ಕರಾವಳಿ

ಪರಿವರ್ತನಾ ಯಾತ್ರೆಯಲ್ಲಿ ಬಿ‌ಎಸ್‌ವೈ ಎದುರೇ ಕಾರ್ಯಕರ್ತರ ಈ ಪರಿ‘ವರ್ತನೆ’! (ವಿಡಿಯೋ)

Pinterest LinkedIn Tumblr

ಕುಂದಾಪುರ: ಕಳೆದ ಹಲವು ವರ್ಷಗಳಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿಜೆಪಿ ಬಣಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತವು ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎದುರೇ ಸ್ಪೋಟಗೊಂಡಿದೆ.

ಈಗಾಗಲೇ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಪ್ರೆಸ್ ಮೀಟ್ ಕರೆದು ತಾನು ಬಿಜೆಪಿ ಬರುವುದಾಗಿ ಘೋಷಿಸಿದ್ದಾರೆ. ಯಡಿಯೂರಪ್ಪ ಕೂಡಾ ಹಾಲಾಡಿ ನಮ್ಮ ನಾಯಕರು ಎಂದು ಘೋಷಿಸಿದ್ದಾರೆ. ಆದ್ರೆ ಕುಂದಾಪುರದಲ್ಲಿನ ಮೂಲ ಬಿಜೆಪಿ ಕಳೆದ ಹಲವು ದಿನಗಳಿಂದ ಹಾಲಾಡಿ ಬಿಜೆಪಿ ಬರುವುದಕ್ಕೆ ವಿರೋಧ ಮಾಡ್ತಾನೆ ಇತ್ತು.

ಇಂದು ನಡೆದ ಪರಿವರ್ತನಾ ಸಭೆ ಒಂದು ಲೆಕ್ಕದಲ್ಲಿ ಇಬ್ಬರು ಬಣದ ನಡುವಿನ ಪ್ರತಿಷ್ಟೆಯೂ ಆಗಿತ್ತು. ಹಾಲಾಡಿ ಸಾಮಾನ್ಯ ಕಾರ್ಯಕರ್ತನಾಗಿ ಪ್ರೇಕ್ಷಕರ ಆಸನದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದರು. ಆದರೇ ಸಮಾರಂಭಕ್ಕೆ ಯಡಿಯೂರಪ್ಪನವರ ಆಗಮನವಾದಂತೆಯೇ ಹಾಲಾಡಿ ಹಾಗೂ ಮೂಲ ಬಿಜೆಪಿ ಬಣದ ನಡುವೆ ಮಾತಿನ ಚಕಮಕಿ ನಡೆಯಿತು. ಹಾಲಾಡಿ ಪರ ಅಭಿಮಾನಿಗಳು ಘೋಷಣೆ ಕೂಗಿದರೇ ಇತ್ತ ಬಿಜೆಪಿ ಕಾರ್ಯಕರ್ತರು ಹಾಲಾಡಿ ವಿರುದ್ಧ ಘೋಷಣೆ ಕೂಗಿದ್ದು ಮಾತ್ರವಲ್ಲದೇ ಹಾಲಾಡಿ ವಿರುದ್ಧದ ಬರಹವಿದ್ದ ಬ್ಯಾನರ್ ಪ್ರದರ್ಶಿಸಿದರು. ಸಮಾವೇಶದಲ್ಲಿ ಹಾಲಾಡಿ ವಿರೋಧಿಗಳ ವಿರುದ್ದ ಯಡಿಯೂರಪ್ಪ ಬಹಿರಂಗವಾಗಿಯೇ ಕಿಡಿಕಾರಿದರು. ಹಾಲಾಡಿ ನಮ್ಮ ನಾಯಕ ಇದನ್ನು ವಿರೋಧಿಸುವವರು ಪಕ್ಷ ಬಿಟ್ಟು ಹೋಗಿ, ಗೂಂಡಾ ಪ್ರವ್ರತ್ತಿಯವರು ಇಲ್ಲಿರೋದು ಬೇಡ. ಪೊಲೀಸರೇ ಅವರನ್ನು ಕಳುಹಿಸಿ ಎಂದು ಸೂಚನೆ ಕೊಟ್ಟರು. ಅಲ್ಲದೇ ಹಾಲಾಡಿ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಖಡಕ್ ಮಾತಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಿಂದ ಹೊರ ನಡೆಯಲು ಮುಂದಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರನ್ನು ತಡೆದ ಬಿ.ಎಸ್.ವೈ. ದಯವಿಟ್ಟು ಕುಳಿತುಕೊಳ್ಳಿ ಎಂದು ಮನವಿ ಮಾಡಿದ್ರು. ಅಲ್ಲದೇ ಹಾಲಾಡಿ ಅಭಿಮಾನಿಗಳು ಅವರನ್ನು ಸಮಾಧಾನ ಪಡಿಸಿದ್ರು.

ಕಾರ್ಯಕ್ರಮ ಮುಗಿದ ಬಳಿಕ ಇತ್ತಂಡಗಳ ಕಾರ್ಯಕರ್ತರು ಹೊಡೆದಾಟಕ್ಕೆ ಮುಂದಾದರು. ಪೊಲೀಸರು ಇದನ್ನು ತಡೆದು ಕಾರ್ಯಕರ್ತರನ್ನು ಚದುರಿಸಿದರು.

 

Comments are closed.