ಕನ್ನಡ ವಾರ್ತೆಗಳು

ಗೋಪಾಡಿ ಮಹಿಳೆ ಕೊಲೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆಯಾಗಲಿ: ನ್ಯಾಯಕ್ಕಾಗಿ ಬೀದಿಗಿಳಿದ ಮಹಿಳೆಯರು

Pinterest LinkedIn Tumblr

ಕುಂದಾಪುರ: ಗೋಪಾಡಿ ನಿವಾಸಿ ಇಂದಿರಾ ಕೊಲೆಯಲ್ಲಿ ಈಗ ಬಂಧಿತ ಆರೋಪಿಯ ಜೊತೆ ಇನ್ನೂ ಇಬ್ಬರು ಇದ್ದಾರೆ. ಅವರನ್ನು ಬಂಧಿಸಬೇಕು. ಆರೋಪಿಯ ಜೊತೆಯಲ್ಲಿ ಸ್ಥಳದ ಮಹಜರು ನಡೆಯಬೇಕು. ಆರೋಪಿಗೆ ನೇಣು ಶಿಕ್ಷೆಯಾಗಬೇಕು, ಮಹಿಳೆಯರಿಗೆ ರಕ್ಷಣೆ ಸಿಗಬೇಕು ಎನ್ನುವ ಒಕ್ಕೋರಲ ಮಹಿಳಾ ಆಗ್ರಹ ಗುರುವಾರ ಕುಂದಾಪುರದಲ್ಲಿ ಕಂಡು ಬಂತು.

ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ನೇತೃತ್ವದಲ್ಲಿ, ಸಾಂತ್ವಾನ ಮಹಿಳಾ ಸಹಾಯವಾಣಿ ಕೇಂದ್ರ ಕುಂದಾಪುರ, ಸ್ತ್ರೀಶಕ್ತಿ ಸಂಘಟನೆಗಳು, ವಿವಿಧ ಮಹಿಳಾ ಸಂಘಟನೆಗಳು, ಹಾಗೂ ಗೋಪಾಡಿಯ ಸಾರ್ವಜನಿಕರು ಇಂದಿರಾ ಕೊಲೆ ಆರೋಪಿಗೆ ಉಗ್ರ ಶಿಕ್ಷೆಯಾಗಬೇಕು, ಪ್ರಕರಣದ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುವ ಸಂದರ್ಭ ಕಂಡು ಬಂದ ದೃಶ್ಯಗಳು.

Ladies_ Protest_ Gopadi case Ladies_ Protest_ Gopadi case (1) Ladies_ Protest_ Gopadi case (2) Ladies_ Protest_ Gopadi case (3) Ladies_ Protest_ Gopadi case (4) Ladies_ Protest_ Gopadi case (5) Ladies_ Protest_ Gopadi case (6) Ladies_ Protest_ Gopadi case (7) Ladies_ Protest_ Gopadi case (8) Ladies_ Protest_ Gopadi case (9) Ladies_ Protest_ Gopadi case (10) Ladies_ Protest_ Gopadi case (11) Ladies_ Protest_ Gopadi case (12) Ladies_ Protest_ Gopadi case (13) Ladies_ Protest_ Gopadi case (14) Ladies_ Protest_ Gopadi case (15) Ladies_ Protest_ Gopadi case (16) Ladies_ Protest_ Gopadi case (17) Ladies_ Protest_ Gopadi case (18) Ladies_ Protest_ Gopadi case (19)

ಗರ್ಭಿಣಿ ಮಹಿಳೆಯನ್ನು ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಪ್ರಶಾಂತನ ಪರ ಕುಂದಾಪುರದ ಯಾವ ವಕೀಲರು ವಕಾಲತ್ತು ಮಾಡಬಾರದು. ಮಹಿಳೆಯರ ಪರ ನಮ್ಮ ನ್ಯಾಯವಾದಿಗಳು ನಿಲ್ಲಬೇಕು ಎಂದು ಆಗ್ರಹಿಸಿದ ಮಹಿಳೆಯರು ಕುಂದಾಪುರ ಬಾರ್ ಅಸೋಸಿಯೇಶನ್‌ಗೆ ಮನವಿ ಸಲ್ಲಿಸಿರು. ನಂತರ ಕುಂದಾಪುರದ ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಮತ್ತು ತಹಶೀಲ್ದಾರ್ ಗಾಯತ್ರಿ ನಾಯಕ್ ಅವರಿಗೆ ಮನವಿ ಸಲ್ಲಿಸಿ, ಇವತ್ತು ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರದ ಪ್ರಕರಣ ಜಾಸ್ತಿಯಾಗುತ್ತಿದೆ. ಇಂಥಹ ಸಂದರ್ಭಗಳಲ್ಲಿ ಬಂಧಿತ ಆರೋಪಿಗಳಿಗೆ ಕಠಿಣ ಶಿಕ್ಷೆಯಾದರೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತದೆ. ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ, ಗೋಪಾಡಿ ಬಡ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಸರ್ಕಾರ ಮಟ್ಟದಿಂದ ಗರಿಷ್ಠ ಮೊತ್ತದ ಪರಿಹಾರ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ನಂತರ ಪೊಲೀಸ್ ಠಾಣೆಗೆ ತೆರಳಿದ ಮಹಿಳೆಯರು ವೃತ್ತ ನಿರೀಕ್ಷಕ ದಿವಾಕರ್ ಅವರಿಗೆ ಮನವಿ ಸಲ್ಲಿಸಿ, ಈ ಕೃತ್ಯದ ಹಿಂದೆ ಆರೋಪಿ ಪ್ರಶಾಂತ ಜೊತೆಯಲ್ಲಿ ಇನ್ನೂ ಇಬ್ಬರು ಇದ್ದಾರೆ ಎನ್ನಲಾಗಿದೆ. ಅವರನ್ನು ಬಂಧಿಸಿ ವಿಚಾರಣೆ ಮಾಡಬೇಕು. ಹಾಗೂ ಸ್ಥಳದ ಮಹಜರು ನಡೆಸಬೇಕು. ಆ ಸಂದರ್ಭ ನಾವು ಯಾವುದೇ ತೊಂದರೆ ಕೊಡುವುದಿಲ್ಲ. ಒಟ್ಟಾರೆಯಾಗಿ ಅಪರಾಧಿಗಳಿಗೆ ನೇಣು ಶಿಕ್ಷೆಯಾಗಬೇಕು. ಒಂದು ವೇಳೆ ಆರೋಪಿ ಜಾಮೀನು ಮೂಲಕ ಹೊರಗೆ ಬಂದರೆ ನಾವು ಸುಮ್ಮನೆ ಮಾತ್ರ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ ಪ್ರತಿಭಟನಾಕಾರರು, ಈ ಪ್ರಕರಣದಲ್ಲಿ ಇನ್ನೂ ಕೆಲವರು ಇದ್ದಾರೆ ಎನ್ನಲಾಗುತ್ತಿದ್ದು ಅವರನ್ನು ತಕ್ಷಣ ಬಂಧಿಸಿ ವಿಚಾರಿಸಬೇಕು. ಆರೋಪಿ ಪ್ರಶಾಂತ ಮಾನಸಿಕ ಅಸ್ವಸ್ಥ ಎಂದು ಬಿಂಬಿಸುವ ಕಾರ್ಯಗಳು ನಡೆಯುತ್ತಿದ್ದು ಆತ ಸರಿಯಾಗಿಯೇ ಇದ್ದಾನೆ. ಹಾಗೂ ನಿನ್ನೆ ಸಂಜೆ ಗೋಪಾಡಿ ಮನೆ ಸಮೀಪ ಮೂರು ಕಾರುಗಳು ಅನುಮಾನಸ್ಪದವಾಗಿ ಓಡಾಡಿವೆ. ಅಲ್ಲಿ ವಿದ್ಯುತ್ ಸಂಪರ್ಕ ಕೂಡಾ ಇಲ್ಲ. ಈ ಬಗ್ಗೆ ಕೂಡಾ ಇಲಾಖೆ ಗಮನ ಹರಿಸಬೇಕು. ನ್ಯಾಯಯುತ ತನಿಖೆಗೆ ನಾವು ಎಲ್ಲ ರೀತಿಯಲ್ಲಿಯ ಸಹಕಾರ ನೀಡುತ್ತೇವೆ ಎಂದು ಆಗ್ರಹಿಸಿದರು.

ಪ್ರತಿಭಟನಾ ನಿರತರ ಮನವಿಯನ್ನು ಆಲಿಸಿದ ವೃತ್ತ ನಿರೀಕ್ಷಕ ದಿವಾಕರ್, ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗುತ್ತಿದೆ. ತನಿಖೆ ಪ್ರಗತಿಯಲ್ಲಿ ಇರುವುದರಿಂದ ಯಾವುದೇ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಇಡೀ ಪ್ರಕರಣದ ಕುರಿತಂತೆ ತನಿಖೆ ನಡೆಯುತ್ತಿದೆ. ಸ್ಥಳದ ಮಹಜರು ಕಾರ್ಯವೂ ನಡೆಯಲಿದೆ. ಪ್ರಶಾಂತನ ವೈದ್ಯಕೀಯ ಪರೀಕ್ಷೆಗಳು ಮಣಿಪಾಲದಲ್ಲಿ ಅತ್ಯಾಧುನಿಕ ಯಂತ್ರಗಳ ಮೂಲಕ ನಡೆಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್, ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿಶೋರ್ ಕುಮಾರ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ, ಜಿ.ಪಂ. ಸದಸ್ಯ ಗಣಪತಿ ಟಿ.ಶ್ರೀಯಾನ್ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

Write A Comment