ಕರಾವಳಿ

ವಾಟ್ಸಾಪ್‌ನಲ್ಲಿ ಬಿ‌ಎಸ್‌ವೈ,ಶೋಭಾ ಅವಹೇಳನ: ಮೂವರು ಬಿಜೆಪಿ ಮುಖಂಡರ ಮೇಲೆ ಕೇಸ್

Pinterest LinkedIn Tumblr

ಕುಂದಾಪುರ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯ ಅಶ್ಲೀಲ ಫೋಟೊಗಳನ್ನು ವಾಟ್ಸ್ಯಾಪ್ ನಲ್ಲಿ ರವಾನೆ ಮಾಡಿರುವ ಕುಂದಾಪುರದ ಮೂವರು ಬಿಜೆಪಿ ಮುಖಂಡರ ವಿರುದ್ದ ಉಡುಪಿ ಸೆನ್ ಅಪರಾಧ ಪೋಲಿಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಭಾರತೀಯ ಜನತಾ ಪಕ್ಷದ ಕುಂದಾಪುರ ಕ್ಷೇತ್ರ ಸಮಿತಿಯ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ಅವರು ಬಿಜೆಪಿಯ ಮೂವರು ಮುಖಂಡರುಗಳಾದ ರಾಜೇಶ್ ಕಾವೇರಿ, ಬಿ.ಕಿಶೋರ್ ಕುಮಾರ್ ಮತ್ತು ರಾಜು ಪೂಜಾರಿ ಅವರ ವಿರುದ್ದ ದೂರು ನೀಡಿದ್ದಾರೆ.

(ಬಿ. ಕಿಶೋರ್ ಕುಮಾರ್)

(ರಾಜೇಶ್ ಕಾವೇರಿ)

ದೂರಿನಲ್ಲಿ ಏನಿದೆ..?
ನವೆಂಬರ್ 13 ರ ಬಳಿಕ ‘ಬಿ.ಜೆ.ಪಿ. ಕುಂದಾಪುರ’ ಎನ್ನುವ ಅನಧಿಕೃತ ವಾಟ್ಸ್ ಅಪ್ ಗ್ರೂಪ್‌‌ನಲ್ಲಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಚಿಕ್ಕಮಂಗಳೂರು ಕ್ಷೇತ್ರದ ಸಂಸದೆ ಶೋಭಾ ಕರಾಂದ್ಲಾಜೆ ರವರ ಬಗ್ಗೆ ಅವಹೇಳನಕಾರಿಯಾಗಿ ವಾಟ್ಸ್ಅಪ್ ನಲ್ಲಿ ಬರಹಗಳನ್ನು ಪೋಸ್ಟ್ ಮಾಡಿದ್ದು, ಅಲ್ಲದೇ ಅವರಿಬ್ಬರ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲವಾಗಿ ವಾಟ್ಸ್ಅಪ್ ಮೂಲಕ ಕಳುಹಿಸಿ, ಮಾನ ಹಾನಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರಾಜೇಶ್ ಕಾವೇರಿ ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದು, ಬಿ. ಕಿಶೋರ್ ಕುಮಾರ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು ನಾವು ಗ್ರೂಫ್ ಮೂಲಕ ನಾವು ಫೋಟೋ ಕಳಿಸಿಲ್ಲ. ಯಾರು ಕಳಿಸಿದ್ದಾರೆಂಬ ಮಾಹಿತಿಯೂ ಇಲ್ಲ. ಪ್ರಕರಣ ದಾಖಲಾದ ಬಳಿಕವೇ ಈ ಬಗ್ಗೆ ಮಾಹಿತಿ ತಿಳಿದಿದೆ ಎಂದಿದ್ದಾರೆ.

ಸುರೇಶ್ ಶೆಟ್ಟಿ ದೂರಿನಂತೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2017 ಕಲಂ:67 ಐ.ಟಿ.ಆಕ್ಟ್ ಮತ್ತು 507 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಮತ್ತೆ ಭಿನ್ನಮತ..?
ಕುಂದಾಪುರ ಬಿಜೆಪಿಯಲ್ಲಿ ಭಿನ್ನಮತ ಕಳೆದ ಕೆಲ ವರ್ಷಗಳಿಂದಲೂ ಇತ್ತು. ಹಾಲಾಡಿ ಬಣ ಹಾಗೂ ಮೂಲ ಬಿಜೆಪಿ ಬಣಗಳೆಂಬ ಬಣ ರಾಜಕೀಯವೂ ಮುಸುಕಿನ ಗುದ್ದಾಟ ಮಾಡುತ್ತಿತ್ತು. ನ.13 ರಂದು ಕುಂದಾಪುರದಲ್ಲಿನಡೆದ ಪರಿವರ್ತನಾ ರ್‍ಯಾಲಿಯಲ್ಲಿ ಅಸಮಾಧಾನ ಸ್ಪೋಟಗೊಂಡು ಬಿ.ಎಸ್ ಯಡಿಯೂರಪ್ಪ ಸಮ್ಮುಖದಲ್ಲಿಯೇ ಹಾಲಾಡಿ ವಿರುದ್ಧ ಕೆಲ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು ಹೊಯ್-ಕೈ ನಡೆಯುವರೆಗೂ ಮುಂದುವರೆದಿತ್ತು.

ಇದನ್ನೂ ಓದಿರಿ: ಪರಿವರ್ತನಾ ಯಾತ್ರೆಯಲ್ಲಿ ಬಿ‌ಎಸ್‌ವೈ ಎದುರೇ ಕಾರ್ಯಕರ್ತರ ಈ ಪರಿ‘ವರ್ತನೆ’! (ವಿಡಿಯೋ)

ಹಾಲಾಡಿ ವಿರುದ್ಧ ಮಾತನಾಡಿದ್ರೇ ಪಕ್ಷದಿಂದ ಶಿಸ್ತು ಕ್ರಮ: ಬಿ.ಎಸ್ ಯಡಿಯೂರಪ್ಪ

Comments are closed.