್ದು, ಇತ್ತೀಚೇಗಷ್ಟೇ ಹಿರಿಯಡಕ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದ. ವಾರದ ಹಿಂದಷ್ಟೆ ಆತನಿಗೆ ಜೈಲಿನಿಂದ ಬಿಡುಗಡೆಯಾಗಿತ್ತು ಎನ್ನಲಾಗಿದೆ. ಅಲ್ಲದೇ ಈ ಹಿಂದೆ ಆತ ಕೆಲಸಕ್ಕೆಂದು ಹೋದಲ್ಲಿ ಮನೆಯವರ ಮೊಬೈಲ್ ಕದ್ದು ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾಗಿದ್ದ ಎಂದು ತಿಳಿದು ಬಂದಿದೆ.

ಮನೆಯಲ್ಲಿ ದುಃಖದ ಛಾಯೆ: ಮಣಿಪಾಲದಲ್ಲಿ ಇಂದಿರಾಳ ಮರಣೋತ್ತರ ಶವ ಪರೀಕ್ಷೆ ನಡೆಸಿದ ವೈದ್ಯರು ಭಾನುವಾರ ಮೃತದೇಹವನ್ನು ವಾರೀಸುದಾರರಿಗೆ ಬಿಟ್ಟು ಕೊಟ್ಟಿದ್ದಾರೆ. ಆಕೆಯ ಹೊಟ್ಟೆಯಲ್ಲಿದ್ದ ೬ ತಿಂಗಳ ಹೆಣ್ಣು ಮಗುವಿನ ಭ್ರೂಣವನ್ನು ಮನೆಯವರ ಸಂಪ್ರದಾಯದಂತೆ ಹೊರತೆಗೆಯಲಾಗಿದ್ದು, ತಾಯಿ ಮತ್ತು ಮಗವನ್ನು ಭಾನುವಾರ ಸಂಜೆ ಗೋಪಾಡಿಯ ಮನೆಗೆ ತರಲಾಯಿತು. ಈ ವೇಳೆ ಮನೆ ಮಂದಿ ಆಕ್ರಂಧನ ಮುಗಿಲುಮುಟ್ಟಿತ್ತು.

ಸಂಬಂಧಿಕರಿಂದ ಠಾಣೆಗೆ ಮುತ್ತಿಗೆ: ಆರೂವರೆ ತಿಂಗಳ ಗರ್ಭಿಣಿ ಮಹಿಳೆಯನ್ನು ಅತ್ಯಾಚಾರಕ್ಕೆ ಯತ್ನಿಸಿ ಬರ್ಬರವಾಗಿ ಚರ್ಚಿ ಕೊಲೆ ಮಾಡಿದ ಆರೋಪಿಯ ಮುಖವನ್ನು ತೋರಿಸಿ ಎಂದು ಆಗ್ರಹಿಸಿ ಮೃತ ಮಹಿಳೆಯ ಪತಿಯ ಸಂಬಂಧಿಕರು ಮಲ್ಪೆಯಿಂದ ತಂಡವಾಗಿ ಬಂದು ಕುಂದಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆಯೂ ಭಾನುವಾರ ಸಂಜೆ ನಡೆದಿದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಬೀದಿಯಲ್ಲಿ ಬಹಿರಂಗ ಮೆರವಣಿಗೆ ಮಾಡಬೇಕು, ಇನ್ನು ಮುಂದೆ ಯಾರೂ ಈ ರೀತಿಯ ದುಷ್ಕೃತ್ಯ ನಡೆಸಬಾರದು ಎಂದು ಮುತ್ತಿ‌ಉಗೆ ಹಾಕಿದ ಸಂಬಂಧಿಕರು ಆಗ್ರಹಿಸಿದರು. ಮೃತರ ಕುಟುಂಬಕ್ಕೆ ನ್ಯಾಯಕೊಡಿಸುವ ಭರವಸೆ ಸಿಕ್ಕ ನಂತರ ಮುತ್ತಿಗೆ ಹಿಂದೆಗೆದುಕೊಳ್ಳಲಾಯಿತು.

ಈ ಸಂದರ್ಭ ಡಿವೈ‌ಎಸ್ಪಿ ಎಂ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ಪಿ.ಎಂ.ದಿವಾಕರ ಹಾಗೂ ಉಪನಿರೀಕ್ಷಕ ನಾಸೀರ್ ಹುಸೇನ್ ಮುತ್ತಿಗೆ ಹಾಕಿದವರನ್ನು ಸಮಾಧಾನಪಡಿಸಿದರು.

Write A Comment